For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ '2.0' ವಿರೋಧಿಸಿ ವಾಟಳ್ ನಾಗರಾಜ್ ಪ್ರತಿಭಟನೆ

  |
  ರಜನಿಕಾಂತ್ '2.0' ವಿರೋಧಿಸಿ ವಾಟಳ್ ನಾಗರಾಜ್ ಪ್ರತಿಭಟನೆ | Oneindia Kannada

  ಕರ್ನಾಟಕದಲ್ಲಿ ಪರಭಾಷೆ ಚಿತ್ರಗಳ ಹಾವಳಿಯನ್ನ ವಿರೋಧಿಸಿ ಕನ್ನಡ ಹೋರಾಟಗಾರ ವಾಟಳ್ ನಾಗರಾಜ್ ಇಂದು (ನವೆಂಬರ್ 29) ಬೆಂಗಳೂರಿನ ಊರ್ವಶಿ ಚಿತ್ರಮಂದಿರದ ಬಳಿ ಪ್ರತಿಭಟನೆ ಮಾಡಿದ್ರು.

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ '2.0' ಸಿನಿಮಾ ಇಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಕರ್ನಾಟಕದಲ್ಲಿ ಅತಿ ಹೆಚ್ಚು ಸಂಖ್ಯೆಯ ಥಿಯೇಟರ್ ನಲ್ಲಿ ರಿಲೀಸ್ ಆಗಿದೆ ಎಂಬ ಕಾರಣಕ್ಕೆ '2.0' ಚಿತ್ರದ ಪ್ರದರ್ಶನವನ್ನ ವಿರೋಧಿಸಿದ್ದಾರೆ.

  ಚಿತ್ರ ಪ್ರದರ್ಶನದ ವೇಳೆ ಚಿತ್ರಮಂದಿರಕ್ಕೆ ನುಗ್ಗಿ ಶೋ ನಿಲ್ಲಿಸುವ ಪ್ರಯತ್ನ ಮಾಡಿದ್ರು. ಈ ವೇಳೆ ಸ್ಥಳದಲ್ಲೇ ಪೊಲೀಸರು ವಾಟಳ್ ನಾಗರಾಜ್ ಅವರನ್ನ ತಡೆದ, ವಶಕ್ಕೆ ಪಡೆದುಕೊಂಡರು.

  ತಮಿಳು ನಟ ಸಿಂಬು ಮಾತಿಗೆ ವಾಟಾಳ್ ನಾಗರಾಜ್ ಕೊಟ್ಟ ಪ್ರತಿಕ್ರಿಯೆ ಹೀಗಿದೆ

  ಬಳಿಕ ಮಾತನಾಡಿದ ವಾಟಳ್ ನಾಗರಾಜ್, ''ಕನ್ನಡ ನೆಲದಲ್ಲಿ ಬೇರೆ ಭಾಷೆಯ ಚಿತ್ರಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆಯಾಗುತ್ತಿರುವುದಕ್ಕೆ ಕಾರಣ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ಅಲ್ಲಿರುವ ಅನೇಕರು ತಮಿಳು ಮತ್ತು ಬೇರೆ ಭಾಷೆಯ ಚಿತ್ರಗಳನ್ನ ತಯಾರಿಸುತ್ತಾರೆ. ಪರಭಾಷೆ ಚಿತ್ರಗಳನ್ನ ತಂದು ಬಿಡುಗಡೆ ಮಾಡ್ತಾರೆ, ಇದರಿಂದ ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ'' ಎಂದು ಕಿಡಿಕಾರಿದರು.

  ಕಾವೇರಿ ವಿವಾದ: ವಾಟಾಳ್ ಹೇಳಿಕೆಗೆ ರಜನಿಕಾಂತ್ ಕೊಟ್ಟ ಉತ್ತರ ನೋಡಿ

  ಇನ್ನು 'ವಾಣಿಜ್ಯ ಮಂಡಳಿಯ ಕ್ರಮವನ್ನ ವಿರೋಧಿಸಿ ಡಿಸೆಂಬರ್ 1 ರಂದು ಫಿಲ್ಮ್ ಚೇಂಬರ್ ಎದುರು ಪ್ರತಿಭಟನೆ ಮಾಡಲಿದ್ದೇವೆ ಮತ್ತು ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕಲಿದ್ದೇವೆ' ಎಂದು ತಿಳಿಸಿದರು.

  ಈ ಕಡೆ ರಜನಿಕಾಂತ್ ಅಭಿನಯದ '2.0' ಸಿನಿಮಾ ಕರ್ನಾಟಕ ರಾಜ್ಯದಲ್ಲಿ 900ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿದೆ. ಅಂಬರೀಶ್ ನಿಧನದ ಹಿನ್ನೆಲೆ ಚಿತ್ರಮಂದಿರದ ಬಳಿ ಸಂಭ್ರಮ ಬೇಡ ಎಂದು ರಜನಿಕಾಂತ್ ಸೂಚಿಸಿದ್ದರು. ಹಾಗಾಗಿ, ಎಂದಿನಂತರ ರಜನಿ ಚಿತ್ರಗಳಿದ್ದ ಸಂಭ್ರಮ, ಕಟೌಟ್ ಇಂದು ಇರಲಿಲ್ಲ.

  English summary
  Kannada Chalavali Vatal Paksha leader Vatal Nagaraj staged a protest outside Urvashi Theater in Bengaluru against the release of Rajinikanth starrer '2.0'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X