For Quick Alerts
  ALLOW NOTIFICATIONS  
  For Daily Alerts

  'ವೇದಾ' ಆಡಿಯೋ ಲಾಂಚ್‌ಗೆ ದಿನಾಂಕ, ಸ್ಥಳ ನಿಗದಿ: ಅದ್ಧೂರಿಯಾಗಿರಲಿದೆ ಕಾರ್ಯಕ್ರಮ

  By ಚಿತ್ರದುರ್ಗ ಪ್ರತಿನಿಧಿ
  |

  ಶಿವರಾಜ್ ಕುಮಾರ್ ನಟನೆಯ 125ನೇ ಸಿನಿಮಾ 'ವೇದ' ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಅಭಿಮಾನಿಗಳಲ್ಲಿದೆ.

  ಸಿನಿಮಾದ ಟೀಸರ್, ಮೋಷನ್ ಪೋಸ್ಟರ್‌ಗಳು ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿವೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಈಗಾಗಲೇ ಘೋಷಿಸಲಾಗಿದ್ದು, ಚಿತ್ರತಂಡವು ಪ್ರಚಾರ ಕಾರ್ಯಕ್ರಮಗಳನ್ನು ಆರಂಭಿಸಿದೆ.

  ಶಿವರಾಜ್ ಕೆ ಆರ್ ಪೇಟೆ 'ಧಮಾಕ': ಯಂಗ್ ರೆಬೆಲ್ ಸ್ಟಾರ್ ಬೆಂಬಲ! ಶಿವರಾಜ್ ಕೆ ಆರ್ ಪೇಟೆ 'ಧಮಾಕ': ಯಂಗ್ ರೆಬೆಲ್ ಸ್ಟಾರ್ ಬೆಂಬಲ!

  ಈಗಾಗಲೇ ರಾಯಚೂರಿನಲ್ಲಿ ಒಂದು ಪ್ರೀ ರಿಲೀಸ್ ಇವೆಂಟ್ ನಡೆಸಿರುವ ಚಿತ್ರತಂಡ, ನಾಳೆ ಅಂದರೆ ಡಿಸೆಂಬರ್ 10 ರಂದು ಮಂಗಳೂರಿನಲ್ಲೊಂದು ಪ್ರೀ ರಿಲೀಸ್ ಇವೆಂಟ್ ನಡೆಸಲಿದೆ. ಇವುಗಳ ಜೊತೆಗೆ ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ಆಡಿಯೋ ಲಾಂಚ್‌ಗೂ ಸಿದ್ಧತೆ ನಡೆದಿದ್ದು, ಈ ಬಗ್ಗೆ ಸಿನಿಮಾದ ನಿರ್ದೇಶಕ ಹರ್ಷ ಮಾಹಿತಿ ನೀಡಿದ್ದಾರೆ.

  ಡಿಸೆಂಬರ್ 15 ರಂದು ಕಾರ್ಯಕ್ರಮ

  ಡಿಸೆಂಬರ್ 15 ರಂದು ಕಾರ್ಯಕ್ರಮ

  ಡಿಸೆಂಬರ್ 15 ರಂದು ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಆವರಣದಲ್ಲಿ 'ವೇದ' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಂದು ಶಿವರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಚಿತ್ರದ ನಿರ್ದೇಶಕ ಹರ್ಷ ತಿಳಿಸಿದ್ದಾರೆ.

  ವಿದೇಶಗಳಲ್ಲಿಯೂ ಸಿನಿಮಾ ಬಿಡುಗಡೆ

  ವಿದೇಶಗಳಲ್ಲಿಯೂ ಸಿನಿಮಾ ಬಿಡುಗಡೆ

  ನಗರದ ಹಳೆ ಮಾಧ್ಯಮ ಶಾಲಾ ಆವರಣದಲ್ಲಿ ಡಿಸೆಂಬರ್ 09 ಶುಕ್ರವಾರ ವೀಕ್ಷಣೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಡಿ.23 ಕ್ಕೆ ರಾಜ್ಯದ 250 ರಿಂದ 300 ಚಿತ್ರಮಂದಿರಗಳಲ್ಲಿ 'ವೇದ' ಚಿತ್ರ ತೆರೆ ಕಾಣಲಿದೆ. ತೆಲುಗು, ತಮಿಳಿನಲ್ಲಿಯೂ ಚಿತ್ರ ಪ್ರದರ್ಶನಗೊಳ್ಳಲಿದ್ದು, ಸೌದಿ, ದುಬೈ, ಆಸ್ಟ್ರೇಲಿಯಾಗಳಲ್ಲಿ 'ವೇದ' ಸಿನಿಮಾ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

  ಬೆಂಗಳೂರು, ಮೈಸೂರು, ಕೇರಳಗಳಲ್ಲಿ ಚಿತ್ರೀಕರಣ

  ಬೆಂಗಳೂರು, ಮೈಸೂರು, ಕೇರಳಗಳಲ್ಲಿ ಚಿತ್ರೀಕರಣ

  ಸಾಮಾಜಿಕ ಸಂದೇಶವಿರುವ ವೇದ ಚಿತ್ರದಲ್ಲಿ ಹಾಡುಗಳು ಹಾಗೂ ಡ್ಯಾನ್ಸ್ ಗಳಿವೆ. ಹೋಮ್ ಪ್ರೊಡಕ್ಷನ್ ಸಿನಿಮಾ ಮಾಡಲು ನನ್ನ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಬಹುತೇಕ ಚಿತ್ರೀಕರಣವಾಗಿದ್ದು, ಕೇರಳದಲ್ಲಿಯೂ ಶೂಟಿಂಗ್ ನಡೆದಿದೆ. ಇದು ಶಿವರಾಜ್ ಕುಮಾರ್ ಅವರು ಅಭಿನಯಿಸಿದ 125 ನೇ ಚಿತ್ರವಾಗಿದೆ ಎಂದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಸಂಘದ ಅಧ್ಯಕ್ಷ ಬಿ.ಕಾಂತರಾಜ್, ನಗರಸಭೆ ಸದಸ್ಯ ನಸ್ರುಲ್ಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  ಗೀತಾ ಶಿವರಾಜ್ ಕುಮಾರ್ ನಿರ್ಮಾಪಕಿ

  ಗೀತಾ ಶಿವರಾಜ್ ಕುಮಾರ್ ನಿರ್ಮಾಪಕಿ

  'ವೇದ' ಸಿನಿಮಾವು ಶಿವರಾಜ್ ಕುಮಾರ್ ನಟನೆಯ 125ನೇ ಸಿನಿಮಾ ಆಗಿರುವ ಜೊತೆಗೆ ಇದು ಶಿವರಾಜ್ ಕುಮಾರ್ ಅವರ ಹೋಮ್‌ ಪ್ರೊಡಕ್ಷನ್‌ನ ಮೊದಲ ಸಿನಿಮಾ ಆಗಿದೆ. ಈ ಸಿನಿಮಾಕ್ಕೆ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಗಾನವಿ ಲಕ್ಷ್ಮಣ್ ನಾಯಕಿಯಾಗಿ ನಟಿಸಿದ್ದು, ಅವರೊಟ್ಟಿಗೆ ಉಮಾಶ್ರೀ, ರಘು ಶಿವಮೊಗ್ಗ, ಚೆಲುವರಾಜ್, ಭರತ್ ಸಾಗರ್ ಇನ್ನೂ ಅನೇಕರು ನಟಿಸಿದ್ದಾರೆ. ಸಂಗೀತ ನೀಡಿರುವುದು ಅರ್ಜುನ್ ಜನ್ಯ. ಸಿನಿಮಾವು ಡಿಸೆಂಬರ್ 23 ಕ್ಕೆ ತೆರೆಗೆ ಬರಲಿದೆ.

  English summary
  Shiva Rajkumar starer Vedha movie audio launch function to be organized on December 15. Movie will release on December 23.
  Friday, December 9, 2022, 17:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X