For Quick Alerts
  ALLOW NOTIFICATIONS  
  For Daily Alerts

  ಕತ್ಲಲ್ಲಿ ಕರಡಿಗೆ ರಸಗುಲ್ಲ ತಿನ್ನಿಸಿದ ವೀಣಾ ಮಲಿಕ್!

  By ರವಿಕಿಶೋರ್
  |

  ಪಾಕಿಸ್ತಾನದ ಹಾಟ್ ಬೆಡಗಿ ವೀಣಾ ಮಲ್ಲಿಕ್ ಹಾಟ್ ಚಿತ್ರಗಳು ಮತ್ತೊಮ್ಮೆ ಸುದ್ದಿ ಮಾಡಿವೆ. ನಲ್ಲನೊಂದಿಗೆ ವೀಣಾ ಕಳ್ಳಾಟವಾಡುತ್ತಿರುವ ಚಿತ್ರಗಳಿವು. ಕೆಲವು ಚಿತ್ರಗಳು ಕತ್ತಲು ಕತ್ತಲಾಗಿದ್ದು, ಇದು ಕಳ್ಳಾಟವೋ ತಳ್ಳಾಟವೋ ಒಂದೂ ಅರಿಯೆ ನಾ ಎಂಬಂತಿವೆ. ಒಟ್ಟಿನಲ್ಲಿ ಕತ್ಲಲ್ಲಿ ಕರಡಿಗೆ ಜಾಮೂನು ತಿನ್ನಿಸಕ್ಕೆ ಆಗದಿದ್ದರೂ ರಸಗುಲ್ಲವನ್ನಂತೂ ತಿನ್ನಿಸಿದ್ದಾರೆ.

  ಅಂದಹಾಗೆ ಇದು ಕನ್ನಡದ 'ಸಿಲ್ಕ್ ಸಖತ್ ಹಾಟ್' ಚಿತ್ರದ ದೃಶ್ಯಗಳು. ಚಿತ್ರದ ಹೆಸರೇ ಹೇಳುವಂತೆ ಒಂದೊಂದು ದೃಶ್ಯಗಳು ಸಖತ್ ಹಾಟ್ ಆಗಿಯೇ ಮೂಡಿಬಂದಿವೆ. ಈ ಹಿಂದೆ ಚಿತ್ರಕ್ಕೆ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್' ಎಂದು ಹೆಸರಿಡಲಾಗಿತ್ತು. ಆದರೆ ನಿರ್ಮಾಪಕಿ ಏಕ್ತಾ ಕಪೂರ್ ಕೋರ್ಟ್ ಮೆಟ್ಟಲೇರಿದ ಬಳಿಕ ಚಿತ್ರದ ಶೀರ್ಷಿಕೆ ಬದಲಾಯಿತು.

  ಈ ಹಿಂದೊಮ್ಮೆಯೂ ಈ ಚಿತ್ರಕ್ಕೆ ಸಂಬಂಧಿಸಿದ ಹಲವು ಹಾಟ್ ದೃಶ್ಯಗಳನ್ನು ಬಿಡುಗಡೆ ಮಾಡಲಾಗಿತ್ತು. ಈಗ ಚಿತ್ರದ ಎರಡು ಹಾಡುಗಳನ್ನು ಸಾಮಾಜಿಕ ವಿಡಿಯೋ ಹಂಚಿಕೆ ತಾಣ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಎರಡು ಹಾಡುಗಳು ಸಖತ್ ಹಾಟ್ ಆಗಿವೆ. (ವಿಡಿಯೋ ನೋಡಿ)

  ಮುತ್ತು ಸಿಹಿ ಮುತ್ತು ಕೊಡು ನಲ್ಲನೆ

  ಮುತ್ತು ಸಿಹಿ ಮುತ್ತು ಕೊಡು ನಲ್ಲನೆ

  ಒಂದು ಹಾಡಿನ ಸಾಹಿತ್ಯ "ಮುತ್ತು ಸಿಹಿ ಮುತ್ತು ಕೊಡು ನಲ್ಲನೆ ಸುಖವ ಕೊಡು ಸುಖವಾ ನಲ್ಲನೆ" ಎಂದಿದ್ದರೆ ಇನ್ನೊಂದು ಹಾಡಿನ ಸಾಹಿತ್ಯ "ಉಂಡಾಡಿ ಗುಂಡಮ್ಮ ನಾ ರಂಗೀನು ರಂಗಮ್ಮ" ಎಂದಿದೆ. ಈ ಎರಡು ಹಾಡುಗಳು ಈಗ ಯೂಟ್ಯೂಬ್ ನಲ್ಲಿ ಸಖತ್ ಗದ್ದಲ ಎಬ್ಬಿಸಿವೆ.

  ಯೂಟ್ಯೂಬ್ ವೀಕ್ಷಕರಿಗೆ ಹಬ್ಬ

  ಯೂಟ್ಯೂಬ್ ವೀಕ್ಷಕರಿಗೆ ಹಬ್ಬ

  "ಮುತ್ತು ಸಿಹಿ ಮುತ್ತು ಕೊಡು ನಲ್ಲನೆ..." ಎಂಬ ಹಾಡಂತೂ ಯೂಟ್ಯೂಬ್ ವೀಕ್ಷಕರನ್ನು ಭಾರಿ ಮಟ್ಟದಲ್ಲಿ ಸೆಳೆದುಹಾಕಿದೆ. ಇಷ್ಟಕ್ಕೂ ಈ ಹಾಡಿನಲ್ಲಿ ಅಂತಹದ್ದೇನಿದೆ ಅಂದರೆ...ಅಲ್ಲೇ ಇರೋದು ನೋಡಿ ಮಜಾ. ಪಡ್ಡೆಗಳಿಗೆ ಏನೂ ಬೇಕು ಅದನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ.

  ನತ ಅಕ್ಷಯ್ ಲೀಲಾಜಾಲ ಅಭಿನಯ

  ನತ ಅಕ್ಷಯ್ ಲೀಲಾಜಾಲ ಅಭಿನಯ

  ನಟ ಅಕ್ಷಯ್ ಜೊತೆ ಮುತ್ತಿನ ಮಳೆಗರೆದಿದ್ದಾರೆ ವೀಣಾ ಮಲಿಕ್. ಅಕ್ಷಯ್ ಅವರಿಗೆ ಇದು ಚೊಚ್ಚಲ ಅನುಭವವಾದರೂ ಈ ಹಾಡಿನಲ್ಲಂತೂ ಲೀಲಾಜಾಲವಾಗಿ ಅಭಿನಯಿಸಿದ್ದಾರೆ.

  ವೀಣಾ ಮಲಿಕ್ ಅವರಿಗೂ ಚೊಚ್ಚಲ ಅನುಭವ

  ವೀಣಾ ಮಲಿಕ್ ಅವರಿಗೂ ಚೊಚ್ಚಲ ಅನುಭವ

  ಅಂದಹಾಗೆ ವೀಣಾ ಮಲಿಕ್ ಅವರಿಗೂ ಇದು ಚೊಚ್ಚಲ ಅನುಭವ. ಅಂದರೆ ತೆರೆಯ ಮೇಲೆ. ಅವರು ಅಷ್ಟೇ ಚುಂಬನ ದೃಶ್ಯಗಳಲ್ಲಿ ಅರಳಿದೆ ಅರಳಿದೆ ಮುಡುಡಿದ ತಾವರೆ ಅರಳಿದೆ...

  ಹತ್ತು ಸೆಕೆಂಡುಗಳ ಕಾಲ ಲಿಪ್ ಲಾಕ್

  ಹತ್ತು ಸೆಕೆಂಡುಗಳ ಕಾಲ ಲಿಪ್ ಲಾಕ್

  ಸರಿಸುಮಾರು ಒಂದು ನಿಮಿಷಕ್ಕೂ ಅಧಿಕ ಸಮಯದ ಈ ವಿಡಿಯೋ ಕ್ಲಿಪ್ಪಿಂಗ್ ಯೂಟ್ಯೂಬ್ ನಲ್ಲಿ ಹೊಸ ಅಲೆ ಎಬ್ಬಿಸಿದೆ. ಹಾಡಿನಲ್ಲಿ ಹತ್ತು ಸೆಕೆಂಡ್ ಗಳ ಕಾಲ ಅಕ್ಷಯ್ ಹಾಗೂ ವೀಣಾ ಮೈಮರೆತು ಚುಂಬಿಸಿಕೊಂಡಿದ್ದಾರೆ.

  ವೀಣಾ ಮೈಸಿರಿ ಪಡ್ಡೆಗಳಿಗೆ ಬೋನಸ್

  ವೀಣಾ ಮೈಸಿರಿ ಪಡ್ಡೆಗಳಿಗೆ ಬೋನಸ್

  ಚಿತ್ರದಲ್ಲಿ ಇವರಿಬ್ಬರ ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರ ಚೆನ್ನಾಗಿ ವರ್ಕ್ ಔಟ್ ಆಗಿದೆ. ಈ ಹಾಟ್ ದೃಶ್ಯಗಳ ಜೊತೆಗೆ ವೀಣಾ ಅವರ ಮೈಸಿರಿಯೂ ಅನಾವರಣಗೊಂಡಿದ್ದು ಪಡ್ಡೆಗಳ ಪಾಲಿಗೆ ಬೋನಸ್ ಸಿಕ್ಕಂತಾಗಿದೆ.

  ವೀಣಾ ಮಲಿಕ್ ಗೆ ಒಂದು ಕೋಟಿ ರುಸುಮು

  ವೀಣಾ ಮಲಿಕ್ ಗೆ ಒಂದು ಕೋಟಿ ರುಸುಮು

  ಮೂಲಗಳ ಪ್ರಕಾರ ವೀಣಾ ಮಲಿಕ್ ಅವರಿಗೆ ಈ ದೃಶ್ಯಗಳಿಗಾಗಿ ರು.1 ಕೋಟಿ ಸಂಭಾವನೆ ನೀಡಲಾಗಿದೆಯಂತೆ. ಇಲ್ಲದಿದ್ದರೆ ಅವರು ಈ ರೀತಿ ಕತ್ಲಲ್ಲಿ ರಸಗುಲ್ಲ ಸೀನ್ ಗಳಿಗೆ ಒಪ್ಪಿಕೊಳ್ಳುತಿದ್ದರೇ ಎಂಬುವವರು ಇದ್ದಾರೆ. ಕನ್ನಡದಲ್ಲಿ ಇಷ್ಟೊಂದು ಸಂಭಾವನೆ ಮತ್ತಿನ್ಯಾವ ನಟಿಗೂ ನೀಡಿಲ್ಲ.

  ಸಿಲ್ಕ್ ಸಖತ್ ಹಾಟ್ ಬಿಡುಗಡೆ ಯಾವಾಗ?

  ಸಿಲ್ಕ್ ಸಖತ್ ಹಾಟ್ ಬಿಡುಗಡೆ ಯಾವಾಗ?

  ಇನ್ನು ಸಿಲ್ಕ್ ಸಖತ್ ಹಾಟ್ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಹಿಂದಿಯ ಡರ್ಟಿ ಪಿಕ್ಚರ್ ಚಿತ್ರಕ್ಕೂ ತಮ್ಮ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುತ್ತದೆ ಚಿತ್ರತಂಡ.

  English summary
  Pakistani actress Veena Malik seems to be becoming a sensation in Sandalwood. The actress, who is making her Kannada debut in Silk Sakkath Hot, which was earlier called Dirty Picture: Silk Sakkath Hot, has been attracting masses with her raunchy avatars.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X