For Quick Alerts
  ALLOW NOTIFICATIONS  
  For Daily Alerts

  ನಟ ದಿಲೀಪ್ ಕುಮಾರ್ ಗೆ ಲಘು ಹೃದಯಾಘಾತ

  By Rajendra
  |

  ಬಾಲಿವುಡ್ ಚಿತ್ರರಂಗದಲ್ಲಿ ಟ್ರ್ಯಾಜಿಡಿ ಕಿಂಗ್ ಎಂದೇ ಜನಜನಿತರಾಗಿರುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ದಿಲೀಪ್ ಕುಮಾರ್ ಅವರನ್ನು ಭಾನುವಾರ (ಸೆ.15) ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಲಘು ಹೃದಯಾಘಾತಕ್ಕೆ ಒಳಗಾದ ಕಾರಣ ಚಿಕಿತ್ಸೆಗಾಗಿ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಮುಂಬೈನ ಬಾಂದ್ರಾ ಪಶ್ಚಿಮ ಪ್ರದೇಶದಲ್ಲಿರುವ ಲೀಲಾವತಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಅವರನ್ನು ತುರ್ತು ನಿಗಾ ಘಟಕದಲ್ಲಿಡಲಾಗಿದೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವಕ್ತಾರ ಡಾ.ನರೇಶ್ ತ್ರಿವೇದಿ ತಿಳಿಸಿದ್ದಾರೆ. ಭಾನುವಾರ ರಾತ್ರಿ 9 ಗಂಟೆ ಸಮಯದಲ್ಲಿ ಅವರಿಗೆ ಲಘು ಹೃದಯಾಘಾತವಾಗಿತ್ತು.

  'ಜ್ವರ್ ಭಾಟಾ' (1944) ಚಿತ್ರದ ಮೂಲಕ ತಮ್ಮ ಬೆಳ್ಳಿಪರದೆ ಪಯಣವನ್ನು ಆರಂಭಿಸಿದ ದಿಲೀಪ್ ಕುಮಾರ್ ಆರು ದಶಕಗಳ ಕಾಲ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದುವರೆಗೂ ಅವರು 60 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಎಂಟು ಬಾರಿ ಫಿಲಂಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದ ಖ್ಯಾತಿ ದಿಲೀಪ್ ಅವರದು.

  ದಿಲೀಪ್ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂಬುದು ಅವರ ಅಪಾರ ಅಭಿಮಾನಿಗಳ ಹಾರೈಕೆ. ದಿಲೀಪ್ ಕುಮಾರ್ ಎಂದರೆ ದೇವದಾಸ್, ಐತಿಹಾಸಿಕ ಮುಗಲ್ ಈ ಅಜಂ, ನಯಾ ದೌರ್ ಹಾಗೂ ಸಾಮಾಜಿಕ ಚಿತ್ರ ಗಂಗಾ ಜಮುನಾ ಸೇರಿದಂತೆ ಮುಂತಾದ ಚಿತ್ರಗಳು ಕಣ್ಮುಂದೆ ಸುಳಿಯುತ್ತವೆ. (ಏಜೆನ್ಸೀಸ್)

  English summary
  Veteran actor Dilip Kumar was admitted to the Lilavati hospital today evening (September 15), after he had a mild heart attack. At around 9 pm, actor Dilip Kumar was taken to intensive care unit (ICU) of Lilavati Hospital in Bandra West.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X