»   » ಬೆಳ್ಳಿತೆರೆಯ ಹಿರಿಯ ಅಭಿನೇತ್ರಿ ಮೈನಾವತಿ ಇನ್ನಿಲ್ಲ

ಬೆಳ್ಳಿತೆರೆಯ ಹಿರಿಯ ಅಭಿನೇತ್ರಿ ಮೈನಾವತಿ ಇನ್ನಿಲ್ಲ

Posted By:
Subscribe to Filmibeat Kannada
Mynavathi in Abba Aa Hudugi (1959)
ಕನ್ನಡ ಚಿತ್ರಗಳ ಹಿರಿಯ ಅಭಿನೇತ್ರಿ ಹಾಗೂ ದಿವಂಗತ ತಾರೆ ಪಂಡರಿಬಾಯಿ ಅವರ ತಂಗಿ ಮೈನಾವತಿ ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮೈನಾವತಿ ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಶನಿವಾರ (ನ.10) ಬೆಳಗ್ಗೆ ಹೃದಯಾಘಾತವಾಗಿ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.

ನಾಯಕಿಯಾಗಿ ಚಿತ್ರರಂಗಕ್ಕೆ ಅಡಿಯಿಟ್ಟ ಮೈನಾವತಿ ಅವರು ಕನ್ನಡ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ 100ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ವರನಟ ಡಾ. ರಾಜ್ ಕುಮಾರ್ ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ಮೈನಾವತಿ ಅವರು ಅಭಿನಯಿಸಿದ್ದಾರೆ. ಅಬ್ಬಾ ಈ ಹುಡುಗಿ, ಸೋದರಿ, ಕಚದೇವಯಾನಿ, ರಾಯರ ಸೊಸೆ, ನಾನೇ ಭಾಗ್ಯವತಿ, ಅನುರಾಧ, ಅನ್ನಪೂರ್ಣ, ಸರ್ವಜ್ಞಮೂರ್ತಿ, ಅಮ್ಮ, ಮುತ್ತೈದೆ ಭಾಗ್ಯ, ಒಬ್ಬರಿಗಿಂತ ಒಬ್ಬರು ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಮೈನಾವತಿ ಅಭಿನಯಿಸಿದ್ದಾರೆ.

ಕಿರುತೆರೆಯಲ್ಲಿ ಬಿಜಿಯಾಗಿದ್ದ ತಮ್ಮ ಪುತ್ರ ಶ್ಯಾಮಸುಂದರ್ ಅವರನ್ನು ಕಳೆದುಕೊಂಡ ನೋವು ಮೈನಾವತಿ ಅವರನ್ನು ಕಡೆ ದಿನಗಳಲ್ಲಿ ಕಾಡುತ್ತಿತ್ತು. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. (ಏಜೆನ್ಸೀಸ್)

English summary
Veteran character actress of yesteryears Mynavathi, sister of Pandari Bai, who has played memorable roles in several films in Kannada, Telugu and Tamil languages, died in Bangalore on 10th November. She was 78. She was admitted to the BGS Hospitals for heart problem.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada