ಹಿರಿಯ ನಟ ದೊಡ್ಡಣ್ಣ ಆರೋಗ್ಯದಲ್ಲಿ ಏರುಪೇರು
Recommended Video

ಕನ್ನಡ ಸಿನಿಮಾರಂಗದ ಹಿರಿಯ ನಟ ದೊಡ್ಡಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅಧಿಕ ರಕ್ತದೊತ್ತಡದ ಕಾರಣ ದೊಡ್ಡಣ್ಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ನಿನ್ನೆ ಶ್ರಾವಣ ಸೋಮವಾರದ ಹಿನ್ನಲೆಯಲ್ಲಿ ರಾಯಚೂರಿನ ಸೂಗೂರೇಶ್ವರ ದೇವರ ದರ್ಶನಕ್ಕಾಗಿ ನಟ ದೊಡ್ಡಣ್ಣ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ದೇವರ ದರ್ಶನಕ್ಕಾಗಿ ಇಡೀ ರಾತ್ರಿ ಸರತಿ ಸಾಲಿನಲ್ಲಿ ನಿಂತು ಸಾಕಷ್ಟು ಸುಸ್ತಾಗಿದ್ದರಂತೆ.
.

ಬೆಳಗ್ಗೆ ತಾವು ಉಳಿದುಕೊಂಡಿದ್ದ ವಸತಿ ಗೃಹದ ಬಾತ್ ರೂಮ್ ನಲ್ಲಿ ನಟ ದೊಡ್ಡಣ್ಣ ಕುಸಿದು ಬಿದ್ದಿದ್ದಾರೆ. ನಂತರ ಅಲ್ಲೇ ಹತ್ತಿರವಿದ್ದ ಆರ್ ಟಿ ಪಿ ಎಸ್ ಆಸ್ಪತ್ರೆಗೆ ದೊಡ್ಡಣ್ಣ ಅವರನ್ನು ದಾಖಲು ಮಾಡಲಾಗಿದೆ.

ಸದ್ಯ ನಟ ದೊಡ್ಡಣ್ಣ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎನ್ನುವುದನ್ನು ವೈದ್ಯರು ತಿಳಿಸಿದ್ದಾರೆ. ಈ ಹಿಂದೆ ವಿಜಯಪುರ ಜಿಲ್ಲೆಯಲ್ಲಿ ಸಿನಿಮಾ ಚಿತ್ರೀಕರಣದ ವೇಳೆಯಲ್ಲಿಯೂ ದೊಡ್ಡಣ್ಣ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಆಗಲು ಕೆಲವು ದಿನಗಳು ಚಿಕಿತ್ಸೆ ಪಡೆದು ಚೇತರಿಕೆ ಆಗಿದ್ದರು.


Click it and Unblock the Notifications











