For Quick Alerts
  ALLOW NOTIFICATIONS  
  For Daily Alerts

  ಈ ವಿಡಿಯೋದಲ್ಲಿರುವ ಪುಟ್ಟ ಬಾಲಕ ಈಗ ದೊಡ್ಡ ಸ್ಟಾರ್.!

  |

  ಸಾಮಾಜಿಕ ಜಾಲತಾಣದಲ್ಲಿ ಒಂದು ಬಾಲಕನ ವಿಡಿಯೋ ವೈರಲ್ ಆಗಿದೆ. ತೆಲುಗು ಸಿನಿಮಾವೊಂದರಲ್ಲಿ ಅಭಿನಯಿಸಿರುವ ಬಾಲಕಲಾವಿದ ಯಾರಿರಬಹುದು ಊಹಿಸಿ ಎಂದು ಕ್ಯಾಪ್ಷನ್ ಹಾಕಿರುವ ವಿಡಿಯೋ ಟ್ರೆಂಡ್ ಆಗಿದೆ.

  ಸರಿ ಈ ಬಾಲಕ ಯಾರಾಗಿರಬಹುದು ಎಂದು ಹುಡುಕುತ್ತಾ ಹೋದಾಗ ನಮಗೆ ಗೊತ್ತಾಗಿದ್ದು, ಈತನಿಗೆ ದೊಡ್ಡ ಸ್ಟಾರ್ ನಟ ಆಗಿದ್ದಾನೆ ಅಂತ.

  ಭಾಷೆಯ ಗಡಿ ಮೀರಿ ಬೆಳೆದವರು, ಬಾಂಧವ್ಯ ಪಡೆದವರು

  ಹೌದು, ಇಂದು ಟಾಲಿವುಡ್ ನ ಮೋಸ್ಟ್ ಸಕ್ಸಸ್ ಫುಲ್ ನಟನಾಗಿರುವ ವಿಜಯ್ ದೇವರಕೊಂಡ ಅವರ ಅಪರೂಪದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ಸ್ವತಃ ಅರ್ಜುನ್ ರೆಡ್ಡಿ ಮಾತನಾಡಿದ್ದಾರೆ. ಅಷ್ಟಕ್ಕೂ, ಯಾವುದು ಆ ವಿಡಿಯೋ? ಮುಂದೆ ಓದಿ.....

  ಧಾರಾವಾಹಿಯಲ್ಲಿ ನಟನೆ.!

  ಎಲ್ಲರೂ ಅಂದುಕೊಂಡಂತೆ ನಟ ವಿಜಯ್ ದೇವರಕೊಂಡ 2011ರಲ್ಲಿ ಬಿಡುಗಡೆಯಾಗಿದ್ದ 'ನುವ್ವಿಲೆ' ಚಿತ್ರದ ಮೂಲಕ ಇಂಡಸ್ಟ್ರಿಗೆ ಬಂದರು. ಬಟ್, ಅದಕ್ಕೂ ಮೊದಲೇ ವಿಜಯ್ ಕ್ಯಾಮೆರಾ ಫೇಸ್ ಮಾಡಿದ್ದಾರೆ. ಟಿವಿ ಧಾರಾವಾಹಿಯೊಂದರಲ್ಲಿ ಬಾಲನಟನಾಗಿ ಕಾಣಿಸಿಕೊಂಡಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ವಿಜಯ ದೇವರಕೊಂಡಗೆ ಅಭಿಮಾನಿ ಅಂತೆ ಶಿವಣ್ಣ: ಯಾಕ್ ಗೊತ್ತಾ.?

  ಹೇಂಗಿದ್ದ ಹೇಗಾದ ಗೊತ್ತಾ?

  ಹೇಂಗಿದ್ದ ಹೇಗಾದ ಗೊತ್ತಾ?

  'ಶಿರಡಿ ಸಾಯಿ ಬಾಬಾ' ಧಾರಾವಾಹಿಯಲ್ಲಿ ನಟಿಸಿದ್ದ ವಿಜಯ್ ದೇವರಕೊಂಡ ಬಾಲಕನಾಗಿದ್ದಾಗ ಒಂದು ದೃಶ್ಯದಲ್ಲಿ ನಟಿಸಿದ್ದಾರೆ. ಈ ವಿಡಿಯೋ ನೋಡಿ ಖುದ್ದು ಅರ್ಜುನ್ ರೆಡ್ಡಿಯೇ ಟ್ವೀಟ್ ಮಾಡಿದ್ದು, ತಮ್ಮ ಹಳೆಯ ನೆನಪನ್ನ ಹಂಚಿಕೊಂಡಿದ್ದಾರೆ.

  ಹಳೆ ನೆನಪು ಕಾಡುತ್ತಿದೆ

  ಹಳೆ ನೆನಪು ಕಾಡುತ್ತಿದೆ

  ''ಈ ವಿಡಿಯೋವನ್ನ ಅದ್ಯಾರೋ ಅಪ್ ಲೋಡ್ ಮಾಡಿದ್ರೋ ಗೊತ್ತಿಲ್ಲ. ಬಟ್, ಚಿಕ್ಕ ವಯಸ್ಸಿನ ಘಟನೆಗಳು ಜ್ಞಾಪಕಕ್ಕೆ ಬರ್ತಿದೆ. ಈ ವಿಡಿಯೋವನ್ನ ಮತ್ತೆ ಮತ್ತೆ ನೋಡ್ತಿದ್ದೀನಿ'' ಎಂದು ಖುಷಿ ಹಂಚಿಕೊಂಡಿದ್ದಾರೆ.

  ಎಲ್ರೂ ನೋಡ್ರಪ್ಪಾ...ವಿದೇಶಿ ಗರ್ಲ್ ಫ್ರೆಂಡ್ ಜೊತೆ ವಿಜಯ ದೇವರಕೊಂಡ.!

  ಡಿಯರ್ ಕಾಮ್ರೇಡ್

  ಡಿಯರ್ ಕಾಮ್ರೇಡ್

  'ಪೆಳ್ಳಿ ಚೂಪುಲು', 'ಅರ್ಜುನ್ ರೆಡ್ಡಿ', 'ಗೀತಾ ಗೋವಿಂದಂ', 'ನೋಟಾ' ಚಿತ್ರಗಳ ನಂತರ ಈಗ 'ಡಿಯರ್ ಕಾಮ್ರೇಡ್' ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡ ನಟಿ ರಶ್ಮಿಕಾ ಮಂದಣ್ಣ ಜೋಡಿಯಾಗಿರುವುದು ವಿಶೇಷ.

  English summary
  Telugu actor vijay devarakonda Childhood video goes viral in twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X