'ಚಮಕ್' ಸಿನಿಮಾಗೆ ಸಾಥ್ ನೀಡಲಿದ್ದಾರೆ ಟಾಲಿವುಡ್ ನಟ
ಗಣೇಶ್ ಅಭಿನಯದ 'ಚಮಕ್' ಸಿನಿಮಾ ಟೀಸರ್ ಇತ್ತೀಚಿಗಷ್ಟೆ ರಿಲೀಸ್ ಆಗಿ ದೊಡ್ಡ ರೆಸ್ಪಾನ್ಸ್ ಪಡೆದುಕೊಂಡಿತ್ತು. ಈಗ ಸಿನಿಮಾದ ಆಡಿಯೋ ಬಿಡುಗಡೆಗೆ ವೇದಿಕೆ ಸಿದ್ಧವಾಗಿದೆ.
'ಚಮಕ್' ಚಿತ್ರದ ಹಾಡುಗಳ ರಿಲೀಸ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿ ಆಗಮಿಸಲಿದ್ದಾರೆ. ಟಾಲಿವುಡ್ ನಲ್ಲಿ ಸದ್ಯ ದೊಡ್ಡ ಜನಪ್ರಿಯತೆ ಗಳಿಸಿದ 'ಅರ್ಜುನ್ ರೆಡ್ಡಿ' ಖ್ಯಾತಿಯ ನಟ ವಿಜಯ್ ದೇವರಕೊಂಡ 'ಚಮಕ್' ಆಡಿಯೋ ಲಾಂಚ್ ಮಾಡಲಿದ್ದಾರೆ. ಈ ಅದ್ದೂರಿ ಕಾರ್ಯಕ್ರಮಕ್ಕಾಗಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ವಿಶೇಷ ಅಂದರೆ, ಚಿತ್ರದ ನಟಿ ರಶ್ಮಿಕಾ ಮಂದಣ್ಣ ನಟ ವಿಜಯ್ ದೇವರಕೊಂಡ ಮುಂದಿನ ಚಿತ್ರದ ನಾಯಕಿ ಎಂಬ ಸುದ್ದಿ ಕೂಡ ಇತ್ತು.

ಅಂದಹಾಗೆ, 'ಚಮಕ್' ಆಡಿಯೋ ಬಿಡುಗಡೆ ಕಾರ್ಯಕ್ರಮ ಡಿಸೆಂಬರ್ 4 ರಂದು ನಡೆಯಲಿದೆ. ಸಂಜೆ 6 ಗಂಟೆಗೆ ಯಲಹಂಕದ ಇವಿಸು ಕನ್ವೆನ್ಷನ್ ಸೆಂಟರ್ ನಲ್ಲಿ ಗ್ರಾಂಡ್ ಆಗಿ ಕಾರ್ಯಕ್ರಮ ನಡೆಯಲಿದೆ. ಇನ್ನು 'ಚಮಕ್' ಸುನಿ ನಿರ್ದೇಶಕದ ಚಿತ್ರವಾಗಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ.
More from Filmibeat
English summary
Goldan Star Ganesh and Rashmika Mandanna starrer 'Chamak' audio will be released on December 4th by actor Vijay Devarakonda.


Click it and Unblock the Notifications











