ಗಣೇಶ್ ಚಿತ್ರಕ್ಕೆ ನಿರ್ದೇಶಕರಾದ ಸಂತೋಷ್ ಆನಂದ್ ರಾಮ್ ಸ್ನೇಹಿತ

By Bharath Kumar

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ರಾಜಕುಮಾರ' ನಂತರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ಇತ್ತೀಚಿಗಷ್ಟೆ ಉತ್ತರ ನೀಡಿದ್ದರು. ಮೂರನೇ ಸಿನಿಮಾವನ್ನ ಪುನೀತ್ ರಾಜ್ ಕುಮಾರ್ ಜೊತೆಯಲ್ಲೇ ಮಾಡ್ತಿದ್ದೀನಿ ಅಂತ ಹೇಳಿದ್ರು.

ಇದೀಗ, ತಮ್ಮ ಸ್ನೇಹಿತ, ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸಹ ನಿರ್ದೇಶಕನ ಹೊಸ ಚಿತ್ರದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಹೌದು, ಸಂತೋಷ್ ಆನಂದ್ ರಾಮ್ ಅವರ ಜೊತೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ರಾಜಕುಮಾರ' ಚಿತ್ರಗಳಲ್ಲಿ ಬರಹಗಾರ ಹಾಗೂ ಸಹ ನಿರ್ದೇಶಕರಾಗಿದ್ದ ವಿಜಯ್ ನಾಗೇಂದ್ರ ಫುಲ್ ಟೈಂ ಡೈರೆಕ್ಟರ್ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಆಕ್ಷನ್ ಕಟ್ ಹೇಳುವ ಮೂಲಕ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ ವಿಜಯ್ ನಾಗೇಂದ್ರ. ಈ ಚಿತ್ರವನ್ನ ಹೆಚ್.ಎಲ್.ಎನ್ ರಾಜ್ ನಿರ್ಮಾಣ ಮಾಡುತ್ತಿದ್ದಾರೆ.

Vijay nagendra direct to kannada actor ganesh

ಸದ್ಯ, ಈ ಚಿತ್ರದ ಫಸ್ಟ್ ಪೋಸ್ಟರ್ ಮಾತ್ರ ರಿಲೀಸ್ ಮಾಡಿದ್ದು, ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ ಚಿತ್ರದ ಟೈಟಲ್ ಬಿಡುಗಡೆ ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಅದನ್ನ ಬಿಟ್ಟರೇ ಕಥೆ ಹಾಗೂ ಇನ್ನಿತರ ವಿಷ್ಯಗಳ ಬಗ್ಗೆ ಏನು ಬಿಟ್ಟುಕೊಟ್ಟಿಲ್ಲ.

ಮತ್ತೊಂದೆಡೆ ಗಣೇಶ್ 'ಆರೆಂಜ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕೊನೆಯದಾಗಿ ಸುನಿ ನಿರ್ದೇಶನದ 'ಚಮಕ್' ಚಿತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಶತದಿನವನ್ನ ಆಚರಿಸಿಕೊಂಡಿತ್ತು.

More from Filmibeat

English summary
Director santhosh anandram's Co-Director Vijay nagendra will direct to kannada actor ganesh in next movie. the movie produced by HLN Raj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X