For Quick Alerts
  ALLOW NOTIFICATIONS  
  For Daily Alerts

  'ಶಿವಯೋಗಿ ಪುಟ್ಟಯ್ಯಜ್ಜ'ನಾಗಿ ವಿಜಯರಾಘವೇಂದ್ರ

  By Rajendra
  |

  ಗಾನಯೋಗಿ ಶ್ರೀ ಪಂಚಾಕ್ಷರಿ ಗವಾಯಿಗಳು ಯಾರಿಗೆ ತಾನೇ ಗೊತ್ತಿಲ್ಲ ಅಂಥ ಮಹಾನ್ ಸಂಗೀತ ಗಾರುಡಿಗರ ಶಿಷ್ಯ ಹಾಗೂ ಅವರ ನಂತರ ಗಾನಯೋಗಿಯ ಆದರ್ಶಗಳನ್ನು ಮುಂದುವರೆಸಿಕೊಂಡು ಬಂದಂತಹ ಮಹಾನ್ ಶಿವಯೋಗಿ ಶ್ರೀ ಪುಟ್ಟರಾಜ ಗವಾಯಿಗಳು.

  ಶ್ರೀ ಪುಟ್ಟರಾಜ ಗವಾಯಿಗಳ ಸಂಪೂರ್ಣ ಜೀವನ ಚರಿತ್ರೆ ಆಧಾರಿತ 'ಶಿವಯೋಗಿ ಪುಟ್ಟಯ್ಯಜ್ಜ' ಎಂಬ ಚಿತ್ರವೀಗ ನಿರ್ಮಾಣವಾಗಿದೆ. ನಟ ವಿಶ್ವ ವಿಜೇತರ ಪುತ್ರಿ ಹಂಸವಿಜೇತ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಟ ವಿಜಯ ರಾಘವೇಂದ್ರ ಪುಟ್ಟರಾಜ ಗವಾಯಿಗಳ ಪಾತ್ರ ನಿರ್ವಹಿಸಿದ್ದಾರೆ. [ಹೆಸರು ಬದಲಾಯಿಸಿಕೊಂಡ ವಿಜಯ ರಾಘವೇಂದ್ರ]

  ಈ ಹಿಂದೆ ಗಾನಯೋಗಿ ಪಂಚಾಕ್ಷರ ಗವಾಯಿಗಳು ಚಿತ್ರದಲ್ಲಿಯೂ ವಿಜಯ ರಾಘವೇಂದ್ರ ಬಾಲ ಪಂಚಾಕ್ಷರನಾಗಿ ಮನೋಜ್ಞ ಅಭಿನಯ ನೀಡಿದ್ದರು. ಗದಗ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿರುವ ಈ ಚಿತ್ರದ ಡಬ್ಬಿಂಗ್ ಕಾರ್ಯ ಕಳೆದ ವಾರ ಪ್ರಸಾದ್ ಸ್ಟುಡಿಯೋದಲ್ಲಿ ನೆರವೇರಿದೆ.

  ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದಲ್ಲಿ ನಟಿ ಶ್ರುತಿ ಪುಟ್ಟರಾಜ ಗವಾಯಿಗಳ ತಾಯಿ ಪಾತ್ರದಲ್ಲಿ ಅಭಿನಯಿಸಿದ್ದು ಚಿತ್ರ ನಿರ್ದೇಶಕ ಶಂಕರ್ ಲಿಂಗ ಸುಗ್ನಳ್ಳಿ, ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಪಾತ್ರ ನಿರ್ವಹಿಸಿದ್ದಾರೆ. 5 ತಿಂಗಳ ಮಗುವಾಗಿದ್ದಾಗಲೇ ತನ್ನ ಕಣ್ಣುಗಳನ್ನು ಕಳೆದುಕೊಂಡಿದ್ದ ಪುಟ್ಟರಾಜರು ಸಹಸ್ರಾರು ಅಂಧರಿಗೆ ದಾರಿದೀಪವಾಗಿದ್ದರು. ಎಲ್ಲಾ ಥರದ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದ ಅವರ ಕೈಲಿ ಪಿಟೀಲು ಇದ್ದರೆ, ಸರಸ್ವತಿಯ ಕೈಲಿ ವೀಣೆಯಿದ್ದಹಾಗೆ.

  ಈ ಹಿಂದೆ ಬನಶಂಕರಿ ಮಹಾತ್ಮೆ ಚಿತ್ರ ನಿರ್ಮಿಸಿದ್ದ ಶ್ಯಾಮ್ ಮುಕುಂದ ನವಲೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗವಾಯಿಗಳ 3 ಹಾಡು ಷರೀಫರ ಒಂದು ಹಾಡನ್ನು ಈ ಚಿತ್ರದಲ್ಲಿ ಬಳಸಿಕೊಂಡಿದ್ದು ಅಮರ ಪ್ರಿಯ 2 ಹಾಡುಗಳನ್ನು ಬರೆದಿದ್ದಾರೆ. ಚಿತ್ರಕ್ಕೆ ಸತೀಶ್‍ಚಂದ್ರ ಬೆಳಮಂಗಲ ಛಾಯಾಗ್ರಹಣ, ಅಮರಪ್ರಿಯ ಸಂಗೀತವಿದ್ದು ಉಳಿದ ತಾರಾಗಣದಲ್ಲಿ ಅಭಿಜಿತ್, ಅನುಪ್ರಭಾಕರ್, ಶಶಿಕುಮಾರ್, ಉಮೇಶ್ ನವಿಲೆ, ಭವ್ಯ ಶ್ರೀ ರೈ ಅಭಿನಯಿಸಿದ್ದಾರೆ. (ಏಜೆನ್ಸೀಸ್)

  English summary
  Bigg Boss winner actor director Vijay Raghavendra back to silver screen, he plays Pandit Puttaraj Gawai. The movie titled as 'Shivayogi Puttaiahjja' which is based on the life and times of Puttaraj Gawai. Late actor Vishwavijetha's daughter Hamsavijetha has directed the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X