»   » 'ಬಾಹುಬಲಿ', 'ಭಜರಂಗಿ ಭಾಯ್ ಜಾನ್' ಸಕ್ಸಸ್ ಹಿಂದಿನ ಸೂತ್ರಧಾರ

'ಬಾಹುಬಲಿ', 'ಭಜರಂಗಿ ಭಾಯ್ ಜಾನ್' ಸಕ್ಸಸ್ ಹಿಂದಿನ ಸೂತ್ರಧಾರ

Posted By:
Subscribe to Filmibeat Kannada

ಟಾಲಿವುಡ್ ಅಂಗಳದಲ್ಲಿ ಮಾತ್ರ ಅಲ್ಲ, ಕಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಸೂಪರ್ ಸಕ್ಸಸ್ ಆಗಿರುವ ಸಿನಿಮಾ 'ಬಾಹುಬಲಿ'. ರಿಲೀಸ್ ಆದ ವಾರದಲ್ಲೇ 300 ಕೋಟಿ ರೂಪಾಯಿ ಗಳಿಕೆ ಮಾಡಿರುವ 'ಬಾಹುಬಲಿ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದೆ.

ಇನ್ನೂ ಬಾಕ್ಸ್ ಆಫೀಸ್ ಸುಲ್ತಾನ್ ಅಂತಲೇ ಕರೆಯಿಸಿಕೊಳ್ಳುವ ಸಲ್ಮಾನ್ ಖಾನ್ ಅಭಿನಯದ 'ಭಜರಂಗಿ ಭಾಯ್ ಜಾನ್' ಚಿತ್ರ ಕೂಡ ಎಲ್ಲಾ ರೆಕಾರ್ಡ್ ಗಳನ್ನ ಪೀಸ್ ಪೀಸ್ ಮಾಡಿದೆ. ಕೇವಲ ಮೂರೇ ದಿನಗಳಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ಇತಿಹಾಸ ಸೃಷ್ಟಿಸಿದೆ. ['ಭಜರಂಗಿ ಭಾಯ್ ಜಾನ್' ವಿಮರ್ಶೆ: ಹಿಂದೆಂದೂ ಕಂಡಿರದ 'ಸಲ್ಮಾನ್' ಚಿತ್ರ]

K.V.Vijayendra Prasad, The man who is behind the success of Baahubali and Bajrangi Bhaijaan

ಈ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳ ಹಿಂದಿನ ರುವಾರಿ ಒಬ್ಬರೇ. ಅವರೇ ಈ ಕೆ.ವಿ.ವಿಜಯೇಂದ್ರ ಪ್ರಸಾದ್. ಹೌದು, 'ಬಾಹುಬಲಿ' ಮತ್ತು 'ಭಜರಂಗಿ ಭಾಯ್ ಜಾನ್' ಚಿತ್ರಗಳಿಗೆ ಕಥೆ ರಚಿಸಿರುವವರು ವಿಜಯೇಂದ್ರ ಪ್ರಸಾದ್. [ಬಾಹುಬಲಿ ವಿಮರ್ಶೆ : ಓಕೆ, ಆದರೆ ಅಂಥ ನಿರೀಕ್ಷೆ ಬೇಡ]

ಈ ಎರಡೂ ಚಿತ್ರಗಳು ಚಿತ್ರಮಂದಿರಗಳಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಕಾರಣ ಚಿತ್ರಗಳಲ್ಲಿರುವ ಗಟ್ಟಿಯಾದ ಕಥೆ. ಅದನ್ನ ಕಮರ್ಶಿಯಲ್ ಆಗಿ ಕಟ್ಟಿಕೊಡುವಲ್ಲಿ ವಿಜಯೇಂದ್ರ ಪ್ರಸಾದ್ ಯಶಸ್ವಿಯಾಗಿದ್ದಾರೆ.

ಅಸಲಿಗೆ ವಿಜಯೇಂದ್ರ ಪ್ರಸಾದ್, ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ತಂದೆ. ಸೂಪರ್ ಹಿಟ್ ಸಿನಿಮಾಗಳಾದ 'ಮಗಧೀರ', 'ವಿಕ್ರಮಾರ್ಕುಡು', 'ಛತ್ರಪತಿ', 'ಸೈ' ಸೇರಿದಂತೆ ಹಲವಾರು ಚಿತ್ರಗಳಿಗೆ ಕಥೆ ರಚಿಸಿರುವ ಖ್ಯಾತಿ ಇವರದ್ದು.

English summary
Story-writer K.V.Vjiayendra Prasad is the man who is behind the success of both 'Baahubali' and 'Bajrangi Bhaijaan'. K.V.Vijayendra Prasad has written story for both the films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada