Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಕ್ರಾಂತ್ ರೋಣ: ಗೆಲುವಿಗಾಗಿ ಅಭಿಮಾನಿಗಳಿಂದ ವಿಶೇಷ ಪೂಜೆ!
'ವಿಕ್ರಾಂತ್ ರೋಣ' ರಿಲೀಸ್‌ಗೆ ಇನ್ನೊಂದು ದಿನ ಮಾತ್ರವೇ ಇದೆ. ನಾಳೆ (ಜುಲೈ 28)ರಂದು ವಿಕ್ರಾಂತ್ ರೋಣನಾಗಿ ನಟ ಸುದೀಪ್ ತೆರೆಯ ಮೇಲೆ ಅಪ್ಪಳಿಸಲಿದ್ದಾರೆ. ಸಿನಿಮಾವನ್ನು ಮೊದಲ ದಿನ ನೋಡಲು ಹೆಚ್ಚಿನ ಪ್ರೇಕ್ಷಕರು ಕಾತರದಿಂದ ಕಾಯುತ್ತಾ ಇದ್ದಾರೆ. ಅಭಿಮಾನಿಗಳು ಕೂಡ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸುತ್ತಿದ್ದಾರೆ.
ಇನ್ನು ಮೊದಲ ದಿನದ ಟಿಕೆಟ್ ಬುಕ್ಕಿಂಗ್ ಆಧಾರದ ಮೇಲೆ ಕಲೆಕ್ಷನ್ ರಿಪೋರ್ಟ್ ಕೂಡ ಬಂದಿದೆ. ಇನ್ನು ಮೊದಲ ದಿನ ಗುರುವಾರ ಆದ ಕಾರಣ ಶುಕ್ರವಾರದ ಬಳಿಕ ವಿಕ್ರಾಂತ್ ರೋಣ ಸಿನಿಮಾದ ಅಸಲಿ ಆಟ ಶುರುವಾಗಲಿದೆ ಎನ್ನಬಹುದು.
ಬೆಂಗಳೂರಲ್ಲಿ
'ವಿಕ್ರಾಂತ್
ರೋಣ'
1st
ಡೇ,
1st
ಶೋ
ಎಲ್ಲಿ,
ಎಷ್ಟು
ಹೊತ್ತಿಗೆ?
'ವಿಕ್ರಾಂತ್ ರೋಣ' ಸಿನಿಮಾ ವಿಶ್ವದಾದ್ಯಂತ ಘರ್ಜಿಲಿದ್ದಾನೆ. ಇದು ಕನ್ನಡದ, ಸೌತ್ ಚಿತ್ರರಂಗದ ಬಹು ನಿರೀಕ್ಷೆಯ ಸಿನಿಮಾ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಈ ಚಿತ್ರದ ಮೇಲೂ ಹೆಚ್ಚಿನ ನಿರೀಕ್ಷೆಗಳು ಮನೆ ಮಾಡಿವೆ. ಚಿತ್ರದ ಕಂಟೆಂಟ್ ಕೂಡ 'ವಿಕ್ರಾಂತ್ ರೋಣ' ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಇನ್ನು ಚಿತ್ರದ ಯಶಸ್ಸಿಗಾಗಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.
ಪ್ರೀ
ರಿಲೀಸ್
ಬುಕಿಂಗ್‌ನಲ್ಲಿಯೇ
ಕೋಟ್ಯಂತರ
ಬಾಚಿದ
'ವಿಕ್ರಾಂತ್
ರೋಣ'

ಕಿಚ್ಚನ ಮಹಿಳಾ ಅಭಿಮಾನಿಗಳಿಂದ ಪೂಜೆ!
ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಕಿಚ್ಚನ ಅಭಿಮಾನಿಗಳು ಸಲ್ಲಿಸಿದ್ದಾರೆ. 101 ಕಳಶಗಳನ್ನು ಹೊತ್ತು ಮಹಿಳಾ ಅಭಿಮಾನಿಗಳು ಮೆರವಣಿಗೆ ಮಾಡಿದ್ದಾರೆ. ಜೊತೆಗೆ ಡೊಳ್ಳು ಕುಣಿತ, ಚಂಡೆ ವಾದ್ಯ, ಪ್ರಚಾರದ ಟ್ಯಾಬ್ಲೋ ಜೊತೆಗೆ ಅಭಿನಯ ಚಕ್ರವರ್ತಿ ಬಾವುಟ ಹಿಡಿದು ಅಭಿಮಾನಿಗಳು ಭರ್ಜರಿ ಮೆರವಣಿಗೆ ಮಾಡಿದ್ದಾರೆ. ಎಲ್ಲೆಡೆ ಸಂಭ್ರಮ ಮನೆಮಾಡಿದೆ. ಇನ್ನು ಕಿಚ್ಚನ ಕಟೌಟ್ಗೆ ಹಾರ ಹಾಕಿ, ಪಟಾಕಿ ಸಿಡಿಸಿ ಅಭಿಮಾನಿಗಳು ಕಿಚ್ಚನ ಸಿನಿಮಾ ಪ್ರಮೋಷನ್ ಮಾಡುತ್ತಿದ್ದು, ಮಾಗಡಿ ರಸ್ತೆಯ ವಿರೇಶ್ ಚಿತ್ರಮಂದಿರದವರೆಗೂ ಮೆರವಣಿಗೆ ಮಾಡಿದ್ದಾರೆ.

ಟಿಕೆಟ್ ಸೋಲ್ಡೌಟ್!
ಸಿನಿಮಾ ತಂಡ ಸಹ ಚಿತ್ರದ ಪ್ರಚಾರವನ್ನು ಭರದಿಂದ ಮಾಡುತ್ತಿದ್ದು, ಮುಂಬೈ, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಪ್ರೀ ರಿಲೀಸ್ ಇವೆಂಟ್ಗಳನ್ನು ಮಾಡಿದೆ. ಈಗಾಗಲೇ ಪ್ರೀ ಬುಕ್ಕಿಂಗ್ನಲ್ಲಿ ಟಿಕೆಟ್ಗಳು ಸೋಲ್ಡ್ ಔಟ್ ಆಗಿದ್ದು, ಚಿಕ್ಕಮಂಗಳೂರು ಜಿಲ್ಲೆ, ಮೈಸೂರು ಸೇರಿದಂತೆ ಅನೇಕ ಕಡೆ ಥಿಯೇಟರ್ಗಳಲ್ಲಿ ಟಿಕೆಟ್ ಓಲ್ಡ್ ಆಗಿವೆ. ಮೊದಲ ದಿನ ವಿಕ್ರಾಂತ್ ರೋಣನನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಕಾತರರಾಗಿದ್ದಾರೆ.

'ವಿಕ್ರಾಂತ್ ರೋಣ' ಮೊದಲ ಶೋ- ಶಂಕರ್ ನಾಗ್ ಥಿಯೇಟರ್!
ವಿಕ್ರಾಂತ್ ರೋಣ ಸಿನಿಮಾವನ್ನು ಅಭಿಮಾನಿಗಳು ಮೆರೆಸಲು ಸಿದ್ಧವಾಗಿದ್ದಾರೆ. ಬೆಳಗ್ಗೆಯಿಂದಲೇ ಅಬ್ಬರ ಶುರುವಾಗಲಿದೆ. ಇನ್ನು ಮೊದಲ ಶೋ ಎನ್ನುವ ಕುತೂಹಲಕ್ಕೂ ತೆರೆ ಬಿದ್ದಿದೆ. ಎಂ.ಜಿ ರಸ್ತೆಯಲ್ಲಿ ಇರುವ ಶಂಕರ್ ನಾಗ್ ಚಿತ್ರಮಂದಿರದಲ್ಲಿ ಬೆಳಗ್ಗೆ 5.30ಕ್ಕೆ ಮೊದಲ ಶೋ ಆರಂಭವಾಗಲಿದೆ. ಭಾರತದಾದ್ಯಂತ ಬೆಂಗಳೂರಿನಲ್ಲಿಯೇ ಮೊದಲ ಪ್ರದರ್ಶನ ಶುರುವಾಗಲಿದೆ. ಶಂಕರ್ ನಾಗ್ ಚಿತ್ರಮಂದಿರದಲ್ಲೇ ಮೊಟ್ಟ ಮೊದಲ ಶೋ ಪ್ರದರ್ಶನಗೊಳ್ಳಲಿದೆ.

6 ಗಂಟೆಯಿಂದ ಎಲ್ಲಾ ಕಡೆ ಶೋ ಶುರು!
ಇನ್ನು ಎಲ್ಲಾ ಕಡೆಗಳಲ್ಲೂ ಬೆಳಗ್ಗೆ 6 ಗಂಟೆಗೆಯಿಂದ ಸಹಜವಾಗಿ 'ವಿಕ್ರಾಂತ್ ರೋಣ' ಶೋಗಳು ಶುರುವಾಗಲಿವೆ.
ವಿಕ್ರಾಂತ್ ರೋಣ ಚಿತ್ರಮಂದಿರಕ್ಕೆ ಮುಖ್ಯ ಚಿತ್ರಮಂದಿರ ಎನ್ನುವ ಕಾನ್ಸೆಪ್ಟ್ ಇಲ್ಲ. ಎಲ್ಲಾ ಕಡೆಗಳಲ್ಲೂ ಗಂಟೆ, ಗಂಟೆಗೂ ಶೋಗಳು ಪ್ರಾರಂಭವಾಗಲಿವೆ. ಕೆಲವು ಚಿತ್ರಮಂದಿರಗಳಲ್ಲಿ ವಿಶೇಷ ಆಚರಣೆ ಇರಲಿದೆ. ವೀರೇಶ್ ಥಿಯೇಟರ್‌ನಲ್ಲಿ ಸಹ ದೊಡ್ಡ ಮಟ್ಟದ ಸೆಲೆಬ್ರೇಷನ್ ಮಾಡಲು ನಡೆಯಲಿದ್ದುಬೆಳಗ್ಗೆ 6 ರಿಂದಲೇ ಶೋ ಪ್ರಾರಂಭವಾಗಲಿದೆ.