For Quick Alerts
  ALLOW NOTIFICATIONS  
  For Daily Alerts

  ನಟಿ ನೀತಾ ಅಶೋಕ್ ನಿಶ್ಚಿತಾರ್ಥ: ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊಗಳನ್ನು ಹಂಚಿಕೊಂಡ ಪನ್ನಾ

  |

  'ವಿಕ್ರಾಂತ್ ರೋಣ' ಚಿತ್ರದ 'ಪನ್ನ' ಪಾತ್ರದಲ್ಲಿ ಗಮನ ಸೆಳೆದಿದ್ದ ನಟಿ ನೀತಾ ಅಶೋಕ್ ಮದುವೆ ನಿಶ್ಚಯವಾಗಿದೆ. ಪ್ರಿಯಕರ ಸತೀಶ್ ಮೆಸ್ತಾ ಜೊತೆ ಸರಳವಾಗಿ ನೀತಾ ನಿಶ್ಚಿತಾರ್ಥ ನೆರವೇರಿದೆ. ಅಭಿಮಾನಿಗಳು ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದಾರೆ. ಜೋಡಿಯ ಮದುವೆ ಯಾವಾಗ ಎನ್ನುವ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ.

  ಸತೀಶ್ ಮೆಸ್ತಾ ಪ್ರಮೋಸ್ ಮಾಡಿರುವ ಫೋಟೊ ಜೊತೆಗೆ ನಿಶ್ಚಿತಾರ್ಥದ ಫೋಟೊಗಳನ್ನು ನಟಿ ನೀತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಾಲೇಜಿನಲ್ಲಿ ಒಟ್ಟಿಗೆ ಓದುವ ಸಮಯದದಲ್ಲೇ ನೀತಾ ಹಾಗೂ ಸತೀತ್ ನಡುವೆ ಸ್ನೇಹ ಶುರುವಾಗಿತ್ತು. ಆ ಸ್ನೇಹ ಪ್ರೀತಿಗೆ ತಿರುಗಿ ಈಗ ಹೊಸ ಬಾಳಿಗೆ ಕಾಲಿಡಲು ಜೋಡಿ ನಿರ್ಧರಿಸಿದ್ದರು. ಸತೀಶ್ ಮೆಸ್ತಾ ಹಿನ್ನಲೆ ಬಗ್ಗೆ ಇನ್ನು ಅಷ್ಟಾಗಿ ಮಾಹಿತಿ ಸಿಕ್ಕಿಲ್ಲ. ಎಂಬಿಎ ಮಾಡಬೇಕು ಎಂದುಕೊಂಡಿದ್ದ ಸಮಯದಲ್ಲೇ ನೀತಾಗೆ ಕಿರುತೆರೆ ಅವಕಾಶಗಳು ಸಿಕ್ಕಿತ್ತು.

  Vikrant Rona Movie Actress Neetha Ashok Engaged to Boyfriend Satish Mesta

  'ಯಶೋದೆ', 'ನಾ ನಿನ್ನ ಬಿಡಲಾರೆ', 'ನೀಲಾಂಬರಿ' ಧಾರಾವಾಹಿಗಳಲ್ಲಿ ನೀತಾ ಅಶೋಕ್ ನಟಿಸಿದ್ದಾರೆ. 'ಜಬರ್ದಸ್ತ್ ಶಂಕರ' ಎನ್ನುವ ತುಳು ಚಿತ್ರದಲ್ಲೂ ಬಣ್ಣ ಹಚ್ಚಿದ್ದರು. ಹುಟ್ಟಿ ಬೆಳೆದಿದ್ದು ಉಡುಪಿಯ ಕೋಟ ಎಂಬ ಊರಿನಲ್ಲಿ. ಕನ್ನಡ ಮಾತ್ರವಲ್ಲದೇ ದೂರದರ್ಶನದಲ್ಲಿ ಪ್ರಸಾರವಾದ 'ಆಶಿಯಾನ್' ಧಾರಾವಾಹಿಯಲ್ಲೂ ನೀತಾ ಮಿಂಚಿದ್ದರು.

  2022 Sandalwood Roundup: ಈ ವರ್ಷ ಕನ್ನಡ ಚಿತ್ರರಂಗಕ್ಕೆ ಪರಿಚಿತವಾದ ಹೊಸ ಮುಖಗಳು2022 Sandalwood Roundup: ಈ ವರ್ಷ ಕನ್ನಡ ಚಿತ್ರರಂಗಕ್ಕೆ ಪರಿಚಿತವಾದ ಹೊಸ ಮುಖಗಳು

  English summary
  Vikrant Rona Movie Actress Neetha Ashok Engaged to Boyfriend Satish Mesta. She made her Kannada film debut with Vikrant Rona. Neetha Ashok Acted in three Kannada television serials. Know more.
  Monday, December 19, 2022, 18:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X