»   » ವಿನಯ್ ರಾಜ್ ಕುಮಾರ್ ನಾಲ್ಕನೇ ಚಿತ್ರಕ್ಕೂ ಟೈಟಲ್ ಫಿಕ್ಸ್! ನಿರ್ದೇಶಕ ಯಾರು?

ವಿನಯ್ ರಾಜ್ ಕುಮಾರ್ ನಾಲ್ಕನೇ ಚಿತ್ರಕ್ಕೂ ಟೈಟಲ್ ಫಿಕ್ಸ್! ನಿರ್ದೇಶಕ ಯಾರು?

Posted By:
Subscribe to Filmibeat Kannada

ಡಾ.ರಾಜ್ ಕುಮಾರ್ ಮೊಮ್ಮೊಗ ವಿನಯ್ ರಾಜ್ ಕುಮಾರ್ 'ರನ್ ಆಂಟನಿ' ಚಿತ್ರದ ನಂತರ ಲಾಂಗ್ ಗ್ಯಾಪ್ ತೆಗೆದುಕೊಂಡಿದ್ದರು. ಅವರ ಮುಂದಿನ ಚಿತ್ರ ಯಾವುದಿರಬಹುದು ಎಂಬ ಪ್ರಶ್ನೆಗೆ ಅವರ ಮೂರನೇ ಚಿತ್ರದ ಟೈಟಲ್ ಫಿಕ್ಸ್ ಆಗಿರುವ ಬಗ್ಗೆ ಫಿಲ್ಮಿಬೀಟ್ ನಲ್ಲಿ ಹೇಳಿದ್ವಿ.

'ರನ್ ಆಂಟನಿ' ನಂತರ 'ಅಚ್ಚರಿ'ಗೊಳಗಾದ ವಿನಯ್ ರಾಜ್ ಕುಮಾರ್

ವಿನಯ್ ರಾಜ್ ಕುಮಾರ್ ತಮ್ಮ ಅಭಿನಯದ ಮೂರನೇ ಚಿತ್ರಕ್ಕೆ ಮಾತ್ರವಲ್ಲದೇ ತಮ್ಮ ನಾಲ್ಕನೇ ಪ್ರಾಜೆಕ್ಟ್‌ಗೂ ಸಹ ಸಹಿ ಹಾಕಿರುವ ಬಗ್ಗೆ ಮೂಲಗಳಿಂದ ತಿಳಿದಿದೆ. ಅಲ್ಲದೇ ಅವರ ಅಭಿನಯದ ನಾಲ್ಕನೇ ಚಿತ್ರಕ್ಕೂ ಈಗಾಗಲೇ ಟೈಟಲ್ ಸಹ ಫಿಕ್ಸ್ ಆಗಿದ್ದು, ನಿರ್ದೇಶಕರು ಯಾರು ಎಂಬುದು ತಿಳಿದಿದೆ. ಮುಂದೆ ಓದಿರಿ

ವಿನಯ್ ರಾಜ್ ಕುಮಾರ್ ನಾಲ್ಕನೇ ಚಿತ್ರ ಯಾವುದು?

ವಿನಯ್ ರಾಜ್ ಕುಮಾರ್ ಮೂರನೇ ಚಿತ್ರದ ಜೊತೆಗೆ ನಾಲ್ಕನೇ ಚಿತ್ರಕ್ಕೂ ಸಹಿ ಹಾಕಿದ್ದಾರೆ. ಅವರ ನಾಲ್ಕನೇ ಚಿತ್ರಕ್ಕೆ 'ಅನಂತು ವರ್ಸಸ್ ನುಸ್ರತ್(Ananthu Versus Nusrath)' ಎಂದು ಟೈಟಲ್ ಫಿಕ್ಸ್ ಮಾಡಿದ್ದು, ಈ ಚಿತ್ರಕ್ಕೆ ಸುಧೀರ್ ಶಾನ್ಭೋಗ್ ಎಂಬುವರು ಆಕ್ಷನ್ ಕಟ್ ಹೇಳಲಿದ್ದಾರೆ.

ಮೂರನೇ ಚಿತ್ರಕ್ಕೆ ನಾಯಕಿಯರಿಗಾಗಿ ಹುಡುಕಾಟ

ಮೂರನೇ ಚಿತ್ರ 'ಅಚ್ಚರಿ' ಎಂದು ಟೈಟಲ್ ಪಡೆದಿದ್ದು, ಈ ಚಿತ್ರಕ್ಕೆ ಸುನಿಲ್ ತಾಳ್ಯ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಚಿತ್ರಕ್ಕಾಗಿ ವಿನಯ್ ರವರ ಫೋಟೋಶೂಟ್ ಕಾರ್ಯ ಮುಗಿದಿದ್ದು, ಚಿತ್ರತಂಡ 4 ನಾಯಕಿಯರಿಗಾಗಿ ಹುಡುಕಾಟ ನಡೆಸುತ್ತಿದೆ.

ನಿರ್ಮಾಪಕರು ಯಾರು?

ವಿನಯ್ ರಾಜ್ ಕುಮಾರ್ ರವರ ಮೂರು ಮತ್ತು ನಾಲ್ಕನೇ ಚಿತ್ರಕ್ಕೆ ನಿರ್ದೇಶಕರು ಮತ್ತು ಟೈಟಲ್ ಮಾತ್ರ ಫಿಕ್ಸ್ ಆಗಿದ್ದು, ಯಾವ ಚಿತ್ರವನ್ನು ಯಾರು ನಿರ್ಮಾಣ ಮಾಡಲಿದ್ದಾರೆ ಎಂಬುದರ ಬಗ್ಗೆ ತಿಳಿದಿಲ್ಲ.

'ಅಚ್ಚರಿ' ನಂತರ 'ಅನಂತು ವರ್ಸಸ್ ನುಸ್ರತ್'

ಸುನಿಲ್ ತಾಳ್ಯ ನಿರ್ದೇಶನದ 'ಅಚ್ಚರಿ' ಚಿತ್ರೀಕರಣ ಈ ತಿಂಗಳ ಅಂತ್ಯದಲ್ಲಿ ಅಥವಾ ಆಗಸ್ಟ್ ನಲ್ಲಿ ಶುರುವಾಗಲಿದೆ. ಈ ಚಿತ್ರ ಮುಗಿದ ನಂತರ ವಿನಯ್ ರಾಜ್ ಕುಮಾರ್ 'ಅನಂತು ವರ್ಸಸ್ ನುಸ್ರತ್' ಚಿತ್ರದಲ್ಲಿ ಪಾಲ್ಗೊಳ್ಳಲಿದ್ದಾರಂತೆ.

English summary
Kannada Actor Vinay Rajakumar's forth movie has got title name 'Ananthu versus Nusrath'. The Movie will Direct By Sudhir Shanbhog.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada