»   » ವಿನಯ್ ರಾಜ್ ಹೊಸ ಚಿತ್ರ 'R The King' ಶುರು

ವಿನಯ್ ರಾಜ್ ಹೊಸ ಚಿತ್ರ 'R The King' ಶುರು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ದೊಡ್ಮನೆ ಹುಡುಗ, ಅಣ್ಣಾವ್ರ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಅವರ ಹೊಸ ಚಿತ್ರದ ಶೀರ್ಷಿಕೆ ಲಾಂಚ್ ಆಗಿದೆ. ಜೋಗಿ ಪ್ರೇಮ್ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ 'R The King' ಎಂದು ಹೆಸರಿಡಲಾಗಿದೆ.

ಸದಾ ಈ ರೀತಿಯ ಶೀರ್ಷಿಕೆಗಳಲ್ಲಿ ಕುತೂಹಲ ಮೂಡಿಸುವ ಜಾಣ್ಮೆ ಪ್ರೇಮ್ ಅವರಿಗಿದೆ. ಅವರ 'ಡಿಕೆ' ಚಿತ್ರವೂ ಇದೇ ರೀತಿ ಟೈಟಲ್ ನಲ್ಲೇ ಕುತೂಹಲ ಮೂಡಿಸಿತ್ತು. ಈ ಬಾರಿ ಅವರು 'R The King' ಎಂದು ಹೆಸರಿಡುವ ಮೂಲಕ ಚಿತ್ರ ಪ್ರೇಮಿಗಳು ತಲೆಕೆಡಿಸಿಕೊಳ್ಳುವಂತಾಗಿದೆ. [ಡಾ. ರಾಜ್ ನಟಿಸಿದಂತಹ ಕೌಟುಂಬಿಕ ಚಿತ್ರಗಳು ಮರಳಿ ಬರಬಹುದೇ?]

Vinay Rajkumar movie titled as R The King

ವರನಟ, ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಈ ಚಿತ್ರದ ಟೈಟಲ್ ಲಾಂಚ್ ಮಾಡಿದರು ಜೋಗಿ ಪ್ರೇಮ್. ಏಪ್ರಿಲ್ 24 ಮಧ್ಯರಾತ್ರಿ 12 ಗಂಟೆ 15 ನಿಮಿಷಕ್ಕೆ ಕಂಠೀರವ ಸ್ಟುಡಿಯೋದಲ್ಲಿನ ಅಣ್ಣಾವ್ರ ಸಮಾಧಿ ಬಳಿ ಚಿತ್ರದ ಶೀರ್ಷಿಕೆಯನ್ನು ಲಾಂಚ್ ಮಾಡಿದರು.

ಈ ಸಂದರ್ಭಕ್ಕೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್ ಸಾಕ್ಷಿಯಾದರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಉಪಸ್ಥಿತರಿದ್ದರು. ಪಜಲ್ ರೂಪದಲ್ಲಿದ್ದ 8x8 ಅಡಿ ವಿಸ್ತೀರ್ಣದ ಟೈಟಲನ್ನು ಜೋಡಿಸುವ ಮೂಲಕ ಶೀರ್ಷಿಕೆಯನ್ನು ಪ್ರಕಟಿಸಲಾಯಿತು.

ಮೇ.7ರಂದು ವಿನಯ್ ರಾಜ್ ಅವರ ಹುಟ್ಟುಹಬ್ಬದ ದಿನ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗುತ್ತಿದೆ. ಡಾ.ರಾಜ್ ಕುಮಾರ್ ಅರ್ಪಿಸುವ ಈ ಚಿತ್ರವನ್ನು ವಜ್ರೇಶ್ವರಿ ಕಂಬೈನ್ಸ್ ಗೆ ಬದಲಾಗಿ "ವಜ್ರೇಶ್ವರಿ ಹಾಸ್ಪಿಟಾಲಿಟೀಸ್" ಲಾಂಛನದಲ್ಲಿ ನಿರ್ಮಿಸಲಾಗುತ್ತಿದೆ.

ತಮ್ಮ ಚೊಚ್ಚಲ ಸಿದ್ದಾರ್ಥ ಚಿತ್ರದ ಮೂಲಕ ಇಡೀ ಸ್ಯಾಂಡಲ್ ವುಡ್ ನ ಗಮನಸೆಳೆದ ವಿನಯ್ ರಾಜ್ ಅವರ ಎರಡನೇ ಚಿತ್ರ ಇದಾಗಿದೆ. ಇನ್ನು ರಾಜ್ ಕುಟುಂಬದ ಚಿತ್ರ ಎಂದರೆ ಕೇಳಬೇಕೆ. ಕುಟುಂಬ ಸಮೇತ ನೋಡುವ ಚಿತ್ರಗಳಿಗೆ ಹೆಸರುವಾಸಿ. ಆದರೆ ಚಿತ್ರದ ಟೈಟಲ್ ಸಂಪೂರ್ಣ ಇಂಗ್ಲಿಷ್ ನಲ್ಲಿರುವುದು ಏಕೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. (ಫಿಲ್ಮಿಬೀಟ್ ಕನ್ನಡ)

English summary
Dr.Rajkumra grand son Vinay Rajkumar movie titled as 'R The King'. The title launched on the ocation of Dr Raj birth anniversary on 24th April midnight at Kanteeravara Studios. The movie is being directed by Prem under Vajreshwari Hospitalities.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada