ಶಿವಣ್ಣ, ಪುನೀತ್ ನಂತರ 'ಬಾಕ್ಸರ್' ಆದ ವಿನಯ್
ಕನ್ನಡದಲ್ಲಿ ಕ್ರೀಡಾ ಪ್ರಧಾನ ಸಿನಿಮಾಗಳು ಬರುತ್ತಿರುವುದು ಕಡಿಮೆಯಾಗುತ್ತಿದೆ. ಇದೇ ಸಮಯಕ್ಕೆ ಈಗ ಬಾಕ್ಸರ್ ಆಗಲು ವಿನಯ್ ರಾಜ್ ಕುಮಾರ್ ಹೊರಟಿದ್ದಾರೆ. ತಮ್ಮ ಹೊಸ ಸಿನಿಮಾದಲ್ಲಿ ವಿನಯ್ ಬಾಕ್ಸರ್ ಪಾತ್ರ ಮಾಡುತ್ತಿದ್ದಾರೆ.
ವಿಶೇಷ ಅಂದರೆ, ಈ ಹಿಂದೆ ನಟ ಶಿವರಾಜ್ ಕುಮಾರ್ ತಮ್ಮ 'ಯುವರಾಜ' ಸಿನಿಮಾದಲ್ಲಿ ಕಿಕ್ ಬಾಕ್ಸಿಂಗ್ ಮಾಡಿದ್ದರು. ಪುನೀತ್ ಸಹ 'ಮೌರ್ಯ' ಸಿನಿಮಾದಲ್ಲಿ ಬಾಕ್ಸರ್ ಆಗಿದ್ದರು. ಈಗ ರಾಜ್ ಕುಟುಂಬ ವಿನಯ್ ಕೂಡ ಬಾಕ್ಸರ್ ಆಗಿದ್ದಾರೆ.
ವಿನಯ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ ವಿಶೇಷವಾಗಿ ನಾಳೆ (ಮೇ 7) ರಂದು ಈ ಸಿನಿಮಾ ಲಾಂಚ್ ಆಗುತ್ತಿದೆ. ಕರಮ್ ಚಾವ್ಲಾ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ರಕ್ಷಿತ್ ಶೆಟ್ಟಿ ಚಿತ್ರಗಳಲ್ಲಿ ಇವರು ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು.

ಅಂದಹಾಗೆ, ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ವಿಭಿನ್ನ ಸಿನಿಮಾಗಳನ್ನು ಅವರು ನೀಡಿದ್ದು, ಇದೇ ಮೊದಲ ಬಾರಿಗೆ ಕ್ರೀಡಾ ಪ್ರಧಾನ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ. ಜೂನ್ ನಲ್ಲಿ ಸಿನಿಮಾದ ಶೂಟಿಂಗ್ ಶುರು ಆಗುತ್ತಿದೆ.
ಸಿನಿಮಾಗಾಗಿ ವಿನಯ್ ರಾಜ್ ಕುಮಾರ್ ಸಖತ್ ವರ್ಕ್ ಔಟ್ ಮಾಡಿದ್ದು, ವಿನಯ್ ಫೋಟೊಗಳು ಗಮನ ಸೆಳೆದಿವೆ. ಇಲ್ಲಿ ಅವರು ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟೈಟಲ್ ಇನ್ನು ಬಹಿರಂಗ ಆಗಿಲ್ಲ.


Click it and Unblock the Notifications











