For Quick Alerts
  ALLOW NOTIFICATIONS  
  For Daily Alerts

  ವಿನಯ್ ರಾಜ್‌ಕುಮಾರ್ 'ಪೆಪೆ' ಚಿತ್ರೀಕರಣದ ಕೆಲಸ ಎಲ್ಲಿಗೆ ಬಂತು?

  |

  ಅನಂತು ವರ್ಸಸ್ ನುಸ್ರತ್ ವಿನಯ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ. ಈ ಚಿತ್ರ ಬಿಡುಗಡೆಗೊಂಡು ನಾಲ್ಕು ವರ್ಷ ಕಳೆಯುತ್ತಿದ್ದು ವಿನಯ್ ರಾಜ್‌ಕುಮಾರ್ ಅಭಿನಯದ ಯಾವ ಚಿತ್ರ ಕೂಡ ಬಿಡುಗಡೆಯ ದಿನಾಂಕವನ್ನು ಘೋಷಿಸಿಲ್ಲ. ಮೊದಲಿಗೆ ವಿನಯ್ ಅಭಿನಯದ ಗ್ರಾಮಾಯಣ ಚಿತ್ರದ ಟೀಸರ್ ಬಿಡುಗಡೆಗೊಂಡಿತ್ತು, ನಂತರ ಪೆಪೆ ಚಿತ್ರದ ಟೀಸರ್ ಕೂಡ ಬಿಡುಗಡೆಗೊಂಡಿತ್ತು. ಅಷ್ಟೇ ಅಲ್ಲದೇ ವಿನಯ್ ರಾಜ್‌ಕುಮಾರ್ ಹಾಗೂ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದ ಟೆನ್ ಎಂಬ ಚಿತ್ರದ ಟೀಸರ್ ಕೂಡ ಬಿಡುಗಡೆಗೊಂಡಿತ್ತು.

  ಹೀಗೆ ಬಹುತೇಕ ಚಿತ್ರದ ಚಿತ್ರೀಕರಣ ಮುಗಿಸಿದ್ದ ವಿನಯ್ ರಾಜ್‌ಕುಮಾರ್ ಅವರ ಈ ಮೂರು ಚಿತ್ರಗಳಲ್ಲಿ ಯಾವುದೇ ಚಿತ್ರ ಕೂಡ ಚಿತ್ರದ ಬಿಡುಗಡೆ ದಿನಾಂಕವನ್ನು ಇಂದಿಗೂ ಸಹ ಘೋಷಿಸಲಿಲ್ಲ. ಆದರೆ ಇದೀಗ ಪೆಪೆ ಚಿತ್ರದ ಅಪ್‌ಡೇಟ್ ಅನ್ನು ಚಿತ್ರದ ನಿರ್ದೇಶಕ ಶ್ರೀಶೈಲ್ ಎಸ್ ನಾಯರ್ ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಗನ್ ಒಂದರ ಫೋಟೊವೊಂದನ್ನು ಟ್ವೀಟ್ ಮಾಡಿರುವ ಶ್ರೀಶೈಲ್ ನಾಯರ್ ಚಿತ್ರದ ಲಾಸ್ಟ್ ಶೆಡೂಲ್‌ನ ಚಿತ್ರೀಕರಣ ನಡೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ.

  ಇನ್ನು ಈ ಅಪ್‌ಡೇಟ್‌ ಕುರಿತಾಗಿ ಪ್ರತಿಕ್ರಿಯಿಸಿರುವ ನೆಟ್ಟಿಗರು ಇನ್ನೂ ಚಿತ್ರೀಕರಣ ಮುಗಿದಿಲ್ವ ನಾವೆಲ್ಲೋ ಚಿತ್ರೀಕರಣ ಮುಗಿದು ಎಡಿಟಿಂಗ್ ಕೆಲಸಗಳು ನಡೆಯುತ್ತಿರಬೇಕು ಎಂದು ಊಹಿಸಿದ್ವಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ನಿರ್ದೇಶಕ ಶ್ರೀಶೈಲ್ ಎಸ್ ನಾಯರ್ ದೊಡ್ಡ ಮಟ್ಟದ ವಿಶ್ವಾಸ ಹೊಂದಿದ್ದಾರೆ ಎಂಬುದನ್ನು ಚಿತ್ರದ ಕುರಿತಾಗಿ ಅವರು ಮಾಡುವ ಟ್ವೀಟ್ ಮೂಲಕವೇ ತಿಳಿಯಬಹುದಾಗಿದೆ.

  ಇನ್ನು ಪೆಪೆ ಚಿತ್ರದ ಟೀಸರ್ ಕೂಡ ಕುತೂಹಲಕಾರಿಯಾಗಿದ್ದು ಮತ್ತೊಂದು ಪ್ರಯೋಗಾತ್ಮಕ ಚಿತ್ರದಲ್ಲಿ ನಟ ವಿನಯ್ ರಾಜ್‌ಕುಮಾರ್ ಅಭಿನಯಿಸುತ್ತಿರುವುದು ಖಚಿತವಾಗಿದೆ. ಇನ್ನು ವಿನಯ್ ರಾಜ್‌ಕುಮಾರ್ ಹಾಗೂ ಪುಷ್ಕರ ಮಲ್ಲಿಕಾರ್ಜುನಯ್ಯ ಕಾಂಬಿನೇಶನ್‌ನ ಟೆನ್ ಚಿತ್ರ ಡಿಸೆಂಬರ್ 9ಕ್ಕೆ ಬಿಡುಗಡೆಗೊಳ್ಳಲಿದೆ ಎಂಬ ಸುದ್ದಿಯೂ ಸಹ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ.

  Read more about: vinay rajkumar sandalwood
  English summary
  Vinay Rajkumar's Pepe movie's final shedule shooting started
  Friday, November 11, 2022, 6:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X