Don't Miss!
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- News
Breaking: ರಾಜಸ್ಥಾನದ ಭರತ್ಪುರದಲ್ಲಿ ಚಾರ್ಟರ್ಡ್ ವಿಮಾನ ಪತನ!
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಣ್ಣನ ಮಗನ ಹೊಸ ಸಿನಿಮಾಕ್ಕೆ ಶುಭ ಹಾರೈಸಿದ ಪುನೀತ್ ರಾಜ್‌ಕುಮಾರ್
ನಟ ಪುನೀತ್ ರಾಜ್‌ಕುಮಾರ್ ನಟಿಸಿದ್ದ 'ನಮ್ಮ ಬಸವ' ಸಿನಿಮಾದಲ್ಲಿ 'ಅಂದೊದಿತ್ತು ಕಾಲ, ಸುರಯ್ಯಾ, ಮಧು ಬಾಲಾ' ಎಂದು ಹಾಡಿ ಕುಣಿದಿದ್ದು ನೆನಪಿರಬಹುದು. ಈಗ ಅದೇ ಹೆಸರಿನಲ್ಲಿ ಸಿನಿಮಾ ವೊಂದು ಬರುತ್ತಿದ್ದು, ಸಿನಿಮಾ ನಾಯಕ ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್.
Recommended Video
ನಾಗರಬಾವಿಯ ವಿನಾಯಕ ವೆಂಟೇಶ್ವರ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತ ನಡೆದಿದ್ದು, ನಟ ಪುನೀತ್ ರಾಜ್‌ಕುಮಾರ್ ಅವರು ಸಿನಿಮಾ ಕ್ಲ್ಯಾಪ್ ಮಾಡಿ ಶುಭಕೋರಿದರು.
ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ಎದುರು ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ. ಜೊತೆಗೆ ಈ ಸಿನಿಮಾ ಮೂಲಕ ಕಿರುತೆರೆಯಿಂದ ಹಿರಿತೆರೆಗೆ ಪ್ರಮೋಷನ್ ಗಿಟ್ಟಿಸಿಕೊಂಡಿದ್ದಾರೆ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಿಶಾ.
ಸಿನಿಮಾದಲ್ಲಿನ ತಮ್ಮ ಪಾತ್ರ ಹಾಗೂ ಕತೆಯ ಬಗ್ಗೆ ಮಾತನಾಡಿದ ವಿನಯ್ ರಾಜ್‌ಕುಮಾರ್, 'ಸಿನಿಮಾದಲ್ಲಿ ನನ್ನದು ಸಿನಿಮಾ ನಿರ್ದೇಶಕನ ಪಾತ್ರ. ಸಿನಿಮಾವು ಕೆಲವು ದಶಕಗಳ ಹಿಂದಿನ ಸಮಾಜವನ್ನು, ಮಾನವ ಸಂಬಂಧದಲ್ಲಿದ್ದ ತೀವ್ರತೆಯನ್ನು ತೆರೆದಿಡುತ್ತದೆ' ಎಂದರು.

1990 -2005 ರ ನಡೆವ ಕತೆ 'ಅಂದೊಂದಿತ್ತು ಕಾಲ'
ಸಿನಿಮಾವು 1990 -2005 ರ ನಡೆವ ಕತೆಯಾಗಿದ್ದು, ಅಂದಿನ ದಿನಗಳು ಹೇಗಿದ್ದವು, ಅಂದಿನ ಸಮಾಜ ಹೇಗಿತ್ತು, ಜನರು ಹೇಗಿದ್ದರು, ಜನಗಳ ನಡುವಿನ ಸಂಬಂಧ ಹೇಗಿತ್ತು ಎಂಬುದನ್ನು ತೋರಿಸುವ ಸಿನಿಮಾ ಇದಾಗಿರಲಿದೆ ಎಂದರು ವಿನಯ್ ರಾಜ್‌ಕುಮಾರ್.

ಮೂರು ಭಿನ್ನ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ: ವಿನಯ್
'ಮೂರು ಭಿನ್ನ ಶೇಡ್‌ನಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ. 16, 21, 26 ರ ವಯಸ್ಸಿನ ವ್ಯಕ್ತಿಯಾಗಿ ನಾನು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತೇನೆ. ಬಹಳ ಫ್ರೆಶ್ ಮೂಡ್‌ನಲ್ಲಿ ಸಿನಿಮಾದ ಚಿತ್ರೀಕರಣಕ್ಕೆ ಇಳಿದಿದ್ದೇನೆ' ಎಂದರು ವಿನಯ್.

ನನಗೆ ಉಪೇಂದ್ರ ಎಂದರೆ ಬಹಳ ಇಷ್ಟ: ವಿನಯ್
ತಮ್ಮ ಮೆಚ್ಚಿನ ನಿರ್ದೇಶಕರ ಬಗ್ಗೆಯೂ ಮಾತನಾಡಿದ ವಿನಯ್, 'ನನಗೆ ಉಪೇಂದ್ರ ಎಂದರೆ ಬಹಳ ಇಷ್ಟ. ಮೊದಲಿನಿಂದಲೂ ಅವರ ನಿರ್ದೇಶನದ ಅಭಿಮಾನಿ, ಅವರು ನಿರ್ದೇಶಿಸಿ, ನಟಿಸಿರುವ ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದೇನೆ' ಎಂದರು ವಿನಯ್.

ನಾನು ರಾಜ್‌ಕುಮಾರ್ ಅವರ ಅಭಿಮಾನಿ: ಅದಿತಿ
ಅದಿತಿ ಪ್ರಭುದೇವ ಮಾತನಾಡಿ, 'ನಾನು ರಾಜ್‌ಕುಮಾರ್ ಅವರ ಅಭಿಮಾನಿ, ಮೊದಲ ಬಾರಿಗೆ ಅವರ ಕುಟುಂಬದವರೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ. ಈವರೆಗೆ ನಾನು ನಟಿಸಿರುವ ಪಾತ್ರಗಳಲ್ಲಿ ಇದು ಸ್ವಲ್ಪ ಭಿನ್ನ. ಸಿನಿಮಾದಲ್ಲಿ ಭಾವನೆಗಳಿಗೆ ಹೆಚ್ಚು ಅವಕಾಶ. ಮಧ್ಯಮವರ್ಗದ ಹುಡುಗಿಯಾಗಿ ನಟಿಸಲಿದ್ದೇನೆ, ಎರಡು ಲುಕ್‌ನಲ್ಲಿ ನಾನಿಲ್ಲಿ ಕಾಣಿಸಿಕೊಳ್ಳಲಿದ್ದೇನೆ' ಎಂದರು.