Just In
Don't Miss!
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- News
ಮಕ್ಕಳಿಗೆ ಯಾವ ಕೊರೊನಾ ಲಸಿಕೆ ಸೂಕ್ತ; ಏಮ್ಸ್ ನಿರ್ದೇಶಕರ ಸಲಹೆ
- Sports
ಐಪಿಎಲ್ 2021: ಆರ್ಸಿಬಿ ಉಳಿಸಿಕೊಂಡಿರುವ ಆಟಗಾರರ ಸಂಪೂರ್ಣ ಪಟ್ಟಿ
- Automobiles
ಅನಾವರಣಕ್ಕೂ ಮುನ್ನ ಹೊಸ ಕಿಗರ್ ಕಾರಿನ ಟೀಸರ್ ಬಿಡುಗಡೆ ಮಾಡಿದ ರೆನಾಲ್ಟ್
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Finance
ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6%ಗೂ ಹೆಚ್ಚು ಗಳಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
20ರ ಸಂಭ್ರಮದಲ್ಲಿ ಸಾಹಸಸಿಂಹನ 'ಸೂರ್ಯವಂಶ'
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಚಿತ್ರಗಳಲ್ಲಿ 'ಸೂರ್ಯವಂಶ' ಮೊದಲ ಸಾಲಲ್ಲಿ ಇದೆ. 2000 ರಲ್ಲಿ ತೆರೆಗೆ ಬಂದ 'ಸೂರ್ಯವಂಶ' ವಿಷ್ಣುವರ್ಧನ್ ಸಿನಿ ಜೀವನದಲ್ಲೆ ದೊಡ್ಡ ಯಶಸ್ಸು ಕಂಡ ಸಿನಿಮಾವಾಗಿತ್ತು. 'ಸೂರ್ಯವಂಶ' ಪಕ್ಕ ಕೌಟುಂಬಿಕ ಮನರಂಜನೆಯ ಸಿನಿಮಾ. ಇಂದಿಗೂ ಸಹ 'ಸೂರ್ಯವಂಶ' ಚಿತ್ರ ಟಿವಿಯಲ್ಲಿ ಬಂದರೆ ಅದೆ ಕ್ರೇಸ್, ಅಷ್ಟೆ ಕುತೂಹಲ, ಆಸಕ್ತಿಯಿಂದ ಮನೆ ಮಂದಿಯೆಲ್ಲಾ ಕುಳಿತು ಸಿನಿಮಾ ನೋಡುತ್ತಾರೆ.
'ಸೂರ್ಯವಂಶ' ಸಿನಿಮಾ ತೆರೆಕಂಡು 20 ವರ್ಷ ಪೂರೈಸುತ್ತಿದೆ. ಕಳೆದ 20 ವರ್ಷಗಳ ಹಿಂದೆ ಇದೆ ದಿನ ಅಂದ್ರೆ ಜೂನ್ 15ಕ್ಕೆ ಸಾಹಸಿಂಹ 'ಸೂರ್ಯವಂಶ'ದ ಸತ್ಯಮೂರ್ತಿಯಾಗಿ ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಶುರು ಮಾಡಿಕೊಂಡಿದ್ದರು. ಸತ್ಯಮೂರ್ತಿ ಮತ್ತು ಕನಕ ಎನ್ನುವ ದ್ವಿ-ಪಾತ್ರದಲ್ಲಿ ವಿಷ್ಣುವರ್ಧನ್ ಮಿಂಚಿದ್ದರು.
ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಆಯ್ಕೆ ಆದ ನಿರ್ದೇಶಕ ಎಸ್.ನಾರಾಯಣ್
ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾ ಇದಾಗಿತ್ತು. ರೀಮೇಕ್ ಸಿನಿಮಾ ಆದರು ಕನ್ನಡದಲ್ಲಿ ಯಶಸ್ಸು ಕಂಡಷ್ಟು ಬೇರೆ ಯಾವ ಭಾಷೆಯಲ್ಲು ಇಷ್ಟು ದೊಡ್ಡ ಮಟ್ಟಿಗೆ ಸಕ್ಸಸ್ ಕಂಡಿರಲ್ಲಿಲ್ಲ. ಸದ್ಯ 20 ಸಂಭ್ರಮದಲ್ಲಿರುವ 'ಸೂರ್ಯವಂಶ' ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಎಸ್ ನಾರಾಯಣ್ ಹಂಚಿಕೊಂಡಿದ್ದಾರೆ. ಮುಂದೆ ಓದಿ..

ಸಾಹಸಸಿಂಹ-ನಾರಾಯಣ್ ಎರಡನೆ ಸಿನಿಮಾ
ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದಾಗಿರುವ 'ಸೂರ್ಯವಂಶ' ಎಸ್.ನಾರಾಯಣ್ ಮತ್ತು ವಿಷ್ಣುವರ್ಧನ್ ಅವರ ಕಾಂಬಿನೇಶನ್ ನಲ್ಲಿ ಮೂಡಿ ಬಂದ ಎರಡನೆ ಸಿನಿಮಾ ಆಗಿತ್ತು. 'ಸೂರ್ಯವಂಶ' ತೆರೆಕಂಡ ವರ್ಷವೆ ಎಸ್ ನಾರಾಯಣ್ ಮತ್ತು ವಿಷ್ಣುವರ್ಧನ್ ಅವರ ಕಾಂಬಿನೇಶನ್ ನಲ್ಲಿ 'ವೀರಪ್ಪ ನಾಯ್ಕ' ಸಿನಿಮಾ ತೆರೆಕಂಡಿತ್ತು. ಆ ಸಿನಿಮಾ ಕೂಡ ಉತ್ತಮ ಪ್ರದರ್ಶನ ಕಾಣುವ ಮೂಲಕ ದೊಡ್ಡ ಯಶಸ್ಸು ಕಂಡಿತ್ತು.

ಅಮಿತಾಭ್-ರಜನಿ ಕಾಂತ್ ಮೆಚ್ಚಿದ ಸಿನಿಮಾ
'ಸೂರ್ಯವಂಶ' ಸಿನಿಮಾ ರಿಲೀಸ್ ಆಗಿ ದೊಡ್ಡ ಮಟ್ಟಿಗೆ ಚರ್ಚೆಯಾಗುತ್ತಿತ್ತು. ಬೆಂಗಳೂರಿನಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಿದ ಸಂದರ್ಭದಲ್ಲಿ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್, ರಜನಿಕಾಂತ್, ವಿಕ್ಟರಿ ವೆಂಕಟೇಶ್ ಸೇರಿದಂತೆ ಅನೇಕ ಸ್ಟಾರ್ ನಟರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರಂತೆ.
ಎಸ್ ನಾರಾಯಣ್ ಗೆ 40 ಲಕ್ಷ ರೂಪಾಯಿ ಮೋಸ ಮಾಡಿದ ಜೋತಿಷಿ!

ಸತ್ಯಮೂರ್ತಿ ಪಾತ್ರಕ್ಕೆ ಡಾ.ರಾಜ್ ಫಿದಾ
'ಸೂರ್ಯವಂಶ' ಸಿನಿಮಾದಲ್ಲಿ ಎಲ್ಲರ ಅಚ್ಚುಮೆಚ್ಚಿನ ಮತ್ತು ಚಿತ್ರದ ಬಹುಮುಖ್ಯವಾದ ಪಾತ್ರ ಅಂದ್ರೆ ಸತ್ಯಮೂರ್ತಿ ಪಾತ್ರ. ಡಾ.ರಾಜ್ ಕುಮಾರ್ ಕೂಡ ಈ ಪಾತ್ರಕ್ಕೆ ಫಿದಾ ಆಗಿದ್ರಂತೆ. ಸಿನಿಮಾ ನೋಡಿ ವಿಷ್ಣುವರ್ಧನ್ ಅವರಿಗೆ ಫೋನ್ ಮಾಡಿದ್ರಂತೆ ರಾಜ್ ಕುಮಾರ್. ಸತ್ಯಮೂರ್ತಿ ಪಾತ್ರವನ್ನು ಹೊಗಳಿ, ಸಿನಿಮಾದಲ್ಲಿ ವಿಷ್ಣುವರ್ಧನ್ ಅವರಿಗೆ ಮೀಸೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅಷ್ಟು ಸುಲಭವಾಗಿ ಎಲ್ಲರಿಗೂ ಸೂಕ್ತವಾಗುವುದಿಲ್ಲ ಎಂದು ಹೇಳಿದ್ರಂತೆ.

ತಮಿಳು ಚಿತ್ರದ ರೀಮೇಕ್
ಕನ್ನಡ 'ಸೂರ್ಯವಂಶ' ಸಿನಿಮಾ ತಮಿಳಿನ ರೀಮೇಕ್ ಚಿತ್ರವಾಗಿತ್ತು. ಅಲ್ಲದೆ ಕನ್ನಡ ಮಾತ್ರವಲ್ಲದೆ ಅನೇಕ ಭಾಷೆಗಳಲ್ಲಿ ಸಿನಿಮಾ ರೀಮೇಕ್ ಆಗಿ 'ಸೂರ್ಯವಂಶ' ಹೆಸರಿನಲ್ಲಿಯೆ ರಿಲೀಸ್ ಆಗಿತ್ತು. ಆದ್ರೆ ಕನ್ನಡದಲ್ಲಿ ಯಶಸ್ಸು ಗಳಿಸಿದಷ್ಟು ಬೇರೆ ಯಾವ ಭಾಷೆಯಲ್ಲು ಸಿನಿಮಾ ಸಕ್ಸಸ್ ಕಂಡಿರಲಿಲ್ಲ. ಅಷ್ಟು ದೊಡ್ಡ ಮಟ್ಟಿಗೆ ಹಿಟ್ ಆಗಿತ್ತು ಸಿನಿಮಾ.
'ಭೂಮಿಪುತ್ರ' ಸಿನಿಮಾ ಶುರುವಾಗದಿರಲು ಕಾರಣ ಎಚ್.ಡಿ.ಕೆ.!

ವಿಷ್ಣು ಇಮೇಜ್ ಬದಲಾಯಿಸಿದ ಸಿನಿಮಾ
ಡಾ.ವಿಷ್ಣುವರ್ಧನ್ ಅವರು 'ಸೂರ್ಯವಂಶ' ಚಿತ್ರದಲ್ಲಿ ಮಾಡಿದ ಪಾತ್ರವನ್ನು ಹಿಂದೆಂದೂ ಮಾಡಿರಲ್ಲಿಲ್ಲ. ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಷ್ಣುವರ್ಧನ್ ಅವರ ಸತ್ಯಮೂರ್ತಿ ಪಾತ್ರಕ್ಕೆ ದೊಡ್ಡ ಮಟ್ಟದ ಮೆಚ್ಚುಗೆ ಗಳಿಸಿತ್ತು. ಅಲ್ಲಿಂದ ವಿಷ್ಣುವರ್ಧನ್ ಅವರ ಇಮೇಜ್ ಕೂಡ ಬದಲಾಗಿ ಹೋಯಿತು. ಹಾಡುಗಳು ಕೂಡ ಅಷ್ಟೆ ಅದ್ಭುತವಾಗಿದ್ದವು. ವಿ ಮನೋಹರ್ ಅವರಿಗೂ ಮತ್ತೊಂದು ಬ್ರೇಕ್ ತಂದುಕೊಟ್ಟ ಸಿನಿಮಾ ಆಗಿತ್ತು.

ಹೆಚ್.ಡಿ ಕುಮಾರಸ್ವಾಮಿ ನಿರ್ಮಾಣ
ಹೆಚ್.ಡಿ ಕುಮಾರಸ್ವಾಮಿ ನಿರ್ಮಾಣದಲ್ಲಿ ಮೂಡಿ ಬಂದ ಮೊದಲ ಸಿನಿಮಾ ಇದಾಗಿತ್ತು. ಮೊದಲ ಸಿನಿಮಾದಲ್ಲಿ ದೊಡ್ಡ ಮಟ್ಟಿಗೆ ಯಶಸ್ಸು ಗಳಿಸಿದ್ರು. ಎಸ್ ನಾರಾಯಣ್ ಹೇಳುವ ಪ್ರಕಾರ ಅಂದು ವ್ಯಾಪಾರ ದೃಷ್ಟಿಯಿಂದ ಈ ಸಿನಿಮಾ ಮಾಡದೆ, ಉತ್ತಮ ಸಿನಿಮಾ ಮಾಡಿಕೊಡಿ ಎಂಬುದುವು ಮಾತ್ರ ಕುಮಾರಸ್ವಾಮಿ ಅವರ ಮಾತಾಗಿತ್ತಂತೆ. ಅದರಂತೆ ಸಿನಿಮಾ ದೊಡ್ಡ ಮಟ್ಟಿಗೆ ಸಕ್ಸಸ್ ಕಂಡು ಕುಮಾರಸ್ವಾಮಿ ದೊಡ್ಡ ನಿರ್ಮಾಪಕರಾಗಿ ಹೊರ ಹೊಮ್ಮಲು ಕಾರಣವಾದ ಸಿನಿಮಾ ಇದು.