»   » ಎ.ಆರ್ ರೆಹಮಾನ್ ಸಂಗೀತದ ಚಿತ್ರದಲ್ಲಿ ಹಾಡಿದ ಬೆಳಗಾವಿ ಬಾಲಕ

ಎ.ಆರ್ ರೆಹಮಾನ್ ಸಂಗೀತದ ಚಿತ್ರದಲ್ಲಿ ಹಾಡಿದ ಬೆಳಗಾವಿ ಬಾಲಕ

Posted By:
Subscribe to Filmibeat Kannada

ಹಿಂದಿಯ ಖ್ಯಾತ ಸಿಂಗಿಂಗ್ ರಿಯಾಲಿಟಿ ಶೋ 'ದಿ ವಾಯ್ಸ್ ಇಂಡಿಯಾ ಕಿಡ್ಸ್' ಕಾರ್ಯಕ್ರಮದಲ್ಲಿ ಫೈನಲ್ ಹಂತ ತಲುಪಿ ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದ ಬೆಳಗಾವಿ ಬಾಲಕ ವಿಶ್ವಪ್ರಸಾದ್ ಗಣಗಿ ಈಗ ಮತ್ತೊಂದು ಸಾಧನೆ ಮಾಡಿದ್ದಾರೆ.

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಸಂಗೀತ ನೀಡಿರುವ ತಮಿಳು ಚಿತ್ರದಲ್ಲಿ ಹಾಡುವ ಮೂಲಕ ದಕ್ಷಿಣ ಭಾರತದ ಗಮನ ಸೆಳೆದಿದ್ದಾನೆ. ಈ ಮೂಲಕ ಕರ್ನಾಟಕದ ಕೀರ್ತಿ ಪತಾಕೆಯನ್ನ ರಾಷ್ಟ್ರ ಮಟ್ಟದಲ್ಲಿ ಹಾರಿಸುತ್ತಿದ್ದಾರೆ.

Vishwaprasad Ganagi has sung for AR Rehman for Mersal

ಹೌದು, ತಮಿಳು ನಟ ವಿಜಯ್ ಅಭಿನಯದ 'ಮೆರ್ಸಲ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗಷ್ಟೇ ಚೆನ್ನೈನಲ್ಲಿ ನಡೆಯಿತು. ಈ ಚಿತ್ರದ ಟೈಟಲ್ ಹಾಡಿನಲ್ಲಿ ಖ್ಯಾತ ಗಾಯಕರ ಜೊತೆಯಲ್ಲಿ ಬೆಳಗಾವಿಯ ವಿಶ್ವಪ್ರಸಾದ್ ಕೂಡ ಧ್ವನಿಯಾಗಿದ್ದಾರೆ. ಅದೇ ಹಾಡನ್ನ ವೇದಿಕೆ ಮೇಲೆ ಮತ್ತೆ ಹಾಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.

'ಮೆರ್ಸಲ್' ಚಿತ್ರಕ್ಕೆ ಎ.ಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದು, ಟೈಟಲ್ ಹಾಡನ್ನ ಜಿವಿ ಪ್ರಕಾಶ್, ನರೇಶ್ ಐಯರ್, ಶರಣ್ಯ ಶ್ರೀನಿವಾಸ್ ಮತ್ತು ಕರ್ನಾಟಕದ ವಿಶ್ವಪ್ರಸಾದ್ ಗಣಗಿ ಹಾಡಿದ್ದಾರೆ. ವಿವೇಕ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

Vishwaprasad Ganagi has sung for AR Rehman for Mersal

'ವಾಯ್ಸ್ ಇಂಡಿಯಾ ಕಿಡ್ಸ್' ಫೈನಲ್ ಗೆ 'ಬೆಳಗಾವಿ ಬಾಲಕ ವಿಶ್ವ ಪ್ರಸಾದ್'

11 ವರ್ಷದ ಈ ವಿಶ್ವ ಪ್ರಸಾದ್‌ ಗಣಗಿ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ ಗ್ರಾಮದವನು. ತಮ್ಮ ಮನೆಯಿಂದ 40 ಕಿಮಿ ದೂರದಲ್ಲಿರುವ ಸಂಗೀತ ಶಾಲೆಗೆ ಹೋಗಿ ಮ್ಯೂಸಿಕ್‌ ಕಲಿಯುತ್ತಿರುವ ವಿಶ್ವಪ್ರಸಾದ್ ಗೆ ಅವರ ತಂದೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಸಂಗೀತ ಮಾತ್ರವಲ್ಲದೆ ತಮ್ಮ ಶಾಲೆಯ ಆಟ ಮತ್ತು ಪಾಠಗಳಲ್ಲಿಯೂ ಮುಂದಿರುವ ವಿಶ್ವಪ್ರಸಾದ್ ಶಾಲೆಯಲ್ಲಿ Rank ವಿದ್ಯಾರ್ಥಿ ಆಗಿದ್ದಾರೆ.

English summary
Belagavi boy Vishwaprasad Ganagi has sung for AR Rehman for the Tamil movie Mersal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada