»   » ಕನ್ನಡಕ್ಕೆ 'ವೋಡ್ಕಾ ವಿತ್ ವರ್ಮಾ' ತಂದ ಸೃಜನ್

ಕನ್ನಡಕ್ಕೆ 'ವೋಡ್ಕಾ ವಿತ್ ವರ್ಮಾ' ತಂದ ಸೃಜನ್

Posted By:
Subscribe to Filmibeat Kannada

ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಬಗ್ಗೆ ಎಷ್ಟು ಗೊತ್ತು? ಚಲನಚಿತ್ರ ರಂಗದೊಂದಿಗಿನ ಅವರ ಒಡನಾಟ, ವೋಡ್ಕಾ ಜೊತೆಗಿನ ಅವರ ನಂಟು, ಸೆಕ್ಸ್ ಬಗೆಗಿನ ಅವರ ಜೀವನ ಹೀಗೆ ಹತ್ತು ಹಲವು ಮುಖಗಳನ್ನು ತೆರೆದಿಡುವ ಪ್ರಯತ್ನ ಮಾಡುತ್ತದೆ 'ವೋಡ್ಕಾ ವಿತ್ ವರ್ಮಾ' ಕೃತಿ.

ತೆಲುಗಿನಲ್ಲಿ ಬಿಡುಗಡೆಯಾಗಿ ಭರ್ಜರಿ ಮಾರಾಟವಾಗಿರುವ ಈ ಕೃತಿಯನ್ನು ಈಗ ಕನ್ನಡಕ್ಕೆ ಅನುವಾದಿಸಿ ತಂದಿದ್ದಾರೆ ಸೃಜನ್. ಈಗಾಗಲೆ ವರ್ಮಾ ಅವರೇ ತಮ್ಮ ಆತ್ಮಕಥೆಯನ್ನು 'ನಾ ಇಷ್ಟಂ' ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಆ ಬಳಿಕ ವರ್ಮಾ ಅವರ ಶಿಷ್ಯ ಅವರನ್ನು ಹತ್ತಿರದಿಂದ ಕಂಡಿರುವ ಸಿರಾಶ್ರೀ ಎಂಬುವವರು ತೆಲುಗಿನಲ್ಲಿ 'ವೋಡ್ಕಾ ವಿತ್ ವರ್ಮಾ' ಕೃತಿ ತಂದಿದ್ದರು. ['ಹೆಣ್ಣೆಂದರೆ ಕೇವಲ ಕಾಮತೃಷೆ ತೀರಿಸುವ ವಸ್ತು']

Vodka With Varma

ಇದೀಗ ಅನುವಾದಕ ಹಾಗೂ ವ್ಯಂಗ್ಯಚಿತ್ರಕಾರ ಸೃಜನ್ ಅವರು 'ವೋಡ್ಕಾ ವಿತ್ ವರ್ಮಾ' ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಜೊತೆಗೆ ವರ್ಮಾ ಅವರ 'ನನ್ನಿಷ್ಟ' (ತೆಲುಗು ಮೂಲ ಕೃತಿ 'ನಾ ಇಷ್ಟಂ') ಕೃತಿಯನ್ನೂ ಅನುವಾದಿಸಿದ್ದಾರೆ. ಈ ಎರಡೂ ಕೃತಿಗಳನ್ನು ಶೀಘ್ರದಲ್ಲೇ ಬೆಂಗಳೂರಿನಲ್ಲಿ ಬಿಡುಗಡೆ ಮಾಡುವುದಾಗಿ ಸೃಜನ್ ತಿಳಿಸಿದ್ದಾರೆ.

ಇನ್ನೊಂದು ವಿಶೇಷ ಎಂದರೆ ಕಿಚ್ಚ ಸುದೀಪ್ ಅವರು 'ನನ್ನಿಷ್ಟ' ಕೃತಿಗಾಗಿ ವಿಶೇಷ ಲೇಖನವನ್ನೂ ಬರೆದುಕೊಟ್ಟಿರುವುದು. ವರ್ಮಾ ಜೊತೆ ಅವರು ಫೂಂಕ್, ರಣ್, ರಕ್ತ ಚರಿತ್ರ 1, ರಕ್ತ ಚರಿತ್ರ 2 ಚಿತ್ರಗಳಲ್ಲಿ ಅಭಿನಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ತೆಲುಗು ಕೃತಿ 'ವೋಡ್ಕಾ ವಿತ್ ವರ್ಮಾ' ಬಿಡುಗಡೆಯಾಗಿ ಯಶಸ್ವಿ ಮಾರಾಟ ಕಂಡಿದೆ. ತೆಲುಗು ಓದುಗರಿಗೆ ಕೃತಿ ಇಷ್ಟವಾಗಿದೆ. ಇದೀಗ ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.

ವೋಡ್ಕಾ ಬಗೆಗಿನ ವರ್ಮಾ ಪ್ರೀತಿ, ಸೆಕ್ಸ್ ಬಗೆಗಿನ ಅವರ ಅನಿಸಿಕೆ, ಅವರ ಸೆಕ್ಸ್ ಲೈಫ್, ಮಕ್ಕಳು, ಅವರ ನೆಚ್ಚಿನ ನಟಿಯರು, ಮಹಾಭಾರತ, ರಾಮಾಯಾಣ...ಹೀಗೆ ಎಲ್ಲವನ್ನೂ ಈ ಪುಸ್ತಕದಲ್ಲಿ ವರ್ಮಾ ಹಂಚಿಕೊಂಡಿದ್ದಾರೆ.

ವೋಡ್ಕಾ ವಿತ್ ವರ್ಮಾ' ಪುಸ್ತಕದಲ್ಲಿ ಒಟ್ಟು ನಲವತ್ತು ಅಧ್ಯಾಯಗಳಿವೆ. ಒಂದೊಂದಕ್ಕೂ ಒಂದು ವಿಭಿನ್ನ ಹೆಸರು ನೀಡಲಾಗಿದೆ. ಪೆಗ್ಸ್, ಸೋಡಾ, ವಾಟರ್, ಬಾಟಮ್ ಅಪ್ಸ್...ಹೀಗೆ ಹೆಸರಿಡಲಾಗಿದೆ. ಇದಿಷ್ಟೇ ಅಲ್ಲದೆ ಅವರ ವಿಚ್ಛೇದಿತ ಪತ್ನಿಯ ಸಂದರ್ಶನ ಕೂಡ ಇದೆ. (ಏಜೆನ್ಸೀಸ್)

English summary
A Telugu book on the life history of Ram Gopal Varma by name 'Vodka with Varma' is now available in Kannada same name by Srujan, popular translator and cartoonist. Film critic turned lyricist Sira Sri has written the Telugu book, which has interviews with RGV's daughter, wife and other close associates.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada