For Quick Alerts
  ALLOW NOTIFICATIONS  
  For Daily Alerts

  ಕುಡ್ಲದ ಬಾಲೆ ಅನುಷ್ಕಾಗೆ ಭರ್ಜರಿ ಗಿಫ್ಟ್

  By ಜೇಮ್ಸ್ ಮಾರ್ಟಿನ್
  |

  ಕರ್ನಾಟಕ ಕರಾವಳಿ ಮೂಲದ ಬೆಡಗಿ ಅನುಷ್ಕಾ ಶೆಟ್ಟಿ ಗೆ ನಿನ್ನೆ ದಿನ ಭರ್ಜರಿ ಗಿಫ್ಟ್ ಸಿಕ್ಕಿದೆ. 32ನೇ ಹುಟ್ಟುಹಬ್ಬ ಆಚರಿಸಿಕೊಂಡ ಸಪೂರ ಸುಂದರಿಗೆ ಗಿಫ್ಟ್ ಸಿಗುವುದು ಮಾಮೂಲಿ ಎನ್ನಬಹುದು ಆದರೆ, ಅನುಷ್ಕಾ ಅವರಿಗೆ ಗಿಫ್ಟ್ ನೀಡಿದ್ದು ನಿರ್ದೇಶಕರಿಬ್ಬರು ಎಂಬುದು ವಿಶೇಷ. ಅನುಷ್ಕಾ ಸದ್ಯಕ್ಕೆ ಬಾಹುಬಲಿ ಹಾಗೂ ರುದ್ರಮಾದೇವಿ ಎರಡು ಮಹತ್ವದ ಚಿತ್ರಗಳಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಬಾಹುಬಾಲಿ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಬಾಹುಬಲಿ ಚಿತ್ರದಲ್ಲಿನ ವರ್ಕಿಂಗ್ ಸ್ಟಿಲ್ಸ್ ಮೇಕಿಂಗ್ ಹಾಗೂ ದೇವಸೇನಾ ಪಾತ್ರಧಾರಿಯಾಗಿ ಅನುಷ್ಕಾ ಶೆಟ್ಟಿ ಹೇಗೆ ಕಾಣುತ್ತಾರೆ ಎಂಬ ಕುತೂಹಲ ತಣಿಸಲು ವಿಡಿಯೋ ತುಣುಕನ್ನು ಬಿಡುಗಡೆ ಮಾಡಿ ಅನುಷ್ಕಾಗೆ ಶುಭ ಹಾರೈಸಿದ್ದರು . ಈ ವಿಡಿಯೋ ಯುಟ್ಯೂಬ್ ನಲ್ಲಿ ಸದ್ಯಕ್ಕೆ 447,023 ಹಿಟ್ಸ್ ಪಡೆದಿದೆ.

  ಈ ಹಿಂದೆ ಬಾಹುಬಲಿ ಚಿತ್ರದ ನಾಯಕ ಪ್ರಭಾಸ್ ಅವರ ಹುಟ್ಟುಹಬ್ಬದ ದಿನ(ಅಕ್ಟೋಬರ್ 23) ಸ್ಟಿಲ್ಸ್ ಇರುವ ಮೇಕಿಂಗ್ ವಿಡಿಯೋ 1462442 ಹಿಟ್ಸ್ ಪಡೆದು ದಾಖಲೆ ಮೆರೆದಿದೆ. ನಿರ್ದೇಶಕರೊಬ್ಬರು ತನ್ನ ನಾಯಕ, ನಾಯಕಿಯರಿಗೆ ಈ ರೀತಿ ಕೂಡಾ ಶುಭ ಹಾರೈಸಬಹುದು ಎಂಬುದನ್ನು ರಾಜಮೌಳಿ ತೋರಿಸಿಕೊಟ್ಟಿದ್ದರು.

  ಇದರ ಜತೆಗೆ ಕಾಕತೀಯ ರಾಜಮನೆತನದ ರಾಣಿ ರುದ್ರಮದೇವಿ ಅವರ ಸಾಹಸಗಾಥೆಯೇ ಈ ಚಿತ್ರದ ಪೋಸ್ಟರ್ ಕೂಡಾ ರಿಲೀಸ್ ಆಗಿದ್ದು ಅಭಿಮಾನಿಗಳಿಗೆ ಡಬ್ಬಲ್ ಧಮಾಕ ನೀಡಿದ್ದಂತಾಗಿತ್ತು. ಬಾಹುಬಲಿ ಚಿತ್ರ ದೇವಸೇನಾ ಹೇಗಿದ್ದಾಳೆ ನೋಡೋಣ ಬನ್ನಿ

  ದೇವಸೇನಾ

  ದೇವಸೇನಾ

  ಬಾಹುಬಲಿ ಚಿತ್ರದಲ್ಲಿ ವೀರ ಕನ್ಯೆ ದೇವಸೇನಾ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ

  ರುದ್ರಮಾದೇವಿ ಅನುಷ್ಕಾ

  ರುದ್ರಮಾದೇವಿ ಅನುಷ್ಕಾ

  ಸರಿಸುಮಾರು ರು.120 ಕೋಟಿ ರು ವೆಚ್ಚದಲ್ಲಿ ತಯಾರಾಗುತ್ತಿರುವ ತೆಲುಗು ಹಾಗೂ ತಮಿಳು ದ್ವಿಭಾಷಾ ಚಿತ್ರ ರುದ್ರಮಾದೇವಿ ಪಾತ್ರದಲ್ಲಿ ಅನುಷ್ಕಾ ಅದ್ಭುತ ಅಭಿನಯ ನೀಡಿದ್ದಾರೆ ಎಂದು ನಿರ್ದೇಶಕ ಗುಣಶೇಖರ್ ಪ್ರಶಂಸಿಸಿದ್ದಾರೆ.

  ದೇವಸೇನಾ ಪಾತ್ರಕ್ಕೆ ತಯಾರಿ

  ದೇವಸೇನಾ ಪಾತ್ರಕ್ಕೆ ತಯಾರಿ

  ದೇವಸೇನಾ ಪಾತ್ರಕ್ಕೆ ತಯಾರಿಯಲ್ಲಿ ಅನುಷ್ಕಾ

  ದೇವಸೇನಾ ಪಾತ್ರಕ್ಕೆ

  ದೇವಸೇನಾ ಪಾತ್ರಕ್ಕೆ

  ಮಾಸ್ಕ್ ತಯಾರಿಸಲು ಗಂಟೆಗಟ್ಟಲೆ ತಾಳ್ಮೆಯಿಂದ ಕುಳಿತ ನಾಯಕಿ ಅನುಷ್ಕಾ

  ಅರೆ ಯಾರಿದು?

  ಅರೆ ಯಾರಿದು?

  ಧ್ಯಾನದಲ್ಲಿ ದೇವಸೇನಾ ....ಬಾಹುಬಲಿ ಚಿತ್ರದಲ್ಲಿ ಕನ್ನದದ ಸುದೀಪ್ ಸೇರಿದಂತೆ ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್, ರಾಣಾ ದಗ್ಗುಬಾತಿ, ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ಶೋಭು ಯರ್ಲಗಡ್ಡ ಹಾಗೂ ಪ್ರಸಾದ್ ದೇವಿನೇನಿ ಹಾಗೂ ಕೆ ರಾಘವೇಂದ್ರ ರಾವ್ ರಂಥ ದೊಡ್ಡ ಚಿತ್ರ ನಿರ್ಮಾಣಗಾರರು ಚಿತ್ರಕ್ಕೆ ಹಣ ಹೂಡಿದ್ದಾರೆ

  ಅಬ್ಬಾ ಫೇಸ್ ಪ್ಯಾಕ್ ತೆಗೆದ್ರು

  ಅಬ್ಬಾ ಫೇಸ್ ಪ್ಯಾಕ್ ತೆಗೆದ್ರು

  ಐತಿಹಾಸಿಕ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಸುದೀಪ್ ಅವರದ್ದು ಯುದ್ಧ ಶಸ್ತ್ರಾಸ್ತ್ರ ಡೀಲರ್ ಪಾತ್ರವಂತೆ. ಪ್ರಭಾಸ್ ಸೇರಿದಂತೆ ಎಲ್ಲರಿಗೂ ಎರಡು ಶೇಡ್ ಪಾತ್ರ ಇದೆ. ರಾಣಾ ದಗ್ಗುಬಾತಿ ನೆಗಟೆವ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ನಿರಾಭರಣ ಸುಂದರಿ

  ನಿರಾಭರಣ ಸುಂದರಿ

  ಬಾಹುಬಲಿ ಚಿತ್ರಕ್ಕೆ ಎಂದಿನಂತೆ ರಾಜಮೌಳಿ ತಂಡದ ಆಸ್ಥಾನ ಪ್ರತಿಭೆ ಎಂಎಂ ಕೀರವಾಣಿ ಅವರು ಸಂಗೀತ ನೀಡಿದ್ದಾರೆ. ಕೆಕೆ ಸೆಂಥಿಲ್ ಕುಮಾರ್ ಕೆಮರಾ ವರ್ಕ್ ಮಾಡಿದ್ದಾರೆ.

  ರಾಜಮೌಳಿ ಚಿತ್ರ

  ರಾಜಮೌಳಿ ಚಿತ್ರ

  ರಾಜಮೌಳಿ ಈ ಹಿಂದಿನ ' ಈಗ' ಚಿತ್ರದಂತೆ ಈ ಚಿತ್ರದ ಶೂಟಿಂಗ್ ಕೂಡಾ ನಿಧಾನಗತಿಯಿಂದ ಗುಪ್ತವಾಗಿ ನಡೆಸುತ್ತಿದ್ದಾರೆ. ಶೂಟಿಂಗ್ ಪ್ರದೇಶದಲ್ಲಿ ಮೊಬೈಲ್ ಫೋನ್, ಕೆಮೆರಾ ಬಳಸಲು ಅನುಮತಿ ನೀಡುತ್ತಿಲ್ಲ. ಎಲ್ಲರೂ ಸಾಕಷ್ಟು ಶ್ರಮವಹಿಸಿ ಚಿತ್ರವನ್ನು ಹೊರತರುತ್ತಿದ್ದಾರೆ.

  ಕಂಗಳಿಗೆ ವಂದನೆ

  ಕಂಗಳಿಗೆ ವಂದನೆ

  ಕಂಗಳಲ್ಲೇ ನೂರು ಭಾವನೆ ಹೊರ ಹೊಮ್ಮಿಸಬಲ್ಲ ಸಂವೇದನಾಶೀಲ ನಟಿ ಅನುಷ್ಕಾ ಬಾಹುಬಲಿ ಚಿತ್ರದ ಝಲಕ್ ನಲ್ಲಿ

  ವಿಡಿಯೋ ಚಿತ್ರ

  ವಿಡಿಯೋ ಚಿತ್ರ

  ಸುಮಾರು 1.36 ನಿಮಿಷದ ಶುಭ ಹಾರೈಕೆ ವಿಡಿಯೋದಲ್ಲಿ ಬಾಹುಬಲಿ ಚಿತ್ರದ ಎರಡನೇ ಟೀಸರ್ ಎನ್ನಬಹುದು

  ಇದು ಅಸಲಿಯಲ್ಲ

  ಇದು ಅಸಲಿಯಲ್ಲ

  ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ಅನುಷ್ಕಾ ಅವರ ಮುಖಾರವಿಂದ ಪ್ರತಿ ತಯಾರಾಗಿದ್ದು ಹೀಗೆ

  ದೇವಸೇನಾ ಸ್ಕೆಚ್

  ದೇವಸೇನಾ ಸ್ಕೆಚ್

  ಅನುಷ್ಕಾ ಹೋಲಿಕೆಯಲ್ಲಿ ದೇವಸೇನಾ ಪಾತ್ರ ಹೀಗಿರುತ್ತೆ

  ಕಾರ್ಯನಿರತ ನಿರ್ದೇಶಕ

  ಕಾರ್ಯನಿರತ ನಿರ್ದೇಶಕ

  ಕಾರ್ಯನಿರತ ನಿರ್ದೇಶಕ ರಾಜಮೌಳಿ

  ವಿಡಿಯೋ ತುಣುಕು

  ಬಾಹುಬಲಿ ಚಿತ್ರ ತಂಡ ಅನುಷ್ಕಾ ಶೆಟ್ಟಿಗೆ ಹುಟ್ಟುಹಬ್ಬ ಶುಭ ಹಾರೈಸಿದ್ದು ಹೀಗೆ

  English summary
  Anushka Shetty, who is turning 32 on Nov 7, is currently working in two period movies - Rudrama Devi and Baahubali. Yesterday, director Gunasekhar has released the first look of Rudrama Devi as a birthday gift for her. Now, the teaser of Baahubali has come as second big birthday gift for this most-sought after actress in South India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X