»   » ಗಣೇಶ್ ಬರ್ತಡೆಗೆ 'ಬುಗುರಿ' ಟ್ರೈಲರ್ ಗಿಫ್ಟ್

ಗಣೇಶ್ ಬರ್ತಡೆಗೆ 'ಬುಗುರಿ' ಟ್ರೈಲರ್ ಗಿಫ್ಟ್

Posted By:
Subscribe to Filmibeat Kannada

ಮಳೆ ಹುಡುಗ ಗೋಲ್ಡನ್ ಸ್ಟಾರ್ ಗಣೇಶ್ ಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ. ತಮ್ಮ 38 ನೇ ಜನ್ಮದಿನವನ್ನ ಇಂದು (ಜುಲೈ 2) ಅಭಿಮಾನಿಗಳ ಸಮ್ಮುಖದಲ್ಲಿ ಗಣೇಶ್ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ಸಂಭ್ರಮವನ್ನ ಮತ್ತಷ್ಟು ಇಮ್ಮಡಿಗೊಳಿಸಿದ್ದು 'ಬುಗುರಿ' ಚಿತ್ರತಂಡ.

ಹೌದು, ಚಿನ್ನದ ಹುಡುಗ ಗಣೇಶ್ ಬರ್ತಡೆ ಪ್ರಯುಕ್ತ ಅವರು ಅಭಿನಯದ 'ಬುಗುರಿ' ಚಿತ್ರದ ಟ್ರೈಲರ್ ಮತ್ತು ಸಾಂಗ್ ಇಂದು ರಿಲೀಸ್ ಆಗಿದೆ. ಆ ಟ್ರೈಲರ್ ಇಲ್ಲಿದೆ ನೋಡಿ...


Watch Kannada Movie Buguri trailer

'ಬುಗುರಿ' ಗಣೇಶ್ ಅಭಿನಯದ 25 ನೇ ಸಿನಿಮಾ ಅನ್ನೋದು ಸೂಪರ್ ಸ್ಪೆಷಲ್. ಎಂದಿನಂತೆ ಲವ್ವರ್ ಬಾಯ್ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಗಣೇಶ್ 'ಬುಗುರಿ' ಚಿತ್ರದಲ್ಲಿ ಇಬ್ಬರು ನಾಯಕಿಯರನ್ನ ರೋಮ್ಯಾನ್ಸ್ ಮಾಡಿದ್ದಾರೆ.


'ಬುಗುರಿ' ಮೂಲಕ ರೀಚಾ ಪನೈ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ. 'ನಿನ್ನಿಂದಲೇ' ಖ್ಯಾತಿಯ ಎರಿಕಾ ಫರ್ನಾಂಡಿಸ್, ಗೋಲ್ಡನ್ ಸ್ಟಾರ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಮೊದಲ ನೋಟಕ್ಕೆ 'ಬುಗುರಿ' ತ್ರಿಕೋನ ಪ್ರೇಮ ಕಾವ್ಯ ಇದ್ದಂತೆ ಕಾಣುತ್ತೆ.


Watch Kannada Movie Buguri trailer

ಪ್ರೀತಿ ಪ್ರೇಮದ ಜೊತೆಗೆ 'ಬುಗುರಿ' ಚಿತ್ರದಲ್ಲಿ ಸೂಪರ್ ಆಕ್ಷನ್ ಕೂಡ ಇದೆ. ಹೊಡಿ ಬಡಿ ದೃಶ್ಯಗಳಲ್ಲಿ, ಕುದುರೆ ಸವಾರಿ ಸನ್ನಿವೇಶಗಳಲ್ಲಿ ಗಣೇಶ್ ಹೇಗೆ ಕಾಣಿಸಿಕೊಂಡಿದ್ದಾರೆ ಅಂತ ನೀವೇ ನೋಡಿ.


ಲವ್ ಸ್ಟೋರಿ, ಆಕ್ಷನ್, ಕಾಮಿಡಿ ಎಲ್ಲಾ ಮಿಕ್ಸ್ ಆಗಿರುವ 'ಬುಗುರಿ' ಚಿತ್ರಕ್ಕೆ ಸುಮಧುರ ಸಂಗೀತ ನೀಡಿರುವವರು ಮಿಕ್ಕಿ.ಜೆ.ಮೇಯರ್. 'ಬುಗುರಿ' ಹಾಡುಗಳು ಹೇಗಿವೆ ಅನ್ನೋದಕ್ಕೆ ಸಾಕ್ಷಿ ಇಲ್ಲಿದೆ ನೋಡಿ...


Watch Kannada Movie Buguri trailer

ಈ ಹಿಂದೆ ಗಣೇಶ್ ಗಾಗಿ 'ಚೆಲ್ಲಾಟ' ಹಾಗೂ 'ಕೃಷ್ಣ' ಅಂತಹ ಯಶಸ್ವಿ ಚಿತ್ರಗಳನ್ನ ನಿರ್ದೇಶನ ಮಾಡಿದ್ದ ನಿರ್ದೇಶಕ ಎಂ.ಡಿ. ಶ್ರೀಧರ್ 'ಬುಗುರಿ' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಪ್ರೀತಿಯ ಸುತ್ತ ತಿರುಗುವ 'ಬುಗುರಿ' ಸದ್ಯದಲ್ಲೇ ತೆರೆಮೇಲೆ ಬರಲಿದೆ.

English summary
Kannada Actor Ganesh, Actress Erica Fernandes and Richa Panai starrer Kannada movie 'Buguri' official trailer is released. Watch M.D.Sridhar directorial 'Buguri' trailer here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada