For Quick Alerts
  ALLOW NOTIFICATIONS  
  For Daily Alerts

  'ದೊಡ್ಮನೆ ಹುಡ್ಗ' ಟ್ರೈಲರ್ ನಲ್ಲಿ ಅದೆಷ್ಟು ವಿಶೇಷತೆಗಳಿವೆ ಗೊತ್ತಾ.?

  By Suneetha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಭಾರಿ ಕುತೂಹಲಕ್ಕೆ ನಿನ್ನೆ ಫುಲ್ ಸ್ಟಾಪ್ ಬಿದ್ದಿದೆ. ಬಹಳ ಕಾತರದಿಂದ ಕಾದಿದ್ದ ಅಭಿಮಾನಿಗಳಿಗೆ ಮತ್ತು ಸಿನಿಪ್ರಿಯರಿಗೆ ನಿರ್ದೇಶಕ ದುನಿಯಾ ಸೂರಿ ಅವರು ದೊಡ್ಡ ಗಿಫ್ಟ್ ಕೊಟ್ಟಿದ್ದಾರೆ.

  'ಅಭಿಮಾನಿಗಳೇ ನಮ್ಮನೇ ದೇವರು' ಹಾಡಿನ ಮೂಲಕ ಗಾಂಧಿನಗರದಲ್ಲಿ ಸಂಚಲನದ ಜೊತೆಗೆ ಕುತೂಹಲದ ಹುಟ್ಟಿಸಿದ, ಸೂರಿ ಅವರ 'ದೊಡ್ಮನೆ ಹುಡುಗ' ಚಿತ್ರದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.

  ತುಂಬಾ ಕುತೂಹಲದ ಜೊತೆಗೆ ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ ಪ್ಯಾಕೇಜ್ ಒಂದನ್ನು ಸೂರಿ ಅವರು ಮುಂದಿನ ತಿಂಗಳು ನೀಡಲಿದ್ದಾರೆ. ಚಿತ್ರದ ಹಾಡುಗಳು ಕೂಡ ಈಗಾಗಲೇ ಒಂದೊಂದಾಗಿ, ಒಬ್ಬೊಬ್ಬರ ಕೈಯಿಂದ ಯುಟ್ಯೂಬ್ ನಲ್ಲಿ ಬಿಡುಗಡೆಗೊಂಡು, ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.['ದೊಡ್ಮನೆ ಹುಡ್ಗ' ಬಗ್ಗೆ ಯೋಗರಾಜ್ ಭಟ್ ಬಾಯಿಂದ ಸಿಡಿದ ನಗೆ ಬಾಂಬ್!]

  ಸಖತ್ ಕಲರ್ ಫುಲ್ ಆಗಿ, ಫ್ಯಾಮಿಲಿ ಸೆಂಟಿಮೆಂಟ್, ಲವ್-ರೋಮ್ಯಾನ್ಸ್ ಜೊತೆಗೆ ಜಬರ್ದಸ್ತ್ ಆಕ್ಷನ್ ಇರೋ 'ದೊಡ್ಮನೆ ಹುಡ್ಗ' ಚಿತ್ರದ ಟ್ರೈಲರ್ ವಿಮರ್ಶೆ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ.....

  ಪಾರ್ವತಮ್ಮ ರಾಜ್ ಕುಮಾರ್ ಕೈಯಿಂದ ಬಿಡುಗಡೆ

  ಪಾರ್ವತಮ್ಮ ರಾಜ್ ಕುಮಾರ್ ಕೈಯಿಂದ ಬಿಡುಗಡೆ

  ನಿನ್ನೆ (ಆಗಸ್ಟ್ 25) ಸಂಜೆ 6.30ಕ್ಕೆ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಅಮೃತ ಹಸ್ತದಿಂದ 'ದೊಡ್ಮನೆ ಹುಡ್ಗ' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಮಾಡಿದ ಪಾರ್ವತಮ್ಮ ರಾಜ್ ಕುಮಾರ್ ಅವರು, ಇಡೀ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.['ದೊಡ್ಮನೆ ಹುಡ್ಗಿ' ರಾಧಿಕಾ ಪಂಡಿತ್ ಜೊತೆ ಎಕ್ಸ್ ಕ್ಲೂಸಿವ್ ಚಿಟ್ ಚಾಟ್]

  ಸಖತ್ ಆಕ್ಷನ್ ಪ್ಯಾಕೇಜ್

  ಸಖತ್ ಆಕ್ಷನ್ ಪ್ಯಾಕೇಜ್

  ಸಾಮಾನ್ಯವಾಗಿ ಪುನೀತ್ ಅವರ ಹಲವು ಸಿನಿಮಾಗಳಲ್ಲಿ, ಅವರು ಡೈಲಾಗ್ ಹೊಡೆದು, ವಿಲನ್ ಗಳಿಗೆ ಯದ್ವಾ-ತದ್ವಾ ತದುಕೋದನ್ನ ನೀವು ನೋಡಿರುತ್ತೀರಾ. ಆದ್ರೆ 'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಕೊಂಚ ಡಿಫರೆಂಟ್ ಆಗಿ ಡ್ಯಾನ್ಸ್ ಮಾಡ್ಕೊಂಡು ಎದುರಾಳಿಗಳಿಗೆ ತದುಕಿದ್ದಾರೆ.[ಸೂರಿ ಕುರಿತ ಬಹುದೊಡ್ಡ ಗುಟ್ಟು ರಟ್ಟು ಮಾಡಿದ ಯೋಗರಾಜ್ ಭಟ್.!]

  ಫ್ಯಾಮಿಲಿ ಸೆಂಟಿಮೆಂಟ್

  ಫ್ಯಾಮಿಲಿ ಸೆಂಟಿಮೆಂಟ್

  'ದೊಡ್ಮನೆ ಹುಡ್ಗ' ಅಂತ ಟೈಟಲ್ ಕೇಳಿದ್ರೆ, ಎಲ್ಲರಿಗೂ ಗೊತ್ತಾಗುತ್ತೆ, ದೊಡ್ಡ ಮನೆ, ಮನೆ ತುಂಬಾ ಜನ, ಊರಿಗೆ ನ್ಯಾಯ ಹೇಳೋರು, ಇತ್ಯಾದಿ. ಅಂತೆಯೇ ಈ ಚಿತ್ರದಲ್ಲಿ ತುಂಬಾ ಫ್ಯಾಮಿಲಿ ಸೆಂಟಿಮೆಂಟ್ ಇದೆ. 'ದೊಡ್ಮನೆ' ಮುಟ್ಟಿದವರ ಕೈ ಕಾಲು ಕತ್ತರಿಸ್ತಾರೆ ಪುನೀತ್ ಅವರು.

  ಡೈಲಾಗ್ ಸೂಪರ್

  ಡೈಲಾಗ್ ಸೂಪರ್

  'ನಾನ್ ಇಲ್ದೆ ಇದ್ದಾಗ ದೊಡ್ಮನೆ ಮುಟ್ಟೋದಲ್ಲ, ನಾನಿರುವಾಗ ಮುಟ್ಟು ನೋಡೋಣ' ಅಂತ ಪುನೀತ್ ಅವರು ಸಖತ್ ಆಗಿ ಡೈಲಾಗ್ ಡೆಲಿವರಿ ಮಾಡಿದ್ದಾರೆ.

  ರವಿಶಂಕರ್

  ರವಿಶಂಕರ್

  'ಆರ್ಮುಗಂ' ರವಿಶಂಕರ್ ಅವರು ಈ ಚಿತ್ರದಲ್ಲಿ ಖಳನಟನಾಗಿ ಮಿಂಚಿದ್ದಾರೆ. 'ಹೀರೋ ಪವರ್ ಫುಲ್ ಆಗಿದ್ರೆನೇ, ವಿಲನ್ ಗೆ ಮಾರ್ಯಾದೆ' ಅಂತ ರವಿಶಂಕರ್ ಅವರು ಕೂಡ ಡಿಫರೆಂಟ್ ಆಗಿ ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಈ ಬಾರಿ ಸಾದಾ-ಸೀದಾ ಲುಕ್ ನಲ್ಲಿ ರವಿಶಂಕರ್ ಮಿಂಚಿದ್ದಾರೆ.

  ಕಾಮಿಡಿ ಝಲಕ್

  ಕಾಮಿಡಿ ಝಲಕ್

  "ಚಿಕ್ಕ ವಯಸ್ಸಲ್ಲಿ ಹುಣಸೇ ಬೀಜ ತಿಂದ್ರೆ, ಹೊಟ್ಟೆ ಒಳಗೆಯಿಂದ ಗಿಡ ಬೆಳೆಯುತ್ತೆ ಅಂತ ಕಾಯ್ತಿದ್ವಿ, ಅವನಪ್ಪನ್ ಯಾವ ಮೂಲೆಯಿಂದಾನೂ ಬೆಳಿಲೇ ಇಲ್ಲಾ ರೀ.." ಅಂತ ಪುನೀತ್ ಅವರು ಮುಗ್ದವಾಗಿ ರಾಧಿಕಾ ಪಂಡಿತ್ ಅವರ ಜೊತೆ ಕಾಣಿಸಿಕೊಂಡಿದ್ದಾರೆ. ಇದು ಪ್ರೇಕ್ಷಕರ ಮುಖದಲ್ಲಿ ಸಣ್ಣಗೆ ನಗು ತರಿಸೋದು ಗ್ಯಾರೆಂಟಿ. ಇವರಿಗೆ ಚಿಕ್ಕಣ್ಣ ಸಾಥ್ ನೀಡಿದ್ದಾರೆ.

  ಪಿರುತಿ ಮಾಡುವ ರಾಧಿಕಾ

  ಪಿರುತಿ ಮಾಡುವ ರಾಧಿಕಾ

  ಚಿತ್ರದಲ್ಲಿ ನಟಿ ರಾಧಿಕಾ ಪಂಡಿತ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೋದು ಈ ಚಿತ್ರದ ವಿಶೇಷ. ಒಂದು ಪಾತ್ರದಲ್ಲಿ ಶ್ರೀಮಂತ ಮನೆಯ ಹುಡುಗಿ ಆದ್ರೆ, ಇನ್ನೊಂದು ಪಾತ್ರದಲ್ಲಿ ಬಡ-ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಿದ್ದಾರೆ. ಇವರು 'ದೊಡ್ಮನೆ ಹುಡ್ಗ'ನನ್ನು ಪಿರುತಿ (ಪ್ರೀತಿ) ಮಾಡೋ ಸ್ಟೈಲ್ ನೋಡೋಕೆ ಚೆಂದ.

  ಎರಡನೇ ಬಾರಿ ಪುನೀತ್ ಗೆ ಜೋಡಿ

  ಎರಡನೇ ಬಾರಿ ಪುನೀತ್ ಗೆ ಜೋಡಿ

  ನಟಿ ರಾಧಿಕಾ ಪಂಡಿತ್ ಅವರು 'ಹುಡುಗರು' ಚಿತ್ರದ ನಂತರ ಮತ್ತೆ ಪುನೀತ್ ಅವರ ಜೊತೆ ಈ ಚಿತ್ರದಲ್ಲಿ ಡ್ಯುಯೆಟ್ ಹಾಡುತ್ತಿದ್ದಾರೆ.

  ಸೂರಿ-ಪುನೀತ್ ಕಾಂಬಿನೇಷನ್

  ಸೂರಿ-ಪುನೀತ್ ಕಾಂಬಿನೇಷನ್

  ದುನಿಯಾ ಸೂರಿ ಮತ್ತು ಪುನೀತ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ ಇದು. ಮೊದಲನೆ ಸಿನಿಮಾ 'ಜಾಕಿ' ಸೂಪರ್ ಹಿಟ್, ಎರಡನೇ ಸಿನಿಮಾ 'ಅಣ್ಣಾಬಾಂಡ್', ಇದೀಗ ಮೂರನೇ ಸಿನಿಮಾ 'ದೊಡ್ಮನೆ ಹುಡ್ಗ'.

  ಅಂಬರೀಶ್ ದಂಪತಿ

  ಅಂಬರೀಶ್ ದಂಪತಿ

  ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ, ಅಂಬರೀಶ್-ಸುಮಲತಾ ದಂಪತಿ. ಪುನೀತ್ ಅವರು ಅಂಬರೀಶ್ ಅವರ ಜೊತೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಭಾರತಿ ವಿಷ್ಣುವರ್ಧನ್ ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

  ಟ್ರೈಲರ್ ನೋಡಿಬಿಡಿ..

  ಟ್ರೈಲರ್ ನೋಡಿಬಿಡಿ..

  ನಿನ್ನೆ ತಾನೆ ಬಿಡುಗಡೆ ಆದ 'ದೊಡ್ಮನೆ ಹುಡ್ಗ' ಕಲರ್ ಫುಲ್ ಟ್ರೈಲರ್ ಇಲ್ಲಿದೆ. ಒಂದ್ಸಾರಿ ನೋಡಿ ಬಿಡಿ....

  English summary
  Watch Kannada Movie 'Doddmane Hudga' Official Trailer, starring Actor Puneeth Rajkumar, Actor Rebel Star Ambareesh, Actress Radhika Pandit. The movie is Directed by Duniya Soori. Music Composed by V. Harikrishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X