»   » 'ನಾನು ಮತ್ತು ವರಲಕ್ಷ್ಮಿ' ಚಿತ್ರದ ಟ್ರೈಲರ್ ನೋಡಿದ್ರಾ?

'ನಾನು ಮತ್ತು ವರಲಕ್ಷ್ಮಿ' ಚಿತ್ರದ ಟ್ರೈಲರ್ ನೋಡಿದ್ರಾ?

Posted By:
Subscribe to Filmibeat Kannada

ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ರವರ ಮೊಮ್ಮಗ ಪೃಥ್ವಿ ಚೊಚ್ಚಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡಿರುವ ಚಿತ್ರ 'ನಾನು ಮತ್ತು ವರಲಕ್ಷ್ಮಿ'.

ಪೃಥ್ವಿ ಜೊತೆ ಮಲೆಯಾಳಂ ಬೆಡಗಿ ಮಾಳವಿಕಾ ಮೋಹನನ್ ಜೋಡಿಯಾಗಿ ಮಿಂಚಿರುವ ಭಾರತದ ಪ್ರಪ್ರಥಮ ಮೋಟೋ ಕ್ರಾಸ್ ರೇಸಿಂಗ್ ಸಿನಿಮಾ 'ನಾನು ಮತ್ತು ವರಲಕ್ಷ್ಮಿ' ಟ್ರೈಲರ್ ರಿಲೀಸ್ ಆಗಿದೆ, ನೋಡಿ....

Watch Kannada Movie 'Naanu Matthu Varalakshmi' Teaser

ಹೇಳಿ ಕೇಳಿ 'ನಾನು ಮತ್ತು ವರಲಕ್ಷ್ಮಿ' ಬೈಕ್ ರೇಸ್ ಸಿನಿಮಾ. ಅಂದ್ಮೇಲೆ ಚಿತ್ರದಲ್ಲಿ ಸೂಪರ್ ಸ್ಟಂಟ್ಸ್ ಇರಲೇಬೇಕು. ಕೋಲಾರದ ರಿಯಲ್ ಮೋಟೋ ಕ್ರಾಸ್ ರೇಸಿಂಗ್ ಟ್ರ್ಯಾಕ್ ನಲ್ಲಿ ಅಂತಹ ಜಬರ್ದಸ್ತ್ ಸ್ಟಂಟ್ಸ್ ಚಿತ್ರೀಕರಣ ಮಾಡಲಾಗಿದೆ. ಊಟಿ ಸುತ್ತಮುತ್ತ ಚಿತ್ರೀಕರಣಗೊಂಡಿರುವ 'ನಾನು ಮತ್ತು ವರಲಕ್ಷ್ಮಿ' ಚಿತ್ರ ಕಣ್ಣಿಗೆ ಹಬ್ಬ ಅನ್ನೋದಕ್ಕೆ ಈಗ ರಿಲೀಸ್ ಆಗಿರುವ ಟ್ರೈಲರ್ ಸಾಕ್ಷಿ. ['ನಾನು ಮತ್ತು ವರಲಕ್ಷ್ಮಿ' ಸ್ಯಾಂಡಲ್ ವುಡ್ ನ ಮೊದಲ ಬೈಕ್ ರೇಸಿಂಗ್ ಸಿನಿಮಾ..!]

ಬೈಕ್ ರೇಸರ್ ಆಗಿ ಪ್ರಕಾಶ್ ರೈ ಚಿತ್ರದಲ್ಲಿ ಕಾಣಿಸಿಕೊಂಡಿದ್ರೆ, ಬಹುಭಾಷಾ ನಟಿ ಮಧೂ ಕೂಡ ಪ್ರಧಾನ ಭೂಮಿಕೆಯಲ್ಲಿದ್ದಾರೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಮತ್ತು ರವಿವರ್ಮಾ ಸಾಹಸ ಸಂಯೋಜನೆ ಚಿತ್ರಕ್ಕಿದೆ. ಪ್ರೀತಮ್ ಗುಬ್ಬಿ 'ನಾನು ಮತ್ತು ವರಲಕ್ಷ್ಮಿ' ಸೂತ್ರಧಾರ.

ಈಗ ರಿಲೀಸ್ ಆಗಿರುವ ಟ್ರೈಲರ್ ಮಾತ್ರದಿಂದ ಗಾಂಧಿನಗರದಲ್ಲಿ ಭರವಸೆ ಮೂಡಿಸಿರುವ 'ನಾನು ಮತ್ತು ವರಲಕ್ಷ್ಮಿ' ಬಿಡುಗಡೆ ದಿನಾಂಕ ಇನ್ನೂ ಅನೌನ್ಸ್ ಆಗಿಲ್ಲ.

English summary
Prithivi, Grandson of Late Music Composer GK Venkatesh starrer 'Naanu Matthu Varalakshmi' teaser is out. Watch Preetham Gubbi Directorial 'Naanu Matthu Varalakshmi' teaser here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada