For Quick Alerts
  ALLOW NOTIFICATIONS  
  For Daily Alerts

  'ಹೊಲ ಮೀ ಅಮೀ ಗೋಸ್ ಗೆ', ಫಿದಾ ಆದ ಸ್ಯಾಂಡಲ್ ವುಡ್ ಸ್ಟಾರ್ಸ್

  By Suneetha
  |

  ಸ್ಯಾಂಡಲ್ ವುಡ್ ಡಿಫರೆಂಟ್ ನಟ ಅರುಣ್ ಸಾಗರ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ರಿಂಗ್ ಮಾಸ್ಟರ್' (ಹೊಲ ಮೀ ಅಮೀ ಗೋಸ್) ಇದೇ ವಾರದಲ್ಲಿ (ಅಕ್ಟೋಬರ್ 9) ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

  ಉಪ್ಪಿ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಅರುಣ್ ಸಾಗರ್ ಅವರ 'ರಿಂಗ್ ಮಾಸ್ಟರ್' ಚಿತ್ರ ಟ್ರೈಲರ್ ಮೂಲಕ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಹುಟ್ಟಿಸುತ್ತಿದೆ. ತುಂಬಾ ಅರ್ಥವುಳ್ಳ ಡೈಲಾಗ್ ಗಳು ನಟ ಅರುಣ್ ಸಾಗರ್ ಅವರ ಧ್ವನಿಯಲ್ಲಿ ಸಖತ್ ಆಗಿ ಮೂಡಿಬಂದಿದೆ. 'ರಿಂಗ್ ಮಾಸ್ಟರ್' ಟ್ರೈಲರ್ ಇಲ್ಲಿದೆ ನೋಡಿ..

  ನವ ನಿರ್ದೇಶಕ ವಿಶ್ರುತ್ ನಾಯಕ್ ಆಕ್ಷನ್-ಕಟ್ ಹೇಳಿರುವ ಅರುಣ್ ಸಾಗರ್ ಅವರ ರಿಂಗ್ ಮಾಸ್ಟರ್ ಚಿತ್ರಕ್ಕೆ ಸ್ಯಾಂಡಲ್ ವುಡ್ ಸ್ಟಾರ್ ಗಳಾದ ರಿಯಲ್ ಸ್ಟಾರ್ ಉಪೇಂದ್ರ, 'ಉಗ್ರಂ' ಶ್ರೀಮುರಳಿ, ಕಾಮಿಡಿ ಕಿಂಗ್ ಶರಣ್, ಕ್ರೇಜಿಸ್ಟಾರ್ ರವಿಚಂದ್ರನ್, ಯಶ್, ಡಾರ್ಲಿಂಗ್ ಕೃಷ್ಣ ಮುಂತಾದವರು ಅರುಣ್ ಸಾಗರ್ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

  ರವಿಚಂದ್ರನ್: ಅರುಣ್ ಸಾಗರ್ ಗೆ ಯಾವಾಗ್ಲೂ ಒಂದು ಫೈರ್ ಇರುತ್ತೇ, ಏನಾದ್ರೂ ಮಾಡ್ಬೇಕು ಅನ್ನೋದು ಕಾಣಿಸುತ್ತೆ. ಅದು ಈ ಸಿನಿಮಾದಲ್ಲಿ ಕಾಣಿಸ್ತಾ ಇದೆ. ಒಟ್ನಲ್ಲಿ ಪ್ರಯತ್ನ ಚೆನ್ನಾಗಿದೆ ಈ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಲೇಬೇಕು ಅಂತ ನಾನು ಯಾವಾಗ್ಲೂ ಹೇಳ್ತೀನಿ. ಯಾಕಂದ್ರೆ ಪ್ರಯತ್ನಕ್ಕೆ ಬೆನ್ನು ತಟ್ಟೋರು ಇದ್ರೇನೆ ಇನ್ನೊಂದು ಪ್ರಯತ್ನ ಮಾಡೋಕೆ ಆಗೋದು.

  ರಿಯಲ್ ಸ್ಟಾರ್ ಉಪೇಂದ್ರ: ಒಂದು ರೂಮಲ್ಲಿ ಅಷ್ಟು ವಿಭಿನ್ನವಾಗಿ ಅಷ್ಟೊಂದು ಶಾಟ್ಸ್ ಗಳನ್ನು ಇಟ್ಟುಕೊಂಡು ಒಂದು ಹಾಡಿನ ಚಿತ್ರೀಕರಣ ಮಾಡಿದ್ದಾರೆ. ತುಂಬಾ ಖುಷಿ ಅನ್ನಿಸ್ತಾ ಇದೆ. ಹೊಲ ಮೀ ಅಮೀ ಗೋಸ್ ಅಂತ ಏನು ಅಂತ ನನ್ನ ಮಾತ್ರ ಕೇಳ್ಬೇಡಿ, ನೀವೇ ಸಿನಿಮಾ ನೋಡಿ ತಿಳ್ಕೊಳ್ಳಿ.[ಈ ವಾರ ತೆರೆಯ ಮೇಲೆ ಅರುಣ್ ಸಾಗರ್ 'ರಿಂಗ್ ಮಾಸ್ಟರ್']


  'ಉಗ್ರಂ' ಶ್ರೀಮುರಳಿ: ನನ್ನ ಪ್ರಕಾರ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಅರುಣ್ ಸಾಗರ್ ಅವರು ಒಬ್ಬ ಅತ್ಯದ್ಭುತ ನಟ ಅಂದ್ರು ತಪ್ಪಾಗಲ್ಲ.

  ಕಾಮಿಡಿ ಕಿಂಗ್ ಶರಣ್: ಈ ಇಡೀ ತಂಡ ಒಂದು ಬೇರೆ ತರದ ಸಿನಿಮಾ ಕೊಡಬೇಕು ಅನ್ನೋ ಮನಸ್ಥಿತಿಯಲ್ಲಿ ಈ ಪ್ರಯತ್ನವನ್ನು ಕೈಗೊಂಡಿದೆ ಅಂತ ಅನ್ನೋದು ಪ್ರತಿಯೊಂದು ಫ್ರೇಮಲ್ಲೂ ಎದ್ದು ಕಾಣುತ್ತಿದೆ.

  ಯಶ್: ಈ ಥರದ ಪ್ರಯತ್ನಗಳು ತುಂಬಾ ಕಷ್ಟ. ತುಂಬಾ ವರ್ಕ್ ಮಾಡಬೇಕಾಗುತ್ತದೆ. ಸ್ಕ್ರಿಪ್ಟ್ ಲ್ಲಿ, ಸ್ಕ್ರೀನ್ ಪ್ಲೇ ನಲ್ಲೇ ಆಗಿರಬಹುದು.[ಅರುಣ್ ಸಾಗರ್ 'ಭಂಗಿರಂಗ' ಭಯಂಕರ ಅವತಾರ]

  ಡಾರ್ಲಿಂಗ್ ಕೃಷ್ಣ: ಈ ಥರ ಒಂದು ಕ್ಯಾರೆಕ್ಟರ್ ಅನ್ನು ಅರುಣ್ ಸಾಗರ್ ಅವರು ಬಿಟ್ಟು ಬೇರೆ ಯಾರು ಮಾಡಕ್ಕಾಗಲ್ಲ ಅನ್ಕೋತೀನಿ. ಬೇರೆಯವರಿಗೆ ಮಾಡೋಕೆ ಸ್ವಲ್ಪ ಕಷ್ಟ ಆಗ್ತಾ ಇತ್ತು. ಅವರ ಕೂದಲು, ಅವರ ಗೆಟಪ್ ಅವರ ಬಾಡಿ ಲಾಂಗ್ವೇಜ್ ತುಂಬಾ ಚೆನ್ನಾಗಿದೆ.

  ಸಂಚಾರಿ ವಿಜಯ್: ಎಲ್ಲೆಲ್ಲಿ ಕ್ಯಾಮರ ಇದೆ, ಯಾವ ಆಂಗಲ್, ನಾನು ಯಾವತ್ತೂ ಈ ಥರದ್ದೂ ನೋಡಿಲ್ಲ. ರಿಯಲಿ ಇದೊಂದು ಪ್ರಯೋಗಾತ್ಮಕ ಚಿತ್ರ, ದಯವಿಟ್ಟು ಎಲ್ಲರೂ ನೋಡಿ.[ಅರುಣ್ ಸಾಗರ್ ಈಗ 'ರಿಂಗ್ ಮಾಸ್ಟರ್']

  ಬಹುಮುಖ ಪ್ರತಿಭೆ ಅರುಣ್ ಸಾಗರ್, ನಟಿ ನಿರೂಪಕಿ ಅನುಶ್ರೀ, ಶೃಂಗ, ಶ್ವೇತಾ ಮುಂತಾದವರು ಪ್ರಮುಖವಾಗಿ 'ರಿಂಗ್ ಮಾಸ್ಟರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ರಿಂಗ್ ಮಾಸ್ಟರ್' ಬಗ್ಗೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಅಭಿಪ್ರಾಯ ತಿಳಿಯಲು ಈ ವಿಡಿಯೋ ನೋಡಿ..

  English summary
  Watch Kannada movie 'Ring Master' Celebrity byte and moive trailer. 'Ring Master' movie features Kannada Actor Arun Sagar, Kannada Actress Anushree, Actress Swetha, Actor Srunga in the lead role. The movie is directed by Vishruth Naik

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X