»   » ಗನ್ನು ಹಿಡಿದು ರಾಂಗ್ ಆದ ದಿಗಂತ್ 'ಶಾರ್ಪ್ ಶೂಟರ್'

ಗನ್ನು ಹಿಡಿದು ರಾಂಗ್ ಆದ ದಿಗಂತ್ 'ಶಾರ್ಪ್ ಶೂಟರ್'

Posted By:
Subscribe to Filmibeat Kannada

ದೂದ್ ಪೇಡ ದಿಗಂತ್ 'ಪರಪಂಚ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂತ ಮೊನ್ನೆ ತಾನೇ ನಿಮಗೆ ನಾವು ಹೇಳಿದ್ವಿ. ಇದೀಗ ಅದರ ಬೆನ್ನಲ್ಲೇ ಹೊಸ ಚಿತ್ರ 'ಶಾರ್ಪ್ ಶೂಟರ್' ಮೂಲಕ ಗಾಂಧಿನಗರದಲ್ಲಿ ದಿಗಂತ್ ಮತ್ತೆ ಸೌಂಡ್ ಮಾಡುತ್ತಿದ್ದಾರೆ.[ಅಲೌಕಿಕ ತಲೆಗೇರಿದಾಗ ನೀರಮಲು ಹಾಲಮಲು 'ಪರಪಂಚ' ಅಮಲು]

ಒಂದು ಮಜವಾದ ಸ್ಟೋರಿ, ಸ್ವಲ್ಪ ಲವ್, ಸ್ವಲ್ಪ ಫ್ರೆಂಡ್ ಶಿಪ್, ಸ್ವಲ್ಪ ರೋಮ್ಯಾನ್ಸ್, ಸ್ವಲ್ಪ ಮಸಾಲೆ, ಜಾಸ್ತಿ ತರಲೆ ಇರುವ ದೂದ್ ಪೇಡ ದಿಗಂತ್ ಮತ್ತು ಸಂಗೀತ ಕಾಂಬಿನೇಷನ್ ಇರುವ 'ಶಾರ್ಪ್ ಶೂಟರ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ದಿಗಂತ್ ಮತ್ತು ಸಂಗೀತ ಜೊತೆ ಐಂದ್ರಿತಾ ರೇ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಶಾರ್ಪ್ ಶೂಟರ್' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ...

Watch Kannada movie 'Sharpshooter' official trailer


ಒಂದು ಕಾಲದಲ್ಲಿ ಹಿಟ್ ಜೋಡಿ ಆಗಿದ್ದ ದಿಗಂತ್ ಮತ್ತು ಐಂದ್ರಿತಾ ರೇ 'ಶಾರ್ಪ್ ಶೂಟರ್' ಚಿತ್ರದ ಹಾಡೊಂದರಲ್ಲಿ ಒಂದಾಗಿರುವುದು ಸ್ಪೆಷಲ್. ಆದ್ರೆ, ನಟಿ ಐಂದ್ರಿತಾ ರೇ ಬರೀ ಐಟಂ ಸಾಂಗ್ ಗೆ ಅಷ್ಟೆ ಸೀಮಿತವಾಗಿರುವುದು ಮಾತ್ರ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಬಹುದು.

ಎಸ್.ಬಿ. ಎಂರ್ಟಟೈನ್ಮೆಂಟ್ ಅರ್ಪಿಸುವ 'ಶಾರ್ಪ್ ಶೂಟರ್' ಚಿತ್ರ ಪಕ್ಕಾ ಫ್ಯಾಮಿಲಿ ಎಂರ್ಟಟೈನರ್. ಇದುವರೆಗೂ ಚಾಕಲೇಟ್ ಹೀರೋ ಥರಾ ಕಾಣಿಸಿಕೊಳ್ಳುತ್ತಿದ್ದ ದಿಗಂತ್ ಈ ಚಿತ್ರದಲ್ಲಿ ಸ್ವಲ್ಪ ಫೈಟ್ ಮಾಡಿ ಆಕ್ಷನ್ ಗೂ ಸೈ ಅಂದಿದ್ದಾರೆ.[ಸ್ಯಾಂಡಲ್ ವುಡ್ ದೂದ್ ಪೇಡ ದಿಗಂತ್ ಈಗ ಕ್ರಿಕೆಟರ್]

ಗನ್, ಲಾಂಗ್ ಗಳಿಂದ ಇದುವರೆಗೂ ದೂರ ಉಳಿದಿದ್ದ ದೂದ್ ಪೇಡ ದಿಗಂತ್, ಈ ಚಿತ್ರದಲ್ಲಿ ಗನ್ ಹಿಡಿದು ಶೂಟ್ ಮಾಡುವ ಪ್ರಯತ್ನ ಮಾಡಿದ್ದಾರೆ.

ಚಿತ್ರದಲ್ಲಿ 'ಭಜರಂಗಿ' ಲೋಕೇಶ್ ವಿಲನ್ ರೋಲ್ ನಲ್ಲಿ ಮಿಂಚಿದ್ದಾರೆ. ಇನ್ನೂ ಚಿಕ್ಕಣ್ಣ ಅವರ ಡಬ್ಬಲ್ ಮೀನಿಂಗ್ ಡೈಲಾಗ್ಸ್ ಪ್ರೇಕ್ಷಕರಿಗೆ ಸಖತ್ ಕಿಕ್ ನೀಡುವುದರಲ್ಲಿ ಡೌಟ್ ಇಲ್ಲ. ಚಿತ್ರದ ರೋಮ್ಯಾಂಟಿಕ್ ಹಾಡುಗಳಿಗೆ ಎಮ್.ಎಸ್.ಶಿವ ಸಂತೋಷ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಗೌಸ್ ಪೀರ್ ಆಕ್ಷನ್-ಕಟ್ ಹೇಳಿರುವ 'ಶಾರ್ಪ್ ಶೂಟರ್' ಚಿತ್ರದಲ್ಲಿ ಸುಧಾರಾಣಿ, ಅಚ್ಯುತ್ ಕುಮಾರ್, ರಂಗಾಯಣ ರಘು, ಲಕ್ಷ್ಮಿ, ಸತ್ಯಜಿತ್, ಮುಂತಾದವರು ಅಭಿನಯಿಸಿದ್ದಾರೆ. ಲಾಂಗ್ ಗ್ಯಾಪ್ ನಂತರ ಮತ್ತೆ ತೆರೆಮೇಲೆ ಅದೃಷ್ಟ ಪರೀಕ್ಷೆಗೆ ನಿಂತಿರುವ ದಿಗಂತ್ ಗೆ ಈ ಚಿತ್ರ ಬ್ರೇಕ್ ಕೊಡುವಲ್ಲಿ ಯಶಸ್ವಿಯಾಗುತ್ತಾ ಅನ್ನೋದನ್ನ ಚಿತ್ರ ಬಿಡುಗಡೆಯಾದ ನಂತರ ನೋಡೋಣ.

English summary
Kannada Movie 'Sharpshooter' official trailer is released. 'Sharpshooter' features Kannada actor Diganth, Actress Sangeetha in the lead role. The movie is directed by Ghouse Peer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada