»   » ತುಂಬು ಕುಟುಂಬದ 'ತಾರಕ್' ಟ್ರೇಲರ್ ನೋಡಿದ್ರಾ.?

ತುಂಬು ಕುಟುಂಬದ 'ತಾರಕ್' ಟ್ರೇಲರ್ ನೋಡಿದ್ರಾ.?

Posted By:
Subscribe to Filmibeat Kannada

ಅಂತೂ ಇಂತೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರದ 'ತಾರಕ್' ಟ್ರೇಲರ್ ಬಿಡುಗಡೆ ಆಗಿದೆ. ಹಾಗ್ನೋಡಿದ್ರೆ, ಎರಡು ದಿನಗಳ ಹಿಂದೆಯೇ 'ತಾರಕ್' ಟ್ರೇಲರ್ ರಿಲೀಸ್ ಆಗ್ಬೇಕಿತ್ತು. ಆದ್ರೆ, ಕೆಲ ತಾಂತ್ರಿಕ ಕಾರಣಗಳಿಂದಾಗಿ ಅಂದು ಹೊರ ಬರದ ಟ್ರೇಲರ್ ಇಂದು ನಿಮ್ಮೆಲ್ಲರ ಮುಂದೆ ಬಂದಿದೆ.

''ನಮ್ಮ ತಂದೆ ಯಾವಾಗಲೂ ಹೇಳ್ತಿದ್ರು... ಈ ಪ್ರೀತಿ ಮತ್ತು ಫ್ಯಾಮಿಲಿ ಮಧ್ಯೆ ಯಾವತ್ತೂ ಸಿಕ್ಕಿಹಾಕಿಕೊಳ್ಳಬಾರದು'' ಎಂಬ ಡೈಲಾಗ್ ನಿಂದ ಆರಂಭವಾಗುವ 'ತಾರಕ್' ಟ್ರೇಲರ್ ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿ ಆಗಿದೆ.

'ತಾರಕ್' ಟ್ರೈಲರ್ ಯಾಕೆ ರಿಲೀಸ್ ಆಗ್ಲಿಲ್ಲ? ಕಾರಣ ಇಲ್ಲಿದೆ.!

Watch Kannada Movie 'Tarak' trailer

ಮೇಲ್ನೋಟಕ್ಕೆ ತ್ರಿಕೋನ ಪ್ರೇಮಕಥೆಯಂತೆ ಕಾಣುವ 'ತಾರಕ್' ಚಿತ್ರದಲ್ಲಿ ದರ್ಶನ್ ಗೆ ಶಾನ್ವಿ ಶ್ರೀವಾಸ್ತವ ಹಾಗೂ ಶ್ರುತಿ ಹರಿಹರನ್ ನಾಯಕಿಯರು. ತುಂಬು ಕುಟುಂಬದ ಹುಡುಗನಾಗಿ ಕಾಣಿಸಿಕೊಂಡಿರುವ ದರ್ಶನ್ ಗೆ ದೇವರಾಜ್ ಸಾಥ್ ಕೊಟ್ಟಿದ್ದಾರೆ.

ಹೇಳಿ ಕೇಳಿ 'ತಾರಕ್' ದರ್ಶನ್ ಸಿನಿಮಾ. ಅಂದ್ಮೇಲೆ, ಚಿತ್ರದಲ್ಲಿ ಆಕ್ಷನ್ ಹಾಗೂ ಮಾಸ್ ಡೈಲಾಗ್ಸ್ ಇರಲೇಬೇಕು. ಇದೀಗಷ್ಟೇ ಬಿಡುಗಡೆ ಆಗಿರುವ ಟ್ರೇಲರ್ ನೋಡ್ತಿದ್ರೆ, ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಇರುವುದು ಕನ್ ಫರ್ಮ್. ಹಾಗೇ, ಪಾತ್ರಕ್ಕೆ ತಕ್ಕಂತೆ ದರ್ಶನ್ ಬಾಯಿಂದ ಮನಮುಟ್ಟುವ ಮಾತುಗಳು ಬರುವುದೂ ಖಚಿತ.

ದೊಡ್ಡ ತಾರಾಬಳಗ ಇರುವ 'ತಾರಕ್' ಚಿತ್ರಕ್ಕೆ 'ಮಿಲನ' ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದಾರೆ. ಪ್ರತಿಯೊಂದು ಫ್ರೇಮ್ ಕೂಡ ರಿಚ್ ಆಗಿ ಮೂಡಿಬರಲು ದುಶ್ಯಂತ್ ಬಂಡವಾಳ ಹಾಕಿದ್ದಾರೆ. ಬಹುತೇಕ ಫಾರಿನ್ ನಲ್ಲಿಯೇ ಚಿತ್ರೀಕರಣಗೊಂಡಿರುವ 'ತಾರಕ್'ಗೆ ಕೃಷ್ಣ ಕುಮಾರ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಇದೆ. ಸೆಪ್ಟೆಂಬರ್ 29 ರಂದು 'ತಾರಕ್' ಬಿಡುಗಡೆ ಆಗಲಿದೆ.

ಲವ್ ಸ್ಟೋರಿ, ಸೆಂಟಿಮೆಂಟ್, ಫ್ಯಾಮಿಲಿ ಡ್ರಾಮಾ, ಆಕ್ಷನ್.... ಎಲ್ಲದರ ಸಮಿಶ್ರಣದಂತಿರುವ 'ತಾರಕ್' ಚಿತ್ರದ ಟ್ರೈಲರ್ ಇಲ್ಲಿದೆ. ನೋಡ್ಕೊಂಡ್ ಬನ್ನಿ....

English summary
Challenging Star Darshan starrer Kannada Movie 'Tarak' Trailer is out. Watch video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada