For Quick Alerts
  ALLOW NOTIFICATIONS  
  For Daily Alerts

  'ಯು ಟರ್ನ್' ಡಬ್ಬಲ್ ರೋಡ್ ಫ್ಲೈ ಓವರ್ ಮೇಲೆ ಏನಿರಬಹುದು?

  By Suneetha
  |

  'ಲೂಸಿಯಾ' ಎಂಬ ವಿಭಿನ್ನ ಸಿನಿಮಾ ಮಾಡಿ ಗೆದ್ದಿರುವ ನಟ ಕಮ್ ನಿರ್ದೇಶಕ ಪವನ್ ಕುಮಾರ್ ಅವರು ಮತ್ತೆ 'ಯು ಟರ್ನ್' ಎಂಬ ಸ್ಪೆಷಲ್ ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರ ತಲೆಯಲ್ಲಿ ಹುಳ ಬಿಡಲು ಹೊರಟಿದ್ದಾರೆ.

  ಸದಾ ಹೊಸ ನಟ ಅಥವಾ ನಟಿಯರಿಗೆ ತಮ್ಮ ಚಿತ್ರದಲ್ಲಿ ಅವಕಾಶ ಕೊಡುವ ನಿರ್ದೇಶಕ ಪವನ್ ಕುಮಾರ್ ಅವರು ಈ ಬಾರಿ ಶ್ರದ್ಧಾ ಶ್ರೀನಾಥ್ ಎಂಬ ಹೊಸ ಪ್ರತಿಭೆಯನ್ನು ನಾಯಕಿ ನಟಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇಂಗ್ಲೀಷ್ ನಾಟಕ ರಂಗದಲ್ಲಿ ಸಾಧನೆ ಮಾಡಿರುವ ನಟಿಗೆ ಸ್ಯಾಂಡಲ್ ವುಡ್ ಹೊಸ ಕ್ಷೇತ್ರ.[ನಿಕೋಟಿನ್ ಸೇವಿಸುವ ಮೊದಲು ಯೂ ಟರ್ನ್ ಹೊಡೆದ ಪವನ್]

  ಪವನ್ ಕುಮಾರ್ ಅವರ 'ಯೂ ಟರ್ನ್' ಎಂದು ಚಿತ್ರದ ಹೆಸರೇ ವಿಚಿತ್ರವಾಗಿರುವಾಗ ಇನ್ನು ಸಿನಿಮಾ ಹೇಗಿರಬೇಡ ಅಲ್ವಾ?. ಹೌದು 'ಲೂಸಿಯಾ' ಸಿನಿಮಾದಂತೆ 'ಯು ಟರ್ನ್' ಕೂಡ ತುಂಬಾ ವಿಭಿನ್ನವಾಗಿ ಮತ್ತು ಸಖತ್ ಥ್ರಿಲ್ಲಿಂಗ್ ಆಗಿದೆ ಅನ್ನೋದಕ್ಕೆ ಈಗಾಗಲೇ ಬಿಡುಗಡೆ ಆಗಿರುವ ಕಲರ್ ಫುಲ್ ಟ್ರೈಲರ್ ಸಾಕ್ಷಿ.['ರಂಗಿ' ಆಯ್ತು ಇದೀಗ 'ಯೂ-ಟರ್ನ್' ತೆಗೆದುಕೊಂಡ ರಾಧಿಕಾ ಚೇತನ್.!]

  ಇನ್ನು ಚಿತ್ರದಲ್ಲಿ ಇನ್ನೊಬ್ಬ ನಟಿ ಇದ್ದಾರೆ. 'ರಂಗಿತರಂಗ' ಸಿನಿಮಾದಲ್ಲಿ ಪ್ರಮುಖ ನಾಯಕಿ ಪಾತ್ರದಲ್ಲಿ ಮಿಂಚಿದ್ದ ಕಥಕ್ ಡ್ಯಾನ್ಸರ್ ರಾಧಿಕಾ ಚೇತನ್ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿರುವುದು ವಿಶೇಷ.

  ಒಂದು ಇಂಗ್ಲೀಷ್ ಪತ್ರಿಕೆಯ ವರದಿಗಾರ್ತಿಯೊಬ್ಬಳು 'ಡಬ್ಬಲ್ ರೋಡ್ ಫ್ಲೈ ಓವರ್' ಮೇಲೆ ಒಂದು ಸ್ಟೋರಿ ರೆಡಿ ಮಾಡುತ್ತಾಳೆ. ಅಲ್ಲಿಂದ ಆಕೆಯ ಜೀವನವೇ ಬದಲಾಗುತ್ತೆ, ಅಷ್ಟಕ್ಕೂ ಆ ಫ್ಲೈ ಓವರ್ ಮೇಲೆ ಏನಿರಬಹುದು? ಅನ್ನೋದು ಇಡೀ ಚಿತ್ರಕಥೆ.[ನಿಕೋಟಿನ್ ಗುಂಗಿನಲ್ಲಿ ನಿದ್ದೆಗೆಟ್ಟ ಪವನ್ ಕುಮಾರ್]

  ಅಂದಹಾಗೆ ಬಹಳ ಕುತೂಹಲ ಕೆರಳಿಸುವ ಜೊತೆಗೆ ಪ್ರೇಕ್ಷಕರನ್ನು ಸಖತ್ ಥ್ರಿಲ್ಲಾಗಿಸುವ ಕಥೆ ಇದಾಗಿದೆ ಎಂಬುದನ್ನು ಈ ಥ್ರಿಲ್ಲಿಂಗ್ ಟ್ರೈಲರೇ ಹೇಳುತ್ತಿದೆ.

  ನಟ ದಿಲೀಪ್ ರಾಜ್, ನಟಿ ರಾಧಿಕಾ ಚೇತನ್, ನಟಿ ಶ್ರದ್ಧಾ ಶ್ರೀನಾಥ್, ನಟ ರೋಜರ್ ನಾರಾಯಣ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಯು ಟರ್ನ್' ಚಿತ್ರದ ಟ್ರೈಲರ್ ನ ಝಲಕ್ ಇಲ್ಲಿದೆ ನೋಡಿ...

  English summary
  Watch U Turn Official Trailer, satrring Shraddha Srinath, Roger Narayan, Dilip Raj, Radhika Chetan and others. Directed by Pawan Kumar. Music composed by Poornachandra Tejaswi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X