For Quick Alerts
  ALLOW NOTIFICATIONS  
  For Daily Alerts

  ವಿಡಿಯೋ - ವಿನಾಯಕ ಕೋಡ್ಸರ ರವರ ಕಿರುಚಿತ್ರ 'ಪ್ರೆಷರ್ ಕುಕ್ಕರ್'

  By Harshitha
  |

  'ಬದುಕಿನ ಖುಷಿಯಿರುವುದು ಸಣ್ಣ-ಸಣ್ಣ ಸಂಗತಿಗಳಲ್ಲಿಯೇ' ಎಂಬ ಟ್ಯಾಗ್ ಲೈನ್ ಹೊಂದಿರುವ 'ಪ್ರೆಷರ್ ಕುಕ್ಕರ್' ಕಿರುಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಜನಸಾಮಾನ್ಯರ ಬದುಕಿನ ಕಥೆಯನ್ನು ತೆರೆದಿಡುವ, ಕುಕ್ಕರ್ ರಿಪೇರಿ ಮಾಡುವವನ ಬದುಕಿನ ಸುತ್ತ ಹೆಣೆದಿರುವ 'ಪ್ರೆಷರ್ ಕುಕ್ಕರ್' ಕಿರುಚಿತ್ರ ಡಿಸೆಂಬರ್ 16 ರಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಆಗಿತ್ತು. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 1900ಕ್ಕೂ ಜನ 'ಪ್ರೆಷರ್ ಕುಕ್ಕರ್' ವೀಕ್ಷಿಸಿದ್ದಾರೆ.[ಹೊಸ ಇತಿಹಾಸ ಬರೆದ ಕನ್ನಡ ಕಿರುಚಿತ್ರ ಸ್ಮೈಲ್ ಗುರು ಟ್ರೈಲರ್]

  ಪತ್ರಕರ್ತ ವಿನಾಯಕ ಕೋಡ್ಸರ ಕಥೆ-ಚಿತ್ರಕಥೆ-ನಿರ್ದೇಶನ ಇರುವ 'ಪ್ರೆಷರ್ ಕುಕ್ಕರ್' ಕಿರುಚಿತ್ರದಲ್ಲಿ ನಿರೂಪಕ ಚಂದನ್, ರಾಧಿಕಾ ಅಚ್ಯುತ್ ರಾವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನವೀನ್ ಸಾಗರ್, ಕೌಶಿಕ್, ಮಾಸ್ಟರ್ ಕುಶಾಲ್ ಮೊದಲಾದವರು ತಾರಾಗಣದಲ್ಲಿದ್ದಾರೆ. ವಿಶ್ವಜಿತ್ ರಾವ್ ಕ್ಯಾಮರಾ ವರ್ಕ್, ಹಿತನ್ ಹಾಸನ್ ಸಂಗೀತ ನಿರ್ದೇಶನ, ಗಿರೀಶ್ ರೈ ಪುತ್ತೂರು ಸಂಕಲನ ಈ ಕಿರುಚಿತ್ರಕ್ಕಿದೆ.

  5ಡಿ ಕ್ಯಾಮರಾ ಬಳಸಿ ಶೂಟ್ ಮಾಡಿರುವ 'ಪ್ರೆಷರ್ ಕುಕ್ಕರ್' ಚಿತ್ರಕ್ಕೆ ಕಿಶೋರ್ ಬಂಡವಾಳ ಹಾಕಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ 'ಪ್ರೆಷರ್ ಕುಕ್ಕರ್' ಕಿರುಚಿತ್ರವನ್ನ ನೀವಿನ್ನೂ ನೋಡಿಲ್ಲ ಅಂದ್ರೆ, ಈಗ ಮಿಸ್ ಮಾಡ್ಬೇಡಿ....

  English summary
  'Pressure Cooker', Kannada Short Movie Directed by Vinayaka.K.S is released in YouTube. Pressure Cooker features Chandan, Radhika Achyuthrao in the lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X