»   » ಗಾಂಧಿನಗರದ ಹೊಸ 'ಖೈದಿ'ಯ ಆಟ ನೋಡಿರಣ್ಣ

ಗಾಂಧಿನಗರದ ಹೊಸ 'ಖೈದಿ'ಯ ಆಟ ನೋಡಿರಣ್ಣ

Posted By:
Subscribe to Filmibeat Kannada

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಗೆ 'ಖೈದಿ' ಸಿನಿಮಾದ ಬಗ್ಗೆ ಹೇಳೋದೇ ಬೇಡ. 1984ರಲ್ಲಿ ತೆರೆಕಂಡ 'ಖೈದಿ' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ದಾಖಲೆ ಬರೆಯಿತು. ಆದ್ರೀಗ ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ 'ಖೈದಿ' ಬೇರೆ.

ಮೊದಲು 'ಸೈಕೋ' ಆಗಿದ್ದ ಧನುಷ್ ವರ್ಷಗಳ ನಂತ್ರ ಮತ್ತೆ ಬಣ್ಣ ಹಚ್ಚಿರುವುದು 'ಖೈದಿ' ಚಿತ್ರಕ್ಕಾಗಿ. ಇನ್ನೂ ಉಪ್ಪಿ ಜೊತೆ ನಟಿಸಿದ್ದ ಚಾಂದಿನಿ ಕೂಡ ಮರಳಿ ಗಾಂಧಿನಗರಕ್ಕೆ ಕಾಲಿಟ್ಟಿರುವುದು 'ಖೈದಿ' ಕೃಪೆಯಿಂದಲೇ.

Watch Khaidi Kannada movie songs1

ಇಷ್ಟೆಲ್ಲಾ ವಿಶೇಷತೆಗಳಿರುವ 'ಖೈದಿ' ಸದ್ದಿಲ್ಲದೇ ಚಿತ್ರೀಕರಣವನ್ನು ಪೂರೈಸಿದೆ. ಹಾಗಾದ್ರೆ ತೆರೆಮೇಲೆ 'ಸೈಕೋ' ಧನುಷ್ ಮತ್ತು ಚಾಂದಿನಿ ಕಮಾಲ್ ಹೇಗಿರಬಹುದು ಅಂತ ನೀವು ಊಹಿಸುತ್ತಿದ್ರೆ, ಇದೋ ಇಲ್ಲಿವೆ 'ಖೈದಿ' ಚಿತ್ರದ ಹಾಡುಗಳು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಪಕ್ಕಾ ಪೋಲಿ-ಟಪೋರಿ ಲುಕ್ ನಲ್ಲಿ ನಾಯಕ ಧನುಷ್ ಟಪ್ಪಾಂಗುಚ್ಚಿ ಹೆಜ್ಜೆ ಹಾಕಿರುವ ಹೈ ಎನರ್ಜಿ ಸಾಂಗ್ 'ಎಣ್ಣೆ ಬೆಣ್ಣೆ'. ಪಕ್ಕಾ ಮಾಸ್ ಸಾಂಗ್ ಆಗಿರುವ ಈ ಹಾಡಲ್ಲಿ ಧನುಷ್ ಜೊತೆ ಚಾಂದಿನಿ ಕೂಡ ಅಣ್ಣಮ್ಮನ ಡ್ಯಾನ್ಸ್ ಆಡಿದ್ದಾರೆ. ಎಣ್ಣೆ ಏಟಲ್ಲಿ, ಯಕ್ಕಾ ರಾಜಾ ರಾಣಿ ಆಟದಲ್ಲಿ ರೆಡಿಯಾಗಿರುವ ಹಾಡು ಹೇಗಿದೆ ಅಂತ ನೀವೇ ಒಮ್ಮೆ ನೋಡ್ಬಿಡಿ...

Watch Khaidi Kannada movie songs2

'ಖೈದಿ' ಅನ್ನುವ ಟೈಟಲ್, ಜೊತೆಗೆ ಇಂತಹ ಮಾಸ್ ಸಾಂಗ್. ಅಂದ್ಮೇಲೆ ಸಿನಿಮಾದಲ್ಲಿ ಬರೀ ಹೊಡಿಬಡಿ ಸನ್ನಿವೇಶಗಳು ಮಾತ್ರ ಇರುತ್ತೆ ಅಂತ ಭಾವಿಸಬೇಡಿ. 'ಖೈದಿ' ಚಿತ್ರದಲ್ಲಿ ರೋಮ್ಯಾನ್ಸ್ ಕೂಡ ಇದೆ. ಧುನುಷ್-ಚಾಂದಿನಿ ಲವ್ವಿ ಡವ್ವಿ ಇರುವ ರೋಮ್ಯಾಂಟಿಕ್ ಸಾಂಗ್ ನೋಡೋಕೂ ತಂಪು, ಕೇಳುವುದಕ್ಕೂ ಇಂಪು.

ಗುರುದತ್ ಆಕ್ಷನ್ ಕಟ್ ಹೇಳುತ್ತಿರುವ 'ಖೈದಿ' ಚಿತ್ರಕ್ಕೆ ಯುವ ಪ್ರತಿಭೆ ಸಂತೋಷ್ ನಾಯಕ್ ಬರೆದಿರುವ ಸಾಹಿತ್ಯಕ್ಕೆ ಜಸ್ಟಿನ್-ಉದಯ್ ಸಂಗೀತ ಸಂಯೋಜಿಸಿದ್ದಾರೆ. ಸದ್ಯಕ್ಕೆ ಎರಡು ಹಾಡುಗಳು ಔಟ್ ಆಗಿದ್ದು, ಇದೀಗ ಎಲ್ಲರ ಕಣ್ಣು 'ತಾಳೆ ಹೂವ ಪೊದೆ'ಯ ಮೇಲಿದೆ. ಅದನ್ನ ನೀವು ಕಣ್ತುಂಬಿಕೊಳ್ಳುವುದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. (ಫಿಲ್ಮಿಬೀಟ್ ಕನ್ನಡ)

English summary
Actor Dhanush of Psycho fame and Actress Chandini starrer 'Khaidi' movie songs are out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada