»   » ಭೂಕಂಪ-ಸುನಾಮಿಯನ್ನ ಒಂದು ಮಾಡಿದ 'ಸಿಂಹ' ಸುದೀಪ್

ಭೂಕಂಪ-ಸುನಾಮಿಯನ್ನ ಒಂದು ಮಾಡಿದ 'ಸಿಂಹ' ಸುದೀಪ್

Posted By:
Subscribe to Filmibeat Kannada

ಇಲ್ಲಿಯವರೆಗೂ ಸುದೀಪ್ ರನ್ನ 'ಕಿಚ್ಚ' ಸುದೀಪ್ ಅಂತ ಪ್ರೀತಿಯಿಂದ ಅಭಿಮಾನಿಗಳು ಕರೆಯುತ್ತಿದ್ರು. ಇನ್ಮುಂದೆ ಇದೇ ಅಭಿಮಾನಿಗಳು ಸುದೀಪ್ ರನ್ನ 'ಸಿಂಹ' ಸುದೀಪ್ ಅಂತ ಕರೆದರೆ ಅಚ್ಚರಿ ಇಲ್ಲ. ಹಾಗಿವೆ, ಸುದೀಪ್ ಅಭಿನಯಿಸಿರುವ 'ರನ್ನ' ಚಿತ್ರದ ಡೈಲಾಗ್ಸ್.

'ಆರಡಿ ಕಟೌಟ್' ಅಂತ ಸುದೀಪ್ ಗೆ ಹೊಸ ಬಿರುದು ಕೊಟ್ಟಿರುವ 'ರನ್ನ' ಚಿತ್ರತಂಡ, ಚಿತ್ರದಲ್ಲಿ ''ಕೆಲವು ಸಿಂಹಗಳ ವಿಚಾರಕ್ಕೆ ಹೋಗದೇ ಇದ್ದರೇನೆ ಬೆಟರ್'' ಅಂತ ಸುದೀಪ್ ಬಾಯಿಂದ ಬೆಂಕಿ ಉಂಡೆಗಳನ್ನ ಉದುರಿಸಿದೆ. ಸಾಲದಕ್ಕೆ ವಿಲನ್ ಗಳಿಂದ ''ಭೂಕಂಪ-ಸುನಾಮಿ ಎರಡನ್ನೂ ಒಂದು ಮಾಡ್ತಾನೆ'' ಅನ್ನುವ ಬಿಲ್ಡಪ್ ನೀಡಿದೆ. [ವಜ್ರಕಾಯ ಬಿಡುಗಡೆ ಮುನ್ನ ರನ್ನ ರಿಲೀಸ್ ಯಾಕೆ ಚಿನ್ನ?]


Watch Kiccha Sudeep starrer 'Ranna' latest trailer

ಈಗಷ್ಟೇ ರಿಲೀಸ್ ಆಗಿರುವ 'ರನ್ನ' ಚಿತ್ರದ ಲೇಟೆಸ್ಟ್ ಟ್ರೇಲರ್ ನಲ್ಲಿ ಸುದೀಪ್ 'ಸಿಂಹ' ಘರ್ಜನೆ ಹೇಗಿದೆ ಅಂತ ಒಮ್ಮೆ ನೀವೇ ನೋಡಿಬಿಡಿ....


Watch Kiccha Sudeep starrer 'Ranna' latest trailer

ಥೇಟ್ ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ರೇಂಜಿಗೆ 'ರನ್ನ' ರಿಚ್ಚಾಗಿ ರೆಡಿಯಾಗಿದೆ. ಕಾಮಿಡಿ- ಆಕ್ಷನ್-ಸೆಂಟಿಮೆಂಟ್ ನಲ್ಲಿ ಸುದೀಪ್ ಸಿಕ್ಸರ್ ಬಾರಿಸಿರುವ ಲಕ್ಷಣ ಟ್ರೇಲರ್ ನಲ್ಲಿ ಎದ್ದು ಕಾಣುತ್ತೆ. ಕಿಚ್ಚನ ಜೊತೆ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚಿಸುವುದಕ್ಕೆ ರಚಿತಾ ರಾಮ್ ಮತ್ತು ಹರಿಪ್ರಿಯಾ ಇದ್ದಾರೆ. [ಹೊಸ ಟ್ರೆಂಡಿಗೆ ನಾಂದಿ ಹಾಡಿದ ಕಿಚ್ಚ ಅಭಿನಯದ 'ರನ್ನ']


'ವಿಕ್ಟರಿ' ಮತ್ತು 'ಅಧ್ಯಕ್ಷ' ಚಿತ್ರಗಳ ನಂತರ ನಂದಕಿಶೋರ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ 'ರನ್ನ'. ವರ್ಷಗಳ ನಂತರ 'ಅಣ್ಣಯ್ಯ' ಮಧೂ ಕನ್ನಡಕ್ಕೆ ಕಮ್ ಬ್ಯಾಕ್ ಮಾಡುತ್ತಿರುವ ಚಿತ್ರ ಇದು. ಹಲವು ವಿಶೇಷತೆಗಳಿಂದ ಕೂಡಿರುವ 'ರನ್ನ' 04/06/2015 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. 'ರನ್ನ' ಬರೋದು ಯಾವಾಗ ಚಿನ್ನಾ..? ಅಂತ ಕೇಳುತ್ತಿದ್ದ ಅಭಿಮಾನಿಗಳು 'ರನ್ನ'ನ ಅವತಾರ ನೋಡುವುದಕ್ಕೆ ರೆಡಿಯಾಗಿ. (ಫಿಲ್ಮಿಬೀಟ್ ಕನ್ನಡ)

English summary
Kiccha Sudeep starrer 'Ranna' movie is all set to release on 04/06/2015. Watch Rachita Ram, Haripriya, Madhu, Sudeep featuring 'Ranna' latest trailer.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada