»   » 'ವಜ್ರಕಾಯ' ಚಿತ್ರದಲ್ಲಿ ಶಿವಣ್ಣನ ಕಮಾಲ್ ನೋಡಿದ್ದೀರಾ..

'ವಜ್ರಕಾಯ' ಚಿತ್ರದಲ್ಲಿ ಶಿವಣ್ಣನ ಕಮಾಲ್ ನೋಡಿದ್ದೀರಾ..

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ 'ಭಜರಂಗಿ' ಅಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಿರ್ದೇಶಕ ಎ.ಹರ್ಷ. ವೀರಾಂಜಿನೇಯನ ಭಕ್ತನಾಗಿ, ಧರ್ಮ ರಕ್ಷಕನಾಗಿ ಶಿವಣ್ಣ ತಾಳಿದ 'ಭಜರಂಗಿ' ಅವತಾರಕ್ಕೆ ಪ್ರೇಕ್ಷಕರು ಜೈಕಾರ ಹಾಕಿದ್ದರು.

ಈಗ ಇದೇ ಜೋಡಿ 'ಭಜರಂಗಿ' ನಂತರ ಎರಡನೇ ಬಾರಿಗೆ ಒಂದಾಗಿ ಅಂಜಿನೇಯನ ಕೃಪೆಯಿಂದಲೇ ಮತ್ತಿನ್ಯಾವ ಸಿನಿಮಾ ಮಾಡಬಹುದು ಅಂತ ಅಂದುಕೊಂಡವರಿಗೆ ಸಿಕ್ಕಿರುವ ಉತ್ತರ 'ವಜ್ರಕಾಯ'. ಶಿವಣ್ಣ ಅಭಿನಯದ 'ವಜ್ರಕಾಯ' ಚಿತ್ರ ಹೇಗೆ ಮೂಡಿ ಬಂದಿದೆ ಅನ್ನೋದನ್ನ ಕಣ್ತುಂಬಿಕೊಳ್ಳುವುದಕ್ಕೆ ಇದೋ ಇಲ್ಲಿದೆ ಚಿತ್ರದ ಫಸ್ಟ್ ಲುಕ್ ಟ್ರೇಲರ್.


Watch Shivarajkumar starrer 'Vajrakaya' trailer

'ಭಜರಂಗಿ' ಫೀಲ್ ನಲ್ಲೇ ಇರುವ 'ವಜ್ರಕಾಯ' ಚಿತ್ರದಲ್ಲಿ ಶಿವಣ್ಣ ಮತ್ತೊಮ್ಮೆ ಪವನ ಸುತನ ಅಪ್ಪಟ ಭಕ್ತ. 'ಭಜರಂಗಿ' ಚಿತ್ರದಲ್ಲಿ ಶಿವಣ್ಣನಿಗೆ ಸಿಕ್ಸ್ ಪ್ಯಾಕ್ ಬಾಡಿ ಹಾಕಿಸಿದ್ದ ಎ.ಹರ್ಷ, 'ವಜ್ರಕಾಯ' ಚಿತ್ರದಲ್ಲಿ ಸೆಂಚುರಿ ಸ್ಟಾರ್ ಗೆ ಸ್ಟೈಲಿಶ್ ಲುಕ್ ಕೊಟ್ಟಿದ್ದಾರೆ. ['ವಜ್ರಕಾಯ' ಶಿವಣ್ಣ ಜೊತೆ ರವಿತೇಜಾ ಆಟ ನೋಡಿ...]


ಧರ್ಮ ಪಾಲನೆ ಜೊತೆಗೆ 'ವಜ್ರಕಾಯ' ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಕೂಡ ಹೈಲೈಟ್. ಬಹುಭಾಷಾ ನಟಿ ಜಯಸುಧಾ ಮತ್ತು ಶಿವಣ್ಣ ನಡುವಿನ ದೃಶ್ಯಗಳು ಟ್ರೇಲರ್ ನಲ್ಲಿ ಮನಕಲುಕುವಂತಿದೆ.


Watch Shivarajkumar starrer 'Vajrakaya' trailer

ಸೆಂಟಿಮೆಂಟ್ ಜೊತೆಗೆ ಶಿವಣ್ಣ ಇಲ್ಲಿ ಭರ್ಜರಿ ಆಕ್ಷನ್ ಕೂಡ ಮಾಡಿದ್ದಾರೆ. ಹೇಳಿ ಕೇಳಿ 'ವಜ್ರಕಾಯ' ನೃತ್ಯ ನಿರ್ದೇಶಕ ಎ.ಹರ್ಷ ನಿರ್ದೇಶನದ ಸಿನಿಮಾ. ಅಂದ್ಮೇಲೆ ಚಿತ್ರದಲ್ಲಿ ಹಾಡು ಮತ್ತು ಡ್ಯಾನ್ಸ್ ವಿಷಯದಲ್ಲಿ ಯಾವುದೇ ಕೊರತೆ ಇರುವುದಿಲ್ಲ. ಆದ್ರೆ, ಹಾಡುಗಳ ಛಾಯೆಯನ್ನ ಟ್ರೇಲರ್ ನಲ್ಲಿ ಹರ್ಷ ಬಿಟ್ಟುಕೊಟ್ಟಿಲ್ಲ. [ಕನ್ನಡಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್]


ಮೊದಲ ನೋಟಕ್ಕೆ ಮತ್ತೊಂದು 'ಭಜರಂಗಿ' ಅಂತೆ ಕಂಡರೂ, ಮೇಕಿಂಗ್ ಶೈಲಿಯಲ್ಲಿ 'ವಜ್ರಕಾಯ' ವಿಭಿನ್ನವಾಗಿದೆ. ಚಿತ್ರಕಥೆ ಕೂಡ ಅಷ್ಟೇ ಡಿಫರೆಂಟ್ ಆಗಿದೆ ಅನ್ನುತ್ತಾರೆ ನಿರ್ದೇಶಕ ಹರ್ಷ. ಸದ್ಯಕ್ಕೆ ಶೂಟಿಂಗ್ ಕಂಪ್ಲೀಟ್ ಮಾಡಿರುವ 'ವಜ್ರಕಾಯ' ಮೇ ಅಥವಾ ಜೂನ್ ಹೊತ್ತಿಗೆ ತೆರೆಗೆ ಬರಲಿದೆ. (ಫಿಲ್ಮಿಬೀಟ್ ಕನ್ನಡ)

English summary
Hat-trick hero Shivarajkumar starrer 'Vajrakaya' trailer is out and looks promising. 'Vajrakaya' is the second combination of Director A.Harsha and Shivarajkumar after 'Bhajarangi'. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada