»   » ಕ್ರೇಜಿಸ್ಟಾರ್ ಜನ್ಮದಿನಕ್ಕೆ ಇಂದ್ರಜಿತ್ ಲಂಕೇಶ್ ಕೊಟ್ಟ ಕಾಣಿಕೆ

ಕ್ರೇಜಿಸ್ಟಾರ್ ಜನ್ಮದಿನಕ್ಕೆ ಇಂದ್ರಜಿತ್ ಲಂಕೇಶ್ ಕೊಟ್ಟ ಕಾಣಿಕೆ

Posted By:
Subscribe to Filmibeat Kannada

ನಿನ್ನೆಯಷ್ಟೇ ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು. ವರ್ಷಗಳ ನಂತ್ರ ಫ್ಯಾನ್ಸ್ ಜೊತೆ ಬರ್ತಡೆ ಸೆಲೆಬ್ರೇಟ್ ಮಾಡಿದ್ದಕ್ಕೆ ರವಿಮಾಮ ಕೂಡ ಖುಷಿಯಾಗಿದ್ದರು.

ಇದೇ ಖುಷಿಯನ್ನ ಡಬಲ್ ಮಾಡುವುದಕ್ಕೆ ಇಂದ್ರಜಿತ್ ಲಂಕೇಶ್ ಸ್ಪೆಷಲ್ ಪ್ಲಾನ್ ಮಾಡಿದ್ದರು. ಆ ಪ್ಲಾನೇ 'ಲವ್ ಯು ಆಲಿಯ' ಚಿತ್ರದ ಟ್ರೈಲರ್. ಕಳೆದ ವರ್ಷದಿಂದ 'ಲವ್ ಯು ಆಲಿಯ' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. [ಸ್ಟೈಲಿಶ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಜೊತೆ ಸ್ಪೆಷಲ್ ಟಾಕ್]


ravichandran

'ಲವ್ ಯು ಆಲಿಯ' ಚಿತ್ರದಲ್ಲಿ ಸ್ತ್ರೀರೋಗ ತಜ್ಞರಾಗಿ ಅಭಿನಯಿಸುತ್ತಿರುವ ಕ್ರೇಜಿ ಸ್ಟಾರ್ ರವಿಚಂದ್ರನ್, ಸಿನಿಮಾದಲ್ಲಿ ಹೇಗೆ ಕಾಣ್ತಾರೆ ಅನ್ನೋದಕ್ಕೆ ಇದೋ ಇಲ್ಲಿದೆ ಉತ್ತರ.


First look of LUV U ALIA......Wishing crazy star a HAPPY BIRTHDAY


Posted by Indrajit Lankesh on Friday, May 29, 2015

ಸೂಪರ್ ಸ್ಟೈಲಿಶ್ ಲುಕ್ ನಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮಿಂಚಿದ್ದಾರೆ. ಅಷ್ಟೇ ಅಲ್ಲದೇ, ''ಮನಸ್ಸಿಗೆ ಬೇಜಾರಾದರೆ ತಲೆ ಕೆಡುತ್ತೆ, ತಲೆ ಕೆಟ್ಟರೆ ನಾನೇನು ಮಾಡುತ್ತೇನೆ ನಂಗೆ ಗೊತ್ತಾಗಲ್ಲ'' ಅಂತ ಡೈಲಾಗ್ ಹೊಡೆಯುವ ಮೂಲಕ ಖಡಕ್ಕಾಗೂ ಕಾಣಿಸಿಕೊಂಡಿದ್ದಾರೆ. [ಕ್ರೇಜಿಸ್ಟಾರ್ ರವಿಮಾಮ ಇನ್ಮುಂದೆ ಡಾ.ರವಿಚಂದ್ರನ್!]


ರವಿಚಂದ್ರನ್ ಜೊತೆ ಬಹುಭಾಷಾ ನಟಿ ಭೂಮಿಕಾ ಚಾವ್ಲಾ, 'ಲಕ್ಷ್ಮೀ ಬಾರಮ್ಮ' ಖ್ಯಾತಿಯ ಚಂದನ್, ರವಿಶಂಕರ್, ನಿಕಿಶಾ ಪಟೇಲ್ ರಂತಹ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಇನ್ನೂ ಸ್ಪೆಷಲ್ ರೋಲ್ ಕಿಚ್ಚ ಸುದೀಪ್ ನಟಿಸಿರುವುದು ಸಿನಿಮಾದ ಪ್ಲಸ್ ಪಾಯಿಂಟ್. [ಟೈಟಲ್ ಗೊಂದಲದಲ್ಲಿ ಕ್ರೇಜಿ ಸ್ಟಾರ್ ಹೊಸ ಸಿನಿಮಾ]


ಈ ಎಲ್ಲಾ ಅಂಶಗಳಿರುವ 'ಲವ್ ಯು ಆಲಿಯ' ಚಿತ್ರದ ಟ್ರೈಲರ್ ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬದ ದಿನ ರಿಲೀಸ್ ಮಾಡುವ ಮೂಲಕ ರವಿಮಾಮನಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ 'ಸ್ಟಾರ್ ಡೈರೆಕ್ಟರ್' ಇಂದ್ರಜಿತ್ ಲಂಕೇಶ್. ಕ್ರೇಜಿ ಅಭಿಮಾನಿಗಳಿಗೆ ಇಷ್ಟು ಸಾಕಲ್ವಾ. (ಫಿಲ್ಮಿಬೀಟ್ ಕನ್ನಡ)

English summary
Crazy Star V.Ravichandran celebrated his 54th birthday yesterday (May 30th). On this occasion, Indrajith Lankesh directorial 'Love You Alia' is trailer is out. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada