»   » ಚುಕ್ಕಿ ರಂಗೋಲಿ ಬಿಡಿಸಿದ ಚಿಕ್ಕಬಳ್ಳಾಪುರದ ಚೆಲ್ವಿ ಹರಿಪ್ರಿಯಾ

ಚುಕ್ಕಿ ರಂಗೋಲಿ ಬಿಡಿಸಿದ ಚಿಕ್ಕಬಳ್ಳಾಪುರದ ಚೆಲ್ವಿ ಹರಿಪ್ರಿಯಾ

Posted By:
Subscribe to Filmibeat Kannada
ನಟಿ ಹರಿಪ್ರಿಯಾ ರಂಗೋಲಿ ಬಿಡಿಸುತ್ತಿರುವ ವಿಡಿಯೋ ವೈರಲ್ | Filmibeat Kannada

ಯಾವಾಗಲೂ ಮೇಕಪ್ ಹಾಕೊಂಡು, ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ನಟಿಯರು ಮನೆಗೆಲಸ ಮಾಡುವುದುಂಟಾ.?

ಅಸಲಿಗೆ, ನಟಿಯರಿಗೆ ಏನ್ ಕಮ್ಮಿ ಹೇಳಿ... ಮನೆಯಲ್ಲಿ ಕೆಲಸ ಮಾಡುವುದಕ್ಕಂತಲೇ ಜನ ಇರ್ತಾರೆ. ಬ್ಯೂಟಿ ಕಾನ್ಶಿಯಸ್ ಆಗಿರುವ ನಟಿಯರು ಡಯೆಟ್, ವರ್ಕೌಟ್ ಅಂತಲೇ ಕಾಲ ಕಳೆಯುತ್ತಾರೆ ಅಂತ ಹಲವರು ಭಾವಿಸಬಹುದು.

ನಟಿಯರಿಗೆ ನಟನೆ ಬಿಟ್ಟು ಬೇರೇನೂ ಬರಲ್ಲ ಅಂತ ಅಂದುಕೊಂಡಿರುವವರು ಸ್ವಲ್ಪ ಹರಿಪ್ರಿಯಾ ರನ್ನ ನೋಡಿ...

Watch Video: Chukki Rangoli by Kannada Actress Haripriya

'ಉಗ್ರಂ', 'ರನ್ನ', 'ನೀರ್ ದೋಸೆ', 'ಭರ್ಜರಿ', 'ಕನಕ', 'ಸಂಹಾರ' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಹರಿಪ್ರಿಯಾ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ನಟಿ. 'ಸೂಜಿದಾರ', 'ಕಥಾ ಸಂಗಮ', 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರಗಳ ಶೂಟಿಂಗ್ ನಲ್ಲಿ ತೊಡಗಿರುವ ಹರಿಪ್ರಿಯಾ ಬಿಡುವಿನ ವೇಳೆಯಲ್ಲಿ ರಂಗೋಲಿ ಬಿಡಿಸಿದ್ದಾರೆ.

ಹರಿಪ್ರಿಯಾ ಇನ್ನು ಮುಂದೆ ಕುಸುಮ ಬಾಲೆ

ಚಿಕ್ಕಬಳ್ಳಾಪುರದಲ್ಲಿ ಹುಟ್ಟಿದ ಹರಿಪ್ರಿಯಾ, ಅಲ್ಲಿನ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿದರು. ಬಳಿಕ ಬೆಂಗಳೂರಿಗೆ ಶಿಫ್ಟ್ ಆದ ಹರಿಪ್ರಿಯಾ, ವಿದ್ಯಾ ಮಂದಿರ ಕಾಲೇಜಿನಲ್ಲಿ ಪಿ.ಯು.ಸಿ ಓದಿದರು. ಚಿಕ್ಕಬಳ್ಳಾಪುರದ ಚೆಲ್ವಿ ಹರಿಪ್ರಿಯಾ ಇಂದು ಚಿತ್ರರಂಗದಲ್ಲಿ ಡಿಮ್ಯಾಂಡ್ ಇರುವ ನಟಿಯಾಗಿ ಗುರುತಿಸಿಕೊಂಡಿದ್ದರೂ, ನಮ್ಮ ನೆಲದ ಸಂಸ್ಕೃತಿಯನ್ನು ಮರೆತಿಲ್ಲ.

ಮದುವೆ ಆಗ್ತಾರಂತೆ ನೀರ್ ದೋಸೆ ಬೆಡಗಿ ಹರಿಪ್ರಿಯಾ!

ಮಣ್ಣಿನ ನೆಲದ ಮೇಲೆ ಚೆಂದದ ಚುಕ್ಕಿ ರಂಗೋಲಿ ಬಿಡಿಸಿ, ಅಭಿಮಾನಿಗಳನ್ನು ಬೆರಗು ಗೊಳಿಸಿದ್ದಾರೆ ನಟಿ ಹರಿಪ್ರಿಯಾ. ಹರಿಪ್ರಿಯಾ ರಂಗೋಲಿ ಬಿಡಿಸಿರುವ ವಿಡಿಯೋ ಸದ್ಯ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ. 32 ಸಾವಿರಕ್ಕೂ ಅಧಿಕ ಮಂದಿ ಹರಿಪ್ರಿಯಾ ರಂಗೋಲಿ ಬಿಡಿಸಿರುವ ವಿಡಿಯೋ ನೋಡಿದ್ದಾರೆ.

English summary
Watch Video: Chukki Rangoli by Kannada Actress Haripriya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X