For Quick Alerts
  ALLOW NOTIFICATIONS  
  For Daily Alerts

  ಮತ್ತೆ ರೊಚ್ಚಿಗೆದ್ದ ಹುಚ್ಚ ವೆಂಕಟ್: 'ಥೂ' ಎಂದು ಉಗಿದ ಟಿ.ಆರ್.ಪಿ ಕಿಂಗ್.!

  By Harshitha
  |

  ಹುಚ್ಚ ವೆಂಕಟ್ ಮತ್ತೆ ಸಿಡಿದೆದ್ದಿದ್ದಾರೆ. ತಮ್ಮ ಸಿನಿಮಾ ನೋಡದವರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಹಳೇ ಸ್ಟೈಲ್ ನಲ್ಲಿ ಥಿಯೇಟರ್ ಮುಂದೆ ನಿಂತು, ವಿಡಿಯೋ ಮೂಲಕ ಎಲ್ಲರಿಗೂ 'ಥೂ' ಎಂದು ಉಗಿದಿದ್ದಾರೆ.

  ಅಷ್ಟಕ್ಕೂ, ಇವತ್ತು 'ಪೊರ್ಕಿ ಹುಚ್ಚ ವೆಂಕಟ್' ಸಿನಿಮಾ ರಿಲೀಸ್ ಆಗಿದೆ. ತೆಲುಗಿನ 'ಬಾಹುಬಲಿ-2' ಸಿನಿಮಾ ಎದುರಿಗೆ ಬಿಡುಗಡೆ ಆಗಿರುವ ಏಕೈಕ ಕನ್ನಡ ಸಿನಿಮಾ 'ಪೊರ್ಕಿ ಹುಚ್ಚ ವೆಂಕಟ್'. ['ಪೊರ್ಕಿ ಹುಚ್ಚ ವೆಂಕಟ್' ತೆರೆಮೇಲೆ ಬರಲು ರೆಡಿ: ರಿಲೀಸ್ ಯಾವಾಗ?]

  'ಪೊರ್ಕಿ ಹುಚ್ಚ ವೆಂಕಟ್' ಸಿನಿಮಾ ನೋಡಲು ಥಿಯೇಟರ್ ಗಳ ಕಡೆ ಯಾರೂ ಮುಖ ಮಾಡಿಲ್ಲ. ಚಿತ್ರಮಂದಿರ ಖಾಲಿ ಹೊಡೆಯುತ್ತಿರುವುದನ್ನ ನೋಡಿ ಸಹಿಸದ ಹುಚ್ಚ ವೆಂಕಟ್, ತಮ್ಮ ಹಳೇ ಸ್ಟೈಲ್ ಗೆ ಮೊರೆ ಹೋಗಿ, ಕ್ಯಾಮರಾ ಮುಂದೆ ನಿಂತು, ಬಾಯಿಗೆ ಬಂದ್ಹಂಗೆ ಮಾತನಾಡಿದ್ದಾರೆ.

  ಸಿಟ್ಟಿನಲ್ಲಿ ಹುಚ್ಚ ವೆಂಕಟ್ ಏನೆಲ್ಲ ಮಾತನಾಡಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಇದ್ದವರು, ಮುಂದೆ ಓದಬಹುದು...

  ನನ್ ಮಗಂದ್...

  ನನ್ ಮಗಂದ್...

  ''ನನ್ ಮಗಂದ್... ನನ್ನ ಜೊತೆ ಎಷ್ಟು ಜನ ಸೆಲ್ಫಿ ಹಿಡಿಸಿಕೊಂಡು ಪಬ್ಲಿಸಿಟಿ ಮಾಡಿಕೊಂಡಿದ್ದೀರಾ.? ಆದರೆ ಇವತ್ತು ನನ್ನ ಸಿನಿಮಾ ನೋಡಲು ಯಾರು ಬಂದಿದ್ದೀರಾ.? ಯಾರೂ ಬಂದಿಲ್ಲ.!'' ಎಂದು ತಮ್ಮ ಆಕ್ರೋಶವನ್ನ ಹುಚ್ಚ ವೆಂಕಟ್ ಹೊರ ಹಾಕಿದ್ದಾರೆ.[ಎಲ್ಲಾ ಮುಗಿದ್ಮೇಲೆ ಹುಚ್ಚ ವೆಂಕಟ್ ದಿಢೀರ್ ಪ್ರೆಸ್ ಮೀಟ್ ಮಾಡಿದ್ಯಾಕೆ?]

  ಗ್ರಾಫಿಕ್ಸ್ ಬೇಕಾ.?

  ಗ್ರಾಫಿಕ್ಸ್ ಬೇಕಾ.?

  ''ನನಗೆ ತೆಲುಗು, ತಮಿಳು, ಹಿಂದಿ ಫ್ಯಾನ್ಸ್ ಇದ್ದಾರೆ ಅಂದುಕೊಂಡಿದ್ದೆ. ನಿಮ್ಗೆಲ್ಲ ಗ್ರಾಫಿಕ್ಸ್ ಬೇಕಾ.? ಗ್ರಾಫಿಕ್ಸ್ ಪಿಕ್ಚರ್ ಮಾಡಿ ಬಿಡ್ತೀನಿ.. ನೋಡ್ತೀರಾ.? ನೀವು ನಮ್ಮನ್ನೆಲ್ಲ ನೋಡಲ್ಲ ಅಲ್ವಾ.?'' - ಹುಚ್ಚ ವೆಂಕಟ್ [ಹುಚ್ಚ ವೆಂಕಟ್ ಹೊಸ ಕಿರಿಕ್: ಫುಲ್ ರಾಂಗ್ ಆದ ರಾಗಿಣಿ]

  ನೀವು ಮನುಷ್ಯರಾ.?

  ನೀವು ಮನುಷ್ಯರಾ.?

  ''ನೀವು ಇರೋದು ಬೆಂಗಳೂರಿನಲ್ಲಿ... ಬೆಂಗಳೂರು ಇರುವುದು ಕರ್ನಾಟಕದಲ್ಲಿ... ತೆಲುಗು ಸಿನಿಮಾ ನೋಡ್ಬೇಡಿ ಅಂತ ನಾನು ಹೇಳಲ್ಲ. ಕನ್ನಡ ಸಿನಿಮಾ ನೋಡಲ್ಲ ಅಂದ್ರೆ ನೀವು ಮನುಷ್ಯರಾ...? ಥೂ'' ಎಂದು ಹುಚ್ಚ ವೆಂಕಟ್ ಉಗಿದಿದ್ದಾರೆ.

  ನನಗೆ ದುಡ್ಡು ಬೇಡ್ವಾ.?

  ನನಗೆ ದುಡ್ಡು ಬೇಡ್ವಾ.?

  ''ಹುಚ್ಚ ವೆಂಕಟ್ ಗೆ ದುಡ್ಡು ಬೇಡ್ವಾ.? ದುಡ್ಡು ಇಲ್ಲದೇ ಹುಚ್ಚ ವೆಂಕಟ್ ಬದುಕುತ್ತಾನಾ.? ದುಡ್ಡಿಂದ ಊಟ ಅಲ್ಲ. ನಾನು ಕೋಟಿ ಕೋಟಿ ಜನಕ್ಕೆ ಊಟ ಹಾಕಿದ್ದೇನೆ'' - ಹುಚ್ಚ ವೆಂಕಟ್

  ನನ್ನನ್ನ ತುಳಿಯಲು ಸಾಧ್ಯ ಇಲ್ಲ

  ನನ್ನನ್ನ ತುಳಿಯಲು ಸಾಧ್ಯ ಇಲ್ಲ

  ''ನೀವು ನನ್ನನ್ನ ತುಳಿಯೋಕೆ ಆಗಲ್ಲ. ನಾನು ಸೂಪರ್ ಸ್ಟಾರ್ ಆಗಿ ಆಯ್ತು. ಇಡೀ ಪ್ರಪಂಚದಲ್ಲಿ ಈ ಸೂಪರ್ ಸ್ಟಾರ್ ಬಿಟ್ಟರೆ ಇನ್ನೊಬ್ಬ ಸೂಪರ್ ಸ್ಟಾರ್ ಇಲ್ಲ. ಅರ್ಥ ಆಯ್ತಾ.?'' - ಹುಚ್ಚ ವೆಂಕಟ್

  ಕರ್ನಾಟಕವನ್ನ ಮಾರಿ ಬಿಡುತ್ತಾರೆ

  ಕರ್ನಾಟಕವನ್ನ ಮಾರಿ ಬಿಡುತ್ತಾರೆ

  ''ಇವತ್ತು ತೆಲುಗು ಸಿನಿಮಾ ನೋಡುತ್ತಿರುವವರು ಬೇಕಾದರೆ, ಕರ್ನಾಟಕವನ್ನ ತೆಲುಗಿನವರಿಗೆ ಮಾರಿ ಬಿಡುತ್ತಾರೆ'' - ಹುಚ್ಚ ವೆಂಕಟ್

  ಸಾಯಿಸಿಬಿಡುತ್ತೇನೆ

  ಸಾಯಿಸಿಬಿಡುತ್ತೇನೆ

  ''ನೀವೆಲ್ಲ ಥಿಯೇಟರ್ ಗೆ ಬರ್ಬೇಕ್. ಇದು ನನ್ ಆರ್ಡರ್. ರಿಕ್ವೆಸ್ಟ್ ಅಲ್ಲ. ಕನ್ನಡ ಸಿನಿಮಾ ನೋಡಿಲ್ಲ ಅಂದ್ರೆ ಸಾಯಿಸಿಬಿಡುತ್ತೇನೆ'' - ಹುಚ್ಚ ವೆಂಕಟ್

  ವಿಡಿಯೋ ನೋಡ್ಬೇಕಾ.?ಲಿಂಕ್ ಕ್ಲಿಕ್ ಮಾಡಿ

  ವಿಡಿಯೋ ನೋಡ್ಬೇಕಾ.?ಲಿಂಕ್ ಕ್ಲಿಕ್ ಮಾಡಿ

  ಹುಚ್ಚ ವೆಂಕಟ್ ಮಾತನಾಡಿರುವ ವಿಡಿಯೋ ನೋಡ್ಬೇಕು ಅಂದ್ರೆ ಈ ಲಿಂಕ್ ಕ್ಲಿಕ್ ಮಾಡಿ....

  English summary
  Annoyed Huccha Venkat lambasted Bengalureans for not watching his movie 'Porki Huccha Venkat'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X