»   » 'ಮಮಕ' ಚಿತ್ರಕ್ಕೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಿಂದ ಅನ್ಯಾಯ

'ಮಮಕ' ಚಿತ್ರಕ್ಕೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಿಂದ ಅನ್ಯಾಯ

Posted By:
Subscribe to Filmibeat Kannada

ಗೀತೆರಚನೆಕಾರ ಕವಿರಾಜ್ ಅವರು ಇದೇ ಮೊದಲ ಬಾರಿಗೆ ಆಕ್ಷನ್-ಕಟ್ ಹೇಳಿರುವ 'ಮದುವೆಯ ಮಮತೆಯ ಕರೆಯೋಲೆ' ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ನಟಿ ಅಮೂಲ್ಯ ಮತ್ತು ನವನಟ ಸೂರಜ್ ಗೌಡ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದರು.

ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ ಆಗಿರುವ 'ಮಮಕ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುವ ಹಿನ್ನಲೆಯಲ್ಲಿ ಚಿತ್ರತಂಡದವರು ಸಂಭ್ರಮ ಆಚರಿಸುವ ಬದಲು ಇದೀಗ ಚಲನಚಿತ್ರ ಮಂಡಳಿ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ.[ಕವಿಗಳ 'ಮದುವೆಗೆ' ವಿಮರ್ಶಕರು ಏನಂತಾರೇ?]


Watch Video: Injustice of PVR-Orion Mall On Maduveya Mamateya Kareyole

ಯಾಕಂತೀರಾ? ವಿಷ್ಯಾ ಏನಪ್ಪಾ ಅಂದ್ರೆ, ನಿನ್ನೆ (ಜನವರಿ 13) ರಾತ್ರಿ 9.55ರ ಸಮಯದಲ್ಲಿ ನಿಗದಿಯಂತೆ ಬೆಂಗಳೂರಿನ ಒರೆಯಾನ್ ಮಾಲ್ ನಲ್ಲಿ 'ಮದುವೆಯ ಮಮತೆಯ ಕರೆಯೋಲೆ' ಸಿನಿಮಾದ ಪ್ರದರ್ಶನ ಆಗಬೇಕಿತ್ತು. ಶೇ.80 ರಷ್ಟು ಸೀಟುಗಳು ಕೂಡ ಭರ್ತಿ ಆಗಿದ್ದವು.


ಆದರೆ ಆ ಸಮಯದಲ್ಲಿ ಸುಳ್ಳು ತಾಂತ್ರಿಕ ಕಾರಣ ನೀಡಿ ಸಿನಿಮಾದ ಪ್ರದರ್ಶನ ರದ್ದುಗೊಳಿಸಲಾಗಿದೆ. ನಾವು 'ಫಸ್ಟ್ ರ್ಯಾಂಕ್ ರಾಜು' ಸಿನಿಮಾ ತೋರಿಸುತ್ತೇವೆ ಎಂದಾಗ ನೆರೆದಿದ್ದ ಸಿನಿಪ್ರೇಕ್ಷಕರು ಅದನ್ನು ವಿರೋಧಿಸಿದರು. ಆವಾಗ ಪೊಲೀಸ್ ಮತ್ತು ಬೌನ್ಸರ್ ಗಳನ್ನು ಕರೆಸಿ ಪ್ರೇಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ.


ಈ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ಕೊಟ್ಟ ನಿರ್ದೇಶಕ ಕವಿರಾಜ್ ಮತ್ತು ನಿರ್ಮಾಪಕ ದಿನಕರ್ ತೂಗುದೀಪ್, ಥಿಯೇಟರ್ ಸಿಬ್ಬಂದಿ, ಬೌನ್ಸರ್ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.[ವಿಮರ್ಶೆ: ಕವಿರಾಜರ ಕಲ್ಪನೆಯ ಮದುವೆ ಹೇಗಿದೆ ಗೊತ್ತಾ?]


'ಸಿನಿಮಾ ಶೋ ರದ್ದು ಪಡಿಸುವ ಮೂಲಕ ನಮ್ಮ ಸಿನಿಮಾದ ಗಳಿಕೆ ಕಡಿಮೆ ಮಾಡಿ ನಮ್ಮ ಶೋಗಳನ್ನು ಈ ವಾರ ತೆರೆಗೆ ಬರುವ ಪರಭಾಷಾ ಚಿತ್ರಗಳಿಗೆ ವರ್ಗಾಯಿಸುವ ‍ಷಡ್ಯಂತ್ರವಾಗಿದೆ'. ನಮ್ಮ ನೆಲದಲ್ಲೇ ನಮ್ಮ ಮೇಲೆ ನಡೆಯುತ್ತಿರುವ ಇಂತಹ ದೌರ್ಜನ್ಯಗಳನ್ನು ವಿರೋಧಿಸಲು ಕನ್ನಡ ಪ್ರೇಮಿಗಳು ನಮ್ಮೊಂದಿಗೆ ಕೈ ಜೋಡಿಸಿ ಎಂದು 'ಮಮಕ' ಚಿತ್ರತಂಡ ಫೇಸ್ ಬುಕ್ಕಿನಲ್ಲಿ ಕನ್ನಡ ಸಿನಿರಸಿಕರಿಗೆ ಕರೆಕೊಟ್ಟಿದ್ದಾರೆ.


Watch Video: Injustice of PVR-Orion Mall On Maduveya Mamateya Kareyole

ಮಾತ್ರವಲ್ಲದೇ ಇಂದು ಬೆಳಗ್ಗೆ ನಿರ್ಮಾಪಕ ದಿನಕರ್ ತೂಗುದೀಪ್, ನಿರ್ದೇಶಕ ಕವಿರಾಜ್, ನಟ ಸೂರಜ್ ಗೌಡ ಮುಂತಾದವರು ಕರ್ನಾಟಕ ಚಲನಚಿತ್ರ ಮಂಡಳಿಯ ಮುಖ್ಯ ದ್ವಾರದಲ್ಲಿ ಧರಣಿ ಕುಳಿತಿದ್ದಾರೆ.


ನಿರ್ದೇಶಕ ಕವಿರಾಜ್, ನಿರ್ಮಾಪಕ ದಿನಕರ್ ತೂಗುದೀಪ್ ಮತ್ತು ಒರೆಯಾನ್ ಮಾಲ್ ನ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಸಿಬ್ಬಂದಿಗಳ ನಡುವೆ ನಡೆದ ಮಾತಿನ ಚಕಮಕಿ ನೋಡಲು ಈ ವಿಡಿಯೋ ನೋಡಿ. (ವಿಡಿಯೋ ಕೃಪೆ: ಪಬ್ಲಿಕ್ ಟಿವಿ)


Watch Video: Injustice of PVR-Orion Mall On Maduveya Mamateya Kareyole

English summary
Watch Injustice of PVR-Orion Mall On Maduveya Mamateya Kareyole.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada