For Quick Alerts
  ALLOW NOTIFICATIONS  
  For Daily Alerts

  ಭಿಕ್ಷುಕರಾಗಿ 128 ರೂಪಾಯಿ ಸಂಪಾದಿಸಿದ ಕಾಮಿಡಿ ಕಿಂಗ್ ಶರಣ್

  By Suneetha
  |

  ಮೊನ್ನೆ ಮೊನ್ನೆ ಖ್ಯಾತ ಗಾಯಕ ಸೋನು ನಿಗಮ್ ಅವರು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಭಿಕ್ಷುಕನ ವೇಷ ಧರಿಸಿ ಹಾಡಿ ಎಲ್ಲರ ಗಮನದ ಸೆಳೆದಿದ್ದರು. ಅವರು ರಸ್ತೆ ಬದಿಯಲ್ಲಿ ಹಾಡುತ್ತಾ ಅಲೆಯುತ್ತಿರುವಾಗ ಯಾರೋಬ್ಬರು ಅವರನ್ನು ಗುರುತಿಸಿರಲಿಲ್ಲ.

  ಇದೀಗ ಅದೇ ಸ್ಟೈಲನ್ನು ಕನ್ನಡ ನಟ ಕಾಮಿಡಿ ಕಿಂಗ್ ಶರಣ್ ಅವರು ಫಾಲೋ ಮಾಡಿದ್ದಾರೆ. ಹೌದು ನಟ ಶರಣ್ ಅವರು ಕೂಡ ಅದೇ ರೀತಿಯ ಗೆಟಪ್ ನಲ್ಲಿ ಬೆಂಗಳೂರಿನ ಮಾರುಕಟ್ಟೆಯ ಬೀದಿಯೊಂದರಲ್ಲಿ ಇಬ್ಬರು ಸಹ ಕಲಾವಿದರೊಂದಿಗೆ ಹಾಡಿದ್ದು, ಸಾರ್ವಜನಿಕರು ಯಾರು ಗುರುತಿಸಿಲ್ಲ.[ಮುಂಬೈ ಬೀದಿಯಲ್ಲಿ ಭಿಕ್ಷುಕರಾದ ಸೋನು ನಿಗಮ್]

  ನಟ ಶರಣ್ ಅವರು ತಮ್ಮ ಮುಂಬರುವ ಸಿನಿಮಾ 'ನಟರಾಜ ಸರ್ವಿಸ್' ಚಿತ್ರದ 'ಅಲ್ಲಾ ಅಲ್ಲಾ ನಟರಾಜ ಬರ್ತಾನಲ್ಲಾ' ಎಂಬ ಹಾಡನ್ನು ಭಿಕ್ಷುಕನ ವೇಷ ಧರಿಸಿ ಹಾಡಿದ್ದಾರೆ. ಈ ರೀತಿಯಾಗಿ ತಮ್ಮ ಚಿತ್ರಕ್ಕೆ ವಿಭಿನ್ನವಾಗಿ ಪ್ರೊಮೋಷನ್ ನೀಡಿದ್ದಾರೆ.

  ಅಂದಹಾಗೆ ಈ ಹಾಡನ್ನು ನೈಜವಾಗಿ ಚಿತ್ರೀಕರಣ ಮಾಡಿದ್ದು, ಶೂಟಿಂಗ್ ಸಂದರ್ಭದಲ್ಲಿ ಶರಣ್ ಅವರನ್ನು ಯಾರೂ ಕೂಡ ಗುರುತು ಹಿಡಿದಿಲ್ಲ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.[125 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಸರ್ವಿಸ್ ಮಾಡಿದ ಶರಣ್-ಮಯೂರಿ]

  ಶರಣ್ ಅವರು ಕಪ್ಪು ಕನ್ನಡಕ ಹಾಕಿ ಗಾಂಧಿಬಜಾರ್, ಹನುಮಂತನಗರ ಮುಂತಾದೆಡೆ ರಸ್ತೆ ಬದಿಯಲ್ಲಿ ಕುಳಿತು ಹಾಡುತ್ತಿದ್ದರೆ, ಅತ್ತಿಂದಿತ್ತ ಓಡಾಡುವ ಸಾರ್ವಜನಿಕರು ಯಾರೋ ಭಿಕ್ಷುಕ ಅಂತ ತಿಳಿದು ಭಿಕ್ಷೆ ಹಾಕಿದ್ದಾರೆ. ಅಂತೂ-ಇಂತೂ ಸಂಜೆ ವೇಳೆಗೆ 128 ರೂಪಾಯಿ ಕಲೆಕ್ಷನ್ ಮಾಡಿದ ಖುಷಿಯಲ್ಲಿದ್ದಾರೆ ಕಾಮಿಡಿ ಕಿಂಗ್ ಶರಣ್.

  ನಿರ್ದೇಶಕ ಪವನ್ ಒಡೆಯರ್ ಆಕ್ಷನ್-ಕಟ್ ಹೇಳಿರುವ 'ನಟರಾಜ ಸರ್ವಿಸ್' ಚಿತ್ರದಲ್ಲಿ ನಟಿ ಮಯೂರಿ ಅವರು ಶರಣ್ ಅವರಿಗೆ ಸಾಥ್ ನೀಡಿದ್ದಾರೆ. ಶರಣ್ ಅವರು ಭಿಕ್ಷುಕನ ವೇಷ ಧರಿಸಿ ಹಾಡಿರುವ ಹಾಡಿನ ವಿಡಿಯೋ ಇಲ್ಲಿದೆ ನೋಡಿ...(ವಿಡಿಯೋ ಕೃಪೆ: A1 ಕನ್ನಡ ಸಿನಿಮಾ)

  English summary
  Watch Video: Kannada Actor Sharan turn real Begger for Kannada Movie 'Nataraja Service' song promotion. Kannada Actress Mayuri in the lead role. The movie is directed by Pawan Wadeyar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X