»   » ವಿಡಿಯೋ: ಮೈನವಿರೇಳಿಸುವ ಸಾಹಸ ದೃಶ್ಯದಲ್ಲಿ ಶಿವರಾಜ್ ಕುಮಾರ್

ವಿಡಿಯೋ: ಮೈನವಿರೇಳಿಸುವ ಸಾಹಸ ದೃಶ್ಯದಲ್ಲಿ ಶಿವರಾಜ್ ಕುಮಾರ್

Posted By:
Subscribe to Filmibeat Kannada

ಇಲ್ಲಿಯವರೆಗೂ ಯಾರೂ ಮಾಡದ ಸಾಹಸ ದೃಶ್ಯ ಒಂದರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪಾಲ್ಗೊಂಡಿದ್ದಾರೆ. ಚಲಿಸುವ ರೈಲಿನ ಕೆಳಗೆ ಮಲಗಿ ತಮ್ಮ ಗಟ್ಟಿ ಗುಂಡಿಗೆ ಪ್ರದರ್ಶಿಸಿದ್ದಾರೆ ಅಣ್ಣಾವ್ರ ಮಗ ಶಿವಣ್ಣ.!

ನಂಬಿದ್ರೆ ನಂಬಿ, ಡ್ಯೂಪ್ ಬಳಸದೆ, ಗ್ರಾಫಿಕ್ಸ್ ಬಳಕೆ ಮಾಡದೇ ಮಂಜು ಸ್ವರಾಜ್ ನಿರ್ದೇಶಿಸಿರುವ 'ಶ್ರೀಕಂಠ' ಚಿತ್ರದಲ್ಲಿ ಶಿವಣ್ಣ ಚಲಿಸುವ ರೈಲಿನ ಕೆಳಗೆ ಮಲಗಿದ್ದಾರೆ. ಇನ್ನೇನು ಟ್ರೈನ್ ಬಂದೇಬಿಡ್ತು ಅನ್ನೋವಾಗ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಶಿವಣ್ಣ ರೈಲ್ವೇ ಟ್ರಾಕ್ ಮೇಲೆ ಮಲಗುವ ಸನ್ನಿವೇಶ ಜನವರಿ 6 ರಂದು ಬಿಡುಗಡೆ ಆಗುತ್ತಿರುವ 'ಶ್ರೀಕಂಠ' ಚಿತ್ರದಲ್ಲಿ ಇದೆ.


ಮೊದಲು ವಿಡಿಯೋ ನೋಡಿ....

'ಶ್ರೀಕಂಠ' ಚಿತ್ರದಲ್ಲಿ ಶಿವಣ್ಣ ಪಾಲ್ಗೊಂಡಿರುವ ಸಾಹಸಮಯ ದೃಶ್ಯ ಇಲ್ಲಿದೆ. ಲಿಂಕ್ ಕ್ಲಿಕ್ ಮಾಡಿ....


ನಿರ್ದೇಶಕ ಮಂಜು ಸ್ವರಾಜ್ ಏನಂತಾರೆ.?

'ಶ್ರೀಕಂಠ' ಚಿತ್ರದ ಈ ದೃಶ್ಯದ ಚಿತ್ರೀಕರಣ ಹೇಗೆ ನಡೆಯಿತು ಎನ್ನುವುದರ ಕುರಿತು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಮಂಜು ಸ್ವರಾಜ್ ವಿವರಿಸಿದ್ದಾರೆ.['ಸಿ.ಎಂ' ಆಗಲಿದ್ದಾರೆ ಡಾ.ಶಿವರಾಜ್ ಕುಮಾರ್!]


ಸುರಕ್ಷತಾ ಕ್ರಮಗಳನ್ನ ಕೈಗೊಂಡು ಚಿತ್ರೀಕರಣ

''Experts Supervision ನಲ್ಲಿ ಸುರಕ್ಷತಾ ಕ್ರಮಗಳನ್ನ ಸರಿಯಾಗಿ ಕೈಗೊಂಡು ಸಾಹಸ ದೃಶ್ಯದ ಚಿತ್ರೀಕರಣ ಮಾಡಲಾಯ್ತು. ಕಂಪ್ಲೀಟ್ ಹೋಮ್ ವರ್ಕ್ ಮಾಡಿ, ತುಂಬಾ ಪ್ಲಾನ್ ಮಾಡಿ ಈ ದೃಶ್ಯವನ್ನ ಶೂಟ್ ಮಾಡಿದ್ದೇವೆ'' - ಮಂಜು ಸ್ವರಾಜ್, ನಿರ್ದೇಶಕ [ಅಂದು ಯಶ್, ಇಂದು ಶಿವಣ್ಣ: ಇಬ್ಬರಿಗೂ 'ನಾಗರಹಾವಿನ' ದ್ವೇಷ.!]


ಬಾಡಿಗೆ ಟ್ರೈನ್

''ಮೈಸೂರಿನಿಂದ 35 ಕಿ.ಮಿ ದೂರದ ಒಂದು ಕುಗ್ರಾಮದಲ್ಲಿ ಇರುವ ರೈಲ್ವೇ ಟ್ರ್ಯಾಕ್ ನಲ್ಲಿ ಚಿತ್ರೀಕರಣ ಮಾಡಿದ್ವಿ. ಇದಕ್ಕಾಗಿ ಒಂದು ಟ್ರೈನ್ ನ ಬಾಡಿಗೆ ತಗೊಂಡಿದ್ವಿ'' - ಮಂಜು ಸ್ವರಾಜ್, ನಿರ್ದೇಶಕ [ಶಿವಣ್ಣನ 'ಕಡಗ ಸ್ಟೈಲ್' ಗೆ ಚಿಕ್ಕವರು, ದೊಡ್ಡವರು, ಎಲ್ಲರೂ ಫಿದಾ]


ರಿಸ್ಕ್ ತೆಗೆದುಕೊಳ್ಳಲ್ಲ

''ಈ ತರಹ ಸನ್ನಿವೇಶಗಳಲ್ಲಿ ನಾವು ರಿಸ್ಕ್ ತೆಗೆದುಕೊಳ್ಳಲು ರೆಡಿ ಇರಲ್ಲ. ಹೀಗಾಗಿ ತುಂಬಾ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ವಿ'' - ಮಂಜು ಸ್ವರಾಜ್, ನಿರ್ದೇಶಕ


ಶಿವಣ್ಣ ವಿರೋಧಿಸಲಿಲ್ಲ

''ಸ್ಕ್ರಿಪ್ಟ್ ನಡೆಯುವಾಗಲೇ ಶಿವಣ್ಣನಿಗೆ ಈ ಸನ್ನಿವೇಶದ ಬಗ್ಗೆ ಹೇಳಿದ್ವಿ. ಅವರು ಕೂಡ ಪ್ರಿಪೇರ್ ಆಗಿದ್ದರು. ವಿರೋಧ ವ್ಯಕ್ತವಾಗಲಿಲ್ಲ'' - ಮಂಜು ಸ್ವರಾಜ್, ನಿರ್ದೇಶಕ


ಸ್ಟಂಟ್ ಮಾಸ್ಟರ್ ಯಾರು.?

''ವಿಕ್ರಂ ಅಂತ ಹೊಸ ಸ್ಟಂಟ್ ಮಾಸ್ಟರ್ ಈ ಸನ್ನಿವೇಶವನ್ನು ಕಂಪೋಸ್ ಮಾಡಿದ್ದು. ರೈಲ್ವೇ ಟ್ರ್ಯಾಕ್ ಮೇಲೆ ಒಬ್ಬ ಮನುಷ್ಯ ಮಲಗಿದರೆ ಟ್ರೈನ್ ಮತ್ತು ಮನುಷ್ಯನ ನಡುವೆ ಇರಬಹುದಾದ ಅಂತರ ಹಾಗೂ ರೈಲು ಚಲಿಸುವಾಗ ಕಲ್ಲು ಸಿಡಿಯುತ್ತಾ ಎಂಬುದರ ಬಗ್ಗೆ ಅಧ್ಯಯನ ಮಾಡಿ ಸೀಕ್ವೆನ್ಸ್ ಪ್ಲಾನ್ ಮಾಡಿದ್ವಿ'' - ಮಂಜು ಸ್ವರಾಜ್, ನಿರ್ದೇಶಕ


English summary
Kannada Actor Shiva Rajkumar has performed daring stunt in Kannada Movie 'Srikanta'. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada