For Quick Alerts
  ALLOW NOTIFICATIONS  
  For Daily Alerts

  ಇಪ್ಪತ್ತೈದು ವರ್ಷಗಳ ಬಳಿಕ 'ಸರ್ಜಾ' ಕುಟುಂಬದಲ್ಲಿ ಇಂದು ಸಡಗರ-ಸಂಭ್ರಮ

  By Harshitha
  |
  ಅಕ್ಟೋಬರ್ 22ರಂದು ಚಿರಂಜೀವಿ ಸರ್ಜಾ ಹಾಗು ಮೇಘನಾ ರಾಜ್ ನಿಶ್ಚಿತಾರ್ಥ ನೆರವೇರಿತು | Filmibeat Kannada

  ಇಪ್ಪತ್ತೈದು ವರ್ಷಗಳ ಹಿಂದೆ ನಟ ಅರ್ಜುನ್ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅದಾದ ಬಳಿಕ 'ಸರ್ಜಾ' ಕುಟುಂಬದಲ್ಲಿ ಯಾವುದೇ ಶುಭ ಕಾರ್ಯಗಳು ನಡೆದಿರಲಿಲ್ಲ.

  ಇದೀಗ ಇಪ್ಪತ್ತೈದು ವರ್ಷಗಳ ಬಳಿಕ 'ಸರ್ಜಾ' ಕುಟುಂಬದಲ್ಲಿ ಸಡಗರ-ಸಂಭ್ರಮ ಮನೆ ಮಾಡಿದೆ. ಅದಕ್ಕೆ ಕಾರಣ ಚಿರಂಜೀವಿ ಸರ್ಜಾ ನಿಶ್ಚಿತಾರ್ಥ.

  ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಇಂದು ಉಂಗುರ ಬದಲಾಯಿಸಿಕೊಂಡಿದ್ದಾರೆ. ನಿಶ್ಚಿತಾರ್ಥ ಸಮಾರಂಭ ಮುಗಿದ ಬಳಿಕ ಮಾಧ್ಯಮಗಳ ಮುಂದೆ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಸಂತಸ ಹಂಚಿಕೊಂಡಿದ್ದು ಹೀಗೆ...

  ಇಪ್ಪತ್ತೈದು ವರ್ಷಗಳ ಬಳಿಕ ಶುಭ ಕಾರ್ಯ

  ಇಪ್ಪತ್ತೈದು ವರ್ಷಗಳ ಬಳಿಕ ಶುಭ ಕಾರ್ಯ

  ''ಇಪ್ಪತ್ತೈದು ವರ್ಷಗಳ ಬಳಿಕ ಇಂದು ನಮ್ಮ ಕುಟುಂಬದಲ್ಲಿ ಶುಭ ಕಾರ್ಯ ನಡೆದಿದೆ. ಇಪ್ಪತ್ತೈದು ವರ್ಷಗಳ ಹಿಂದೆ ನಮ್ಮ ಅಂಕಲ್ (ಅರ್ಜುನ್ ಸರ್ಜಾ) ಮದುವೆ ನಡೆದಿತ್ತು. ಇಂದು ನನ್ನ ನಿಶ್ಚಿತಾರ್ಥ ಆಗಿದೆ. ಹೀಗಾಗಿ ಸಹಜವಾಗಿ ಖುಷಿ ಆಗಿದೆ. ನಿಜ ಹೇಳಬೇಕು ಅಂದ್ರೆ, ನಾವು ಒಬ್ಬರಿಗೊಬ್ಬರು ಪ್ರಪೋಸ್ ಅಂತ ಏನೂ ಮಾಡಿಲ್ಲ'' ಎಂದು ನಟ ಚಿರಂಜೀವಿ ಸರ್ಜಾ

  ಚಿರು ಕೊಟ್ಟ ಉಡುಗೊರೆ

  ಚಿರು ಕೊಟ್ಟ ಉಡುಗೊರೆ

  ''ಮೇಘನಾಗೆ ಡೈಮಂಡ್ ಅಂದ್ರೆ ಇಷ್ಟ. ಹೀಗಾಗಿ ನಿಶ್ಚಿತಾರ್ಥದ ಪ್ರಯುಕ್ತ ಡೈಮಂಡ್ ರಿಂಗ್ ಕೊಟ್ಟಿದ್ದೇನೆ'' - ಚಿರಂಜೀವಿ ಸರ್ಜಾ

  ಮಂದಹಾಸ ಬೀರಿದ ಮೇಘನಾ

  ಮಂದಹಾಸ ಬೀರಿದ ಮೇಘನಾ

  ''ಅರ್ಜುನ್ ಅಂಕಲ್ ನಮ್ಮ ಮನೆಗೆ ಬಂದು ಮದುವೆ ಪ್ರಸ್ತಾಪ ಮಾಡಿದರು. ಶಾಸ್ತ್ರ-ಸಂಪ್ರದಾಯದ ಪ್ರಕಾರ, ನಮ್ಮ ನಿಶ್ಚಿತಾರ್ಥ ನಡೆದಿದೆ. ಖುಷಿ ಆಗುತ್ತಿದೆ'' ಎಂದು ಮಂದಹಾಸ ಬೀರಿದರು ನಟಿ ಮೇಘನಾ ರಾಜ್

  ಶುಭ ಹಾರೈಸಿದ ಅರ್ಜುನ್ ಸರ್ಜಾ

  ಶುಭ ಹಾರೈಸಿದ ಅರ್ಜುನ್ ಸರ್ಜಾ

  ''ತುಂಬಾ ಸಂತೋಷ ಆಗುತ್ತಿದೆ. ಚಿರು-ಮೇಘನಾ ಪ್ರೀತಿಸಿ, ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಮದುವೆ ಆಗುತ್ತಿದ್ದಾರೆ. ದೇವರ ಆಶೀರ್ವಾದ ಅವರ ಮೇಲಿರಲಿ ಅಂತ ಹಾರೈಸುತ್ತೇನೆ'' ಎಂದರು ನಟ ಅರ್ಜುನ್ ಸರ್ಜಾ

  English summary
  ''We never proposed each other'' says Chiranjeevi Sarja

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X