For Quick Alerts
  ALLOW NOTIFICATIONS  
  For Daily Alerts

  ವೆಬ್ ಸೀರೀಸ್ ಆಗಿ ತೆರೆಗೆ ಬರುತ್ತಿದೆ 'ನಮ್ಮ ಊರಿನ ರಸಿಕರು'

  |

  ''ಅವ್ರು ಹೋಗ್ದೆ ಇದ್ರೆ ಕಷ್ಟ

  ಆಗ ದೇಶಕೆಲ್ಲ ನಷ್ಟ

  ನಮ್ಗೆಲ್ಲಾ ಜಾತಿ ಭ್ರಷ್ಟ

  ನಾವ್ ಹೇಳೋ ಮಾತೆಲ್ಲ ಸ್ಪಷ್ಟ''

  80-90 ರ ದಶಕದಲ್ಲಿ ಜನಿಸಿ ಕನ್ನಡ ಮಾಧ್ಯಮದಲ್ಲಿ ಕಲಿತರವರಿಗೆ ಮೇಲಿನ ಕಿರು ಪದ್ಯ ಚೆನ್ನಾಗಿ ನೆನಪಿರುತ್ತದೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕೃತಿ 'ನಮ್ಮ ಊರಿನ ರಸಿಕರು' ನಲ್ಲಿನ ಪಾತ್ರ ನಾಣಿ ಹೇಳುವ ಸಾಲುಗಳವು.

  ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ 'ನಮ್ಮ ಊರಿನ ರಸಿಕರು' ಕೃತಿಯಲ್ಲಿನ ನಾಣಿಯ ಕತೆ ಪಠ್ಯವಾಗಿತ್ತು. ನಾಣಿ ಹೆಸರಿನ ಆ ಪಾಠವನ್ನು ಮರೆತವರು ಕಡಿಮೆ. ನಾಣಿಯನ್ನು ಮೆಚ್ಚಿಕೊಂಡು ಹಲವರು 'ನಮ್ಮ ಊರಿನ ರಸಿಕರು' ಕೃತಿಯನ್ನು ಕೊಂಡು ಪೂರ್ಣ ಓದಿದ್ದು ಸಹ ಉಂಟು.

  ವೀಕ್ಷಕರಿಗೆ ಬೇಸರ ಉಂಟುಮಾಡಿದ ಬಿಗ್ ಬಾಸ್ ಕನ್ನಡ 8 | Filmibeat Kannada

  ಇದೀಗ 'ನಮ್ಮ ಊರಿನ ರಸಿಕರು' ಕೃತಿ ತೆರೆಗೆ ಬರುತ್ತಿದೆ. ಸಿನಿಮಾ ಆಗಿ ಅಲ್ಲ ಬದಲಿಗೆ ವೆಬ್ ಸರಣಿ ಆಗಿ. ಈ ವೆಬ್ ಸರಣಿ ನಿರ್ದೇಶಿಸುತ್ತಿರುವುದು ನಂದಿತಾ ಯಾದವ್. ಈಗಾಗಲೇ ಕೆಲವು ಧಾರಾವಾಹಿಗಳಲ್ಲಿ ನಟಿಸಿ, ಡಾಕ್ಯುಮೆಂಟರಿ, ಕಿರುಚಿತ್ರ, ವೆಬ್ ಸರಣಿ, ಸಿನಿಮಾ ನಿರ್ದೇಶಿಸಿ ಅನುಭವ ಹೊಂದಿರುವ ನಂದಿತಾ, ನಮ್ಮ ಊರಿನ ರಸಿಕರು ಕೃತಿಯನ್ನು ತೆರೆಗೆ ತರುತ್ತಿದ್ದಾರೆ.

  ವೆಬ್ ಸರಣಿಯ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ಸಾಗುತ್ತಿದೆ. ಈ ವೆಬ್ ಸರಣಿಯು 16 ಎಪಿಸೋಡ್‌ಗಳಲ್ಲಿ ಪ್ರದರ್ಶನಗೊಳ್ಳಲಿದೆ. ವೆಬ್ ಸರಣಿ ಸಿನಿಮಾಟೊಗ್ರಫಿಯನ್ನು ಅಶೋಕ್ ಕಶ್ಯಪ್ ಮಾಡುತ್ತಿದ್ದಾರೆ.

  ಮಂಡ್ಯ ರಮೇಶ್, ರಾಜೇಶ್ ನಟರಂಗ, ಪಿ.ಶೇಷಾದ್ರಿ, ಶೃಂಗ, ರಮೇಶ್ ಪಂಡಿತ್, ಸುನೇತ್ರ, ಸುಂದರ್ ರಾಜ್, ಮಂಗಳ, ಅಂಜನಾ ಭಾರಧ್ವಜ್, ರವಿಕುಮಾರ್ ಸೇರಿದಂತೆ ಹಲವು ಪ್ರತಿಭಾವಂತ ಹಿರಿಯ ನಟರು ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ.

  English summary
  Goruru Ramaswamy Aiyangar's book Namma Oorina Rasikaru based web series's shooting is in progress in Shimoga.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X