For Quick Alerts
  ALLOW NOTIFICATIONS  
  For Daily Alerts

  'ಮುಂಗಾರು ಮಳೆ' ಹುಡುಗಿಗೆ ಕೂಡಿಬಂದ ಕಂಕಣ

  By Prasad
  |

  ಯಸ್. ಮದುವೆಯಾದ್ರೆ ಕನ್ನಡನಾಡಿನ ಹುಡುಗನನ್ನೇ ಮದುವೆಯಾಗೋದು ಎಂದು ಸಂದರ್ಭ ಬಂದಾಗಲೆಲ್ಲ ಹೇಳುತ್ತಿದ್ದ 'ಮುಂಗಾರು ಮಳೆ' ಚಿತ್ರದ 'ನಂದಿನಿ' ಪೂಜಾ ಗಾಂಧಿ ತಾವು ಅಂದಿದ್ದನ್ನೇ ಸಾಧಿಸಿ ತೋರಿಸಿದ್ದಾರೆ. ಪಂಜಾಬಿ ಹುಡುಗಿಯಾದರೂ ಕನ್ನಡವನ್ನು ಕಲಿತು ಕನ್ನಡ ನೆಲದಲ್ಲೇ ನೆಲೆ ಕಂಡಿರುವ ಪೂಜಾ ಗಾಂಧಿ, ಈಗ ಕನ್ನಡಮಣ್ಣಿನ ಹುಡುಗನನ್ನೇ ಮದುವೆಯಾಗಿ ಇಲ್ಲಿನ ಸೊಸೆಯೂ ಆಗುತ್ತಿದ್ದಾರೆ. ಪೂಜಾ ಹೊಸ ಬಾಳಿನ ಹೊಸಿಲು ತುಳಿಯೋಕೆ ರೆಡಿಯಾಗಿದ್ದಾರೆ. ನ.15ರಂದು ಅವರ ನಿಶ್ಚಿತಾರ್ಥ.

  ಪೂಜಾಗೆ ಒಲಿದು ಒಲಿದು ಬಂದಿರುವ ಹುಡುಗ ಯಾರು? ಪೂಜಾ ಜೊತೆ ಬಾನಿಗೇರಿ ಹಾರಲು ಸಜ್ಜಾಗಿರುವ ಹುಡುಗ ಏನು ಮಾಡುತ್ತಿದ್ದಾನೆ? ಆತ ನೋಡಲು ಹೇಗಿದ್ದಾನೆ? ಯಶಸ್ಸಿನ ಉತ್ತುಂಗದಲ್ಲಿದ್ದಾಗ ಮದುವೆ ಇಷ್ಟು ಬೇಗ ಬೇಕಿತ್ತಾ? ಮದುವೆಯಾದ ಮೇಲೆ ಕನ್ನಡ ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರಿಸುತ್ತಾರಾ? ಮಹತ್ವಾಕಾಂಕ್ಷಿಯಾಗಿರುವ ಪೂಜಾ ಗಾಂಧಿ ಅವರ ರಾಜಕೀಯ ಜೀವನದ ಭವಿಷ್ಯವೇನು? ಈ ಎಲ್ಲ ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬೇಕಾಗಿದೆ.

  ಸ್ಯಾಂಡಲ್‌ವುಡ್‌ಗೆ ಕುಣಿದೂ ಕುಣಿದು ಬಂದ ಪಂಜಾಬಿ ಬ್ಯೂಟಿ ಈ ಪೂಜಾ ಗಾಂಧಿ ಮೊದಲ ಸಿನಿಮಾದಲ್ಲಿ ಮದ್ವೆಯಾದಾಗ ಅದೆಷ್ಟೋ ಸಿನಿಪ್ರೇಮಿಗಳು ಕಣ್ಣೀರಿಟ್ಟಿದ್ರು. ಮುಂಗಾರು ಮಳೆ ಅನ್ನೋ ವಂಡರ್‌ಫುಲ್ ಸಿನಿಮಾ ಕೊಟ್ಟಿದ್ದ ಫೀಲ್ ಅದು. ಮುಂಗಾರುಮಳೆಯಲ್ಲಿ ಪ್ರೀತಂಗೆ ಸಿಗದೇ ಗೌತಮ್ ಕೈ ಹಿಡಿದಿದ್ದ ಪೂಜಾಳನ್ನ ನೋಡಿದ ಅಭಿಮಾನಿಗಳ ಮನಸೆಲ್ಲಾ ಮುಂಗಾರುಮಳೆಯಲ್ಲಿ ತೊಯ್ದು ಹೋಗಿತ್ತು. ಅದು ರೀಲ್ ಮದುವೆ. ಆದ್ರೆ ಈಗ ರಿಯಲ್ ಮದುವೆಗೆ ರೆಡಿಯಾಗಿದ್ದಾಳೆ ಪೂಜಾ. [ಚಿತ್ರಪಟ]

  ಪೂಜಾ ಕೈಹಿಡಿಯುವ ಹುಡುಗ ಯಾರು?

  ಪೂಜಾ ಕೈಹಿಡಿಯುವ ಹುಡುಗ ಯಾರು?

  ಬೈದಬೈ ಆನಂದ್ ಅನ್ನೋ ಬೆಂಗಳೂರಿನಲ್ಲಿ ನೆಲೆಯೂರಿರುವ ದೊಡ್ಡ ಉದ್ಯಮಿ ಪೂಜಾಳ ಬಾಳಲ್ಲಿ ಆನಂದ ತರೋಕೆ ರೆಡಿಯಾಗಿದ್ದಾರೆ. ಇಷ್ಟಕ್ಕೂ ಆನಂದ್ ಕನ್ನಡದ ಹುಡುಗನಂತೆ! ಈ ಮದುವೆಗೆ ಪೂಜಾ ಮನೆಯವರ ಕಡೆಯಿಂದ ಒಪ್ಪಿಗೆಯೂ ಸಿಕ್ಕಿದೆಯಂತೆ! ಸೋ ಹಸೆಮಣೆಯೇರೋಕೆ ರೆಡಿಯಾಗಿರೋ ಪೂಜಾ ನಿನ್ನಿಂದಲೇ ನಿನ್ನಿಂದಲೇ ಅಂತ ಕನಸು ಕಾಣೋಕೆ ಶುರುಮಾಡಿದ್ದಾರೆ. ಸರಿಯಾದ ಸಮಯದಲ್ಲಿ ಮದುವೆಯಾಗಲು ನಿರ್ಧರಿಸಿರುವುದು ಪೂಜಾರ ಜಾಣ್ಮೆಗೆ ಸಾಕ್ಷಿ.

  ನಿಶ್ಚಿತಾರ್ಥ ಯಾವಾಗ? ಮದುವೆ ಎಂದು?

  ನಿಶ್ಚಿತಾರ್ಥ ಯಾವಾಗ? ಮದುವೆ ಎಂದು?

  ರಾಜಕೀಯಕ್ಕೂ ಒಂದು ಕಾಲು ಇರಿಸಿರೋ ಪೂಜಾ ಗಾಂಧಿ ಈಗ ಮದ್ವೆಗೆ ನಾನ್ ರೆಡಿ ಅಂತಿದ್ದಾಳೆ. ನಿಶ್ಚಿತಾರ್ಥ ಬೇರೆ ಸದ್ಯದಲ್ಲೇ ಸೀಕ್ರೇಟ್ ಪ್ಲೇಸ್‌ನಲ್ಲಿ ನಡೆಯುತ್ತಂತೆ. ಆದ್ರೆ ಮದ್ವೆಗೆ ಎಲ್ಲರನ್ನು ಕರೀತೀನಿ ಅಂದಿರೋ ಪೂಜಾ ಗಾಂಧಿಯನ್ನ ಮದ್ವೆಯಾಗೋ ಆನಂದ್ ದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿ. ಹೀಗೆ ರಾಜಕೀಯ, ಮದುವೆ, ಗಂಡ, ಮನೆ, ಮಕ್ಕಳ ನಡುವೆ ಸಿನಿಮಾ ನಿಭಾಯಿಸೋದು ಪೂಜಾಗೆ ಸಾಧ್ಯವಾ?

  ಪಂಜಾಬಿಯಾದ್ರೂ ಕನ್ನಡದ ಹೆಮ್ಮೆಯ ನಟಿ

  ಪಂಜಾಬಿಯಾದ್ರೂ ಕನ್ನಡದ ಹೆಮ್ಮೆಯ ನಟಿ

  ಮೂಲತಃ ಪಂಜಾಬಿಯಾದ್ರೂ ಪೂಜಾ ಗಾಂಧಿ ಕನ್ನಡ ಕಲಿತು ಕನ್ನಡ ಚಿತ್ರದಲ್ಲಿ ಪವರ್‌ಫುಲ್ ನಟಿ ಆಗಿ ಬೆಳೆದ ಕಥೆ ನಿಜಕ್ಕೂ ರೋಚಕ. ಆರಂಭದಲ್ಲಿ ತಪ್ಪುತಪ್ಪು ಕನ್ನಡ ಮಾತನಾಡುತ್ತಿದ್ದಾಗ ಜನ ಆಡಿಕೊಂಡರೂ ತಲೆಕೆಡಿಸಿಕೊಳ್ಳದೆ ನಾನು ಕನ್ನಡವಳು ಅಂತ ಹೆಮ್ಮೆಯಿಂದ ಹೇಳಿಕೊಂಡ ಹೆಮ್ಮೆಯ ನಟಿ ಪೂಜಾ. ಇಲ್ಲಿಯವರೆಗೆ ಯಾವುದೇ ವಿವಾದ ಸುಳಿಯಲ್ಲೂ ಸಿಲುಕಿಲ್ಲದಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

  ಪೂಜಾನೂ ಮದುವೆ ನಂತರ ಕಳೆದುಹೋಗ್ತಾಳಾ?

  ಪೂಜಾನೂ ಮದುವೆ ನಂತರ ಕಳೆದುಹೋಗ್ತಾಳಾ?

  ಸೋತ್ರೂ ಗೆದ್ರೂ ಸ್ಯಾಂಡಲ್‌ವುಡ್‌ನಲ್ಲೇ ಸೆಟ್ಲ್ ಆದ ಈ ಬ್ಯೂಟಿ ಈಗ ಕನ್ನಡದ ಹುಡುಗನನ್ನೇ ಮದ್ವೆಯಾಗ್ತಿದ್ದಾಳೆ. ಅಂದ್ರೆ ಇಲ್ಲೇ ಸೆಟ್ಲ್ ಆಗೋದು ಸೆಂಟ್ ಪರ್ಸೆಂಟ್ ಕನ್‌ಫರ್ಮ್. ಒಂದು ಕಡೆಯಲ್ಲಿ ಪೂಜಾ ಕನ್ನಡದ ಹುಡುಗನನ್ನೇ ಮದ್ವೆಯಾಗ್ತಿರೋ ಖುಷಿ ಅಭಿಮನಿಗಳದ್ದಾದ್ರೆ, ಮತ್ತೊಂದು ಮದ್ವೆಯಾದ್ರೆ ರಕ್ಷಿತಾ, ಅನು ಪ್ರಭಾಕರ್ ತರಹ ಪೂಜಾನೂ ಕಳೆದುಹೋಗಿಬಿಡ್ತಾಳೇನೋ ಅನ್ನೋ ಆತಂಕ ಅಭಿಮಾನಿಗಳದ್ದು.

  ಎದ್ದಿದ್ದಕ್ಕಿಂತ ಬಿದ್ದಿದ್ದೇ ಹೆಚ್ಚಾದ್ರೂ ಜನಪ್ರಿಯತೆ ಕುಂದಿಲ್ಲ

  ಎದ್ದಿದ್ದಕ್ಕಿಂತ ಬಿದ್ದಿದ್ದೇ ಹೆಚ್ಚಾದ್ರೂ ಜನಪ್ರಿಯತೆ ಕುಂದಿಲ್ಲ

  ಯಸ್ ಮಳೆ ಹುಡುಗಿ ಪೂಜಾ ಗಾಂದಿ ನಿಜಕ್ಕೂ ಲಕ್ಕಿ. ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಮೊದಲ ಸಿನಿಮಾದಲ್ಲೇ ಕನ್ನಡಿಗರ ಮನಗೆದ್ಳು. ಕನ್ನಡದ ಮನೆಮಗಳಾಗಿ ಮಳೆ ಹುಡುಗಿ ಅಂತ ಹೆಸರು ಪಡ್ಕೊಂಡ್ಳು. ಆದ್ರೆ ಮುಂಗಾರುಮಳೆಯಂತಹಾ ಚಿತ್ರದಲ್ಲಿ ನಟಿಸಿದ್ರೂ ಮತ್ತೆ ಪೂಜಾ ಕನ್ನಡದಲ್ಲಿ ಎದ್ದಿದ್ದಕ್ಕಿಂತ ಬಿದ್ದಿದ್ದೇ ಹೆಚ್ಚು. ಆದ್ರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈ ಪಂಜಾಬಿ ಬ್ಯೂಟಿ ಸಕ್ಸಸ್‌ಕೆ ಪೀಚೆ ಭಾಗೋ ಅನ್ನೋ ಪಾಲಿಸಿಯನ್ನ ಬಿಡಲಿಲ್ಲ. ಎಷ್ಟೇ ಬೀಳುಗಳನ್ನು ಕಂಡರೂ ಅವರ ಜನಪ್ರಿಯತೆ ಎಳ್ಳಷ್ಟೂ ಕುಂದಿಲ್ಲ.

  ಬೋಲ್ಡ್ ಆದ ಪೂಜಾ ಮತ್ತೆ ಗೆದ್ದಿದ್ದು ಹೇಗೆ?

  ಬೋಲ್ಡ್ ಆದ ಪೂಜಾ ಮತ್ತೆ ಗೆದ್ದಿದ್ದು ಹೇಗೆ?

  ಮುಂಗಾರುಮಳೆ ಮೊದಲ ಸಿನಿಮಾದ ಗೆಲುವು ಪೂಜಾಗೆ ಮುಂದಿನ ಸಿನಿಮಾಗಳಲ್ಲಿ ಯಾವುದೇ ಸಹಾಯ ಮಾಡ್ಲಿಲ್ಲ. ಮುಂಗಾರುಮಳೆಯನಂತ್ರ ಬ್ಯಾಕ್ ಟು ಬ್ಯಾಕ್ ಸೋಲನ್ನೇ ಕಂಡ ಪೂಜಾ ಮತ್ತೆ ಸಕ್ಸಸ್‌ನ ಟ್ರ್ಯಾಕ್‌ಗೆ ಬಂದಿದ್ದು ದಂಡುಪಾಳ್ಯ ಚಿತ್ರದಿಂದ. ದಂಡುಪಾಳ್ಯ ಚಿತ್ರದ ಬೋಲ್ಡಾದ ಲಕ್ಷ್ಮಿ ಪಾತ್ರವನ್ನ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಸೈ ಅನ್ನಿಸಿಕೊಂಡ್ಲು.

  ಡೈರೆಕ್ಟರ್ಸ್ ಸ್ಪೆಷಲ್ ಚಂಚಂ ಚಂಪಾಕಲಿ

  ಡೈರೆಕ್ಟರ್ಸ್ ಸ್ಪೆಷಲ್ ಚಂಚಂ ಚಂಪಾಕಲಿ

  'ದಂಡುಪಾಳ್ಯ'ದಲ್ಲಿ ಪೂಜಾ ಪಾತ್ರವನ್ನು ನೋಡಿದ ಎಂಥವರೂ ಒಂದು ಕ್ಷಣ ಬೆಚ್ಚಿಬೀಳಬೇಕು. ಅದ್ರೆ ಇದೇ ಗಟ್ಟಿ ಪಾತ್ರ ಪೂಜಾಳ ಸಿನಿಲೈಫ್‌ನ್ನ ಮತ್ತೆ ಹಸಿರಾಗಿಸಿದ್ದು. ಸಿನಿಮಾದಲ್ಲಿ ಪೂಜಾ ಮಾಡಿರೋ ಈ ಲಕ್ಷ್ಮಿಯ ಪಾತ್ರ ಅದೆಷ್ಟು ಪವರ್‌ಫುಲ್ಲಾಗಿತ್ತು ಅಂದ್ರೆ ದಂಡುಪಾಳ್ಯ ಇದಾದನಂತ್ರ ಪೂಜಾಗೆ ಸ್ಪೆಷಲ್ ಸಿನಿಮಾ 'ಡೈರೆಕ್ಟರ್ಸ್ ಸ್ಪೆಷಲ್‌'ನಲ್ಲಿ ಐಟಂ ಡಾನ್ಸರ್ ಆಗಿ ಕುಣಿಯೋ ಅವಕಾಶ ಸಿಕ್ತು.. ಇಲ್ಲೂ ಪೂಜಾ ಚಪ್ಪರಿಸಿ ಸವಿಯೋ ಚಂ ಚಂ ಚಂಪಾಕಲಿ. ದಂಡುಪಾಳ್ಯ ಈಗ ತೆಲುಗಿಗೂ ಡಬ್ ಆಗಲಿದೆ.

  ಪೂಜಾಳ ಅರ್ಧ ಫಿಲ್ಮಿ ಲೈಫ್ ಮುಗೀತಾ?

  ಪೂಜಾಳ ಅರ್ಧ ಫಿಲ್ಮಿ ಲೈಫ್ ಮುಗೀತಾ?

  ಮದ್ವೆ ಅನ್ನೋ ವಿಷ್ಯಕ್ಕೆ ಬಂದ್ರೆ ಹೀರೋಯಿನ್‌ಗಳ ಅರ್ಧ ಲೈಫ್ ಮುಗಿದ ಹಾಗೇನೇ ಅನ್ನೋದು ಚಿತ್ರರಂಗದ ಲೆಕ್ಕಾಚಾರ. ಆಲ್ಮೋಸ್ಟ್ ಮದ್ವೆಯಾದ ಹೀರೋಯಿನ್‌ಗಳೆಲ್ಲಾ ತೆರೆಮರೆಗೆ ಸರಿದುಬಿಡ್ತಾರೆ. ಇನ್ನು ಕೆಲವರು ಪೋಷಕ ಪಾತ್ರಗಳಿಗೋ, ಅಮ್ಮ ಅಥವಾ ಅಕ್ಕನ ಕ್ಯಾರೆಕ್ಟರ್‌ಗಳಿಗೆ ಸೀಮಿತವಾಗಿಬಿಡ್ತಾರೆ. ಸೋ ಇಷ್ಟೊಂದು ಯಶಸ್ಸು ಕಂಡಿರುವ ಪೂಜಾ ಮದುವೆ ನಿರ್ಧಾರ ಮಾಡಿದ್ಯಾಕೆ? ಆಮೇಲೆ ಪೂಜಾ ಆಕ್ಟ್ ಮಾಡ್ತಾಳಾ? ಈ ಎಲ್ಲ ಪ್ರಶ್ನೆಗಳಿಗೆ ಪೂಜಾ ಗಾಂಧಿಯೇ ಉತ್ತರ ಹೇಳ್ಬೇಕು.

  English summary
  Mungaru Male heroine Pooja Gandhi, a Punjabi girl settled in Karnataka, surprises every fan by announcing her marriage with a Kannada boy Anand. Who is that Anand? When is Pooja's marriage? Will she continue acting after marriage? Find out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X