twitter
    For Quick Alerts
    ALLOW NOTIFICATIONS  
    For Daily Alerts

    ಜನಾರ್ಧನ ರೆಡ್ಡಿ ಮಗನಿಗೆ ರಾಜಮೌಳಿ, ರವಿಚಂದ್ರನ್, ಶಿವಣ್ಣ ಕೊಟ್ಟ ಸಲಹೆ ಏನು?

    |

    ಗಾಲಿ ಜನಾರ್ಧನ ರೆಡ್ಡಿ ಪುತ್ರಸ ಕಿರೀಟಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು ಆಯ್ತು. ಬಾಹುಬಲಿ ನಿರ್ದೇಶಕ ರಾಜಮೌಳಿ, ಕೇಜಿಸ್ಟಾರ್ ರವಿಚಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅದ್ಧೂರಿ ವೇದಿಕೆ ಮೇಲೆ ಕಿರೀಟಿಯನ್ನು ಚಿತ್ರರಂಗಕ್ಕೆ ಪರಿಚಯಿಸಲಾಯಿತು. ಟೀಸರ್ ಮೂಲಕ ಕಿರೀಟಿಯ ಪ್ರತಿಭೆಯ ಅನಾವರಣ ಮಾಡಿತ್ತು ಚಿತ್ರತಂಡ. ಈ ಟೀಸರ್ ನೋಡಿದ ಬಳಿಕ ರಾಜಮೌಳಿ, ರವಿಚಂದ್ರನ್ ಹಾಗೂ ಜೆನೀಲಿಯಾ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ 'ಮಾಯಾಬಜಾರ್' ಚಿತ್ರದ ನಿರ್ದೇಶಕ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತೆಲುಗಿನ ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ವಾರಾಹಿ ಪ್ರೊಡಕ್ಷನ್ ಈ ಚಿತ್ರವನ್ನುನಿರ್ಮಾಣ ಮಾಡುತ್ತಿದೆ. ಬಾಹುಬಲಿ ಛಾಯಾಗ್ರಾಹಕ ಸೇಂಥಿಲ್ ಕುಮಾರ್ ಸೇರಿದಂತೆ ಖ್ಯಾತ ತಂತ್ರಜ್ಞರೇ ಈ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಜನಾರ್ಧನ ರೆಡ್ಡಿ ಪುತ್ರನ ಬಗ್ಗೆ ರಾಜಮೌಳಿ, ರವಿಚಂದ್ರನ್, ಶಿವಣ್ಣ ಏನು ಹೇಳಿದ್ದಾರೆ? ಅಂತ ತಿಳಿಯಲು ಮುಂದೆ ಓದಿ.

    ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಲಂಡನ್‌ನಲ್ಲಿ ಪಡೆದ ಪದವಿ ಯಾವುದು? ಸಿನಿಮಾಗೆ ತಯಾರಿ ಹೇಗಿತ್ತು? ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಲಂಡನ್‌ನಲ್ಲಿ ಪಡೆದ ಪದವಿ ಯಾವುದು? ಸಿನಿಮಾಗೆ ತಯಾರಿ ಹೇಗಿತ್ತು?

     ನಟನೆ, ಡ್ಯಾನ್ಸ್, ಸ್ಟಂಟ್ಸ್‌ನಲ್ಲಿ ಕಿರೀಟಿ ಸೂಪರ್

    ನಟನೆ, ಡ್ಯಾನ್ಸ್, ಸ್ಟಂಟ್ಸ್‌ನಲ್ಲಿ ಕಿರೀಟಿ ಸೂಪರ್

    ಕಿರೀಟಿ ಸಿನಿಮಾ ಲಾಂಚ್‌ನಲ್ಲಿ ರಾಜಮೌಳಿ ಪ್ರಮುಖ ಆಕರ್ಷಣೆಯಾಗಿದ್ದರು. ಕಿರೀಟಿಯ ಟೀಸರ್ ನೋಡಿದ ಬಳಿಕ ವೇದಿಕೆ ಮೇಲೆ ಕಿರೀಟಿ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. "ನನಗೆ ಪ್ರಾಮಿಸಿಂಗ್ ಆಗಿರುವ ಯುವ ಪ್ರತಿಭೆಯನ್ನು ಲಾಂಚ್ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇವರು ನಟನೆ ಮಾಡಬಹುದು, ಡ್ಯಾನ್ಸ್ ಮಾಡಬಹುದು, ಇವರು ಸ್ಟಂಟ್ಸ್ ಅನ್ನೂ ಮಾಡಬಹುದು. ಇದೇ ಸಂದರ್ಭದಲ್ಲಿ ಯುವ ಪ್ರತಿಭೆಗೆ ಒಳ್ಳೆ ಲಾಂಚ್ ಕೂಡಬೇಕು. ಈ ಪ್ರತಿಭೆ ಈಗ ಅದ್ಭುತ ಕೈಗಳ ಜೊತೆ ಸೇರಿಕೊಂಡಿದೆ. ಅದಕ್ಕೆ ಖುಷಿಯಾಗುತ್ತಿದೆ. ರವಿ ಸರ್ ಇವರಿಗೆ ಒಳ್ಳೆ ಸಲಹೆಗಳನ್ನು ನೀಡುತ್ತಾರೆ. ಈ ಸಿನಿಮಾ ಯಶಸ್ವಿಯಾಗಲಿ ಎಂದು ಹೇಳುತ್ತೇನೆ." ಎಂದು ರಾಜಮೌಳಿ ಹೇಳಿದ್ದಾರೆ.

     ಕಿರೀಟಿಗೆ ಶಿವಣ್ಣ ಕೊಟ್ಟ ಸಲಹೆ ಏನು?

    ಕಿರೀಟಿಗೆ ಶಿವಣ್ಣ ಕೊಟ್ಟ ಸಲಹೆ ಏನು?

    ಕಿರೀಟಿ ಲಾಂಚ್‌ಗೆ ಶಿವರಾಜ್‌ಕುಮಾರ್ ಗೈರು ಹಾಜರಾಗಿದ್ದರು. ಆದರೆ ವಿಡಿಯೋ ಮೂಲಕ ಕಿರೀಟಿಯನ್ನು ಕನ್ನಡ ಚಿತ್ರರಂಗಕ್ಕೆ ಸ್ವಾಗತ ಮಾಡಿದ್ದಾರೆ. ಅಲ್ಲದೆ ಕೆಲವು ಸಲಹೆಗಳನ್ನೂ ನೀಡಿದ್ದಾರೆ. "ಒಬ್ಬ ಪ್ರಾಮಿಸಿಂಗ್ ಹೀರೋ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ ಅಂದರೆ ತಪ್ಪಾಗಲ್ಲಾ. ತೆಲುಗು ಆಗಬಹುದು. ತಮಿಳು ಆಗಬಹುದು. ಫ್ಯಾನ್ ಇಂಡಿಯಾ ಅಂತ ಏನು ಕರೆಯುತ್ತಾರೆ. ಅದಕ್ಕೆ ಉತ್ತಮ ಆಯ್ಕೆ ಎನ್ನಬಹುದು. ಮೊದಲ ಎಂಟ್ರಿ ಒಳ್ಳೆಯದಾಗಲಿ. ಕನ್ನಡ ಚಿತ್ರರಂಗಕ್ಕೆ ಸ್ವಾಗತ. ನಾನು ಈ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು. ಬಾರದೆ ಹೋದರೂ, ನನ್ನ ಮನಸ್ಸು, ಹೃದಯ ಎಲ್ಲವೂ ಅಲ್ಲೇ ಇದೆ. ಕಿರೀಟಿ ನಂಬಿಕೆ ಇಟ್ಟು ಕೆಲಸ ಮಾಡು. ನಿಮ್ಮದು ಅಂತ ಒಂದು ಸ್ಟೈಲ್ ಇರುತ್ತೆ. ಅದನ್ನೇ ಹಿಂಬಾಲಿಸು." ಎಂದು ಶಿವರಾಜ್‌ಕುಮಾರ್ ಸಲಹೆ ನೀಡಿದ್ದಾರೆ.

     ಕಿರೀಟಿ ಅರ್ಥ ತಿಳಿಸಿದ ರವಿಚಂದ್ರನ್

    ಕಿರೀಟಿ ಅರ್ಥ ತಿಳಿಸಿದ ರವಿಚಂದ್ರನ್

    ಕ್ರೇಜಿಸ್ಟಾರ್ ರವಿಚಂದ್ರನ್ ಈ ಸಿನಿಮಾ ಮುಹೂರ್ತಕ್ಕೆ ಕೇವಲ ಅತಿಥಿಯಾಗಿ ಆಗಮಿಸಿರಲಿಲ್ಲ. ಈ ಸಿನಿಮಾದಲ್ಲಿ ಕಿರೀಟಿಗೆ ತಂದೆಯಾಗಿಯೂ ನಟಿಸುತ್ತಿದ್ದಾರೆ. ಹೀಗಾಗಿ ಈ ಸಮಾರಂಭದ ವೇದಿಕೆ ಮೇಲೆ ಕಿರೀಟಿ ಕರೆದು ಅವರ ಹೆಸರಿನ ಅರ್ಥ ತಿಳಿಸಿಕೊಟ್ಟಿದ್ದಾರೆ. " ಕಿರೀಟಿ ಅಂದರೆ ಅರ್ಜುನಾ. ಸಿನಿಮಾದಲ್ಲಿ ಹೇಗೆ ಅನಿರೀಕ್ಷಿತಗಳು ನಡೆದು ಹೋಗುತ್ತೆ ನೋಡಿ. ಕಿರೀಟಿಗೆ ಸಾರಥಿ ಬಂದು ರಾಧಾಕೃಷ್ಣ. ಹಿಂದೆ ಜನಾರ್ಧನ್ ರೆಡ್ಡಿಯವರ ಆಶೀರ್ವಾದ. ಶ್ರೀಲೀಲಾ ಇದ್ದಾರೆ, ಜನೀಲಿಯಾ ಇದ್ದಾರೆ. ನಾನೂ ಇದ್ದೀನಿ. ಇದಕ್ಕಿಂತ ಒಳ್ಳೆಯ ಪ್ಯಾಕೇಜ್ ಬೇಕಾ ನಿಮಗೆ? ಏರ್‌ಪೋರ್ಟ್‌ನಲ್ಲಿ ಸಿಕ್ಕಿದ್ದ. ಒಂದು ಗಂಟೆ ಪ್ರಯಾಣ ಮಾಡಿದ್ದೆವು. ಅದರಲ್ಲಿ ಸಾವಿರ ಪ್ರಶ್ನೆ ಕೇಳಿದ್ದಾನೆ. ಈ ಸಿನಿಮಾದ ನಿರ್ದೇಶಕ ರಾಧಾಕೃಷ್ಣ ಅವರನ್ನು ಪುನೀತ್ ರಾಜ್‌ಕುಮಾರ್ ಪರಿಚಯ ಮಾಡಿಸಿದ್ದರು. ನಮ್ಮ ಸಿನಿಮಾ ಮಾಯಾಬಜಾರ್ ಮಾಡಿದ್ದಾರೆ ಎಂದು ಹೇಳಿದ್ದರು. ಪುನೀತ್ ಪರಿಚಯ ಮಾಡಿಸಿ ಹೊರಟು ಹೋದರು. ಏರ್‌ಪೋರ್ಟ್‌ನಲ್ಲಿ ಕಿರೀಟಿ ಸಿಕ್ಕಿದ ಗಡ್ಡ ಬಿಟ್ಟಿದ್ದೆ ಅಪ್ಪನ ಪಾತ್ರ ಫಿಕ್ಸ್ ಆಯ್ತು." ಎಂದು ರವಿಚಂದ್ರನ್ ತಿಳಿಸಿದ್ದಾರೆ.

     ದಶಕದ ಬಳಿಕ ಜೆನೀಲಿಯಾ ಸಿನಿಮಾ ಎಂಟ್ರಿ

    ದಶಕದ ಬಳಿಕ ಜೆನೀಲಿಯಾ ಸಿನಿಮಾ ಎಂಟ್ರಿ

    'ಸತ್ಯ್ ಇನ್ ಲವ್' ಸಿನಿಮಾಗಾಗಿ ಕನ್ನಡಕ್ಕೆ ಬಂದಿದ್ದ ಜೆನೀಲಿಯಾ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ವಿವಾಹದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ಬೊಮ್ಮರಿಲ್ಲು ನಟಿ 10 ವರ್ಷಗಳ ಬಳಿಕ ನಟನೆಗೆ ಹಿಂತಿರುಗಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. "10 ವರ್ಷಗಳ ಬಳಿಕ ಮತ್ತೆ ನಟನೆಗೆ ಮರಳುತ್ತಿದ್ದೇನೆ. ಇದು ತುಂಬಾನೇ ಸ್ಪೆಷಲ್ ಪ್ರಾಜೆಕ್ಟ್. ನಿಮ್ಮ ಮೊದಲ ಸಿನಿಮಾ. ಈ ಸಿನಿಮಾದುದ್ದಕ್ಕೂ ನಾವು ಇರುತ್ತೇವೆ. ಒಳ್ಳೆಯ ನಿರ್ಮಾಪಕರು, ತಂತ್ರಜ್ಞರು, ಕಲಾವಿದರು ನಿಮ್ಮೊಂದಿಗೆ ಇದ್ದಾರೆ. ನನಗೆ ಮತ್ತೆ ಚಿತ್ರರಂಗಕ್ಕೆ ಮರಳಿದ್ದಕ್ಕೆ ಬಹಳನೇ ಖುಷಿಯಾಗುತ್ತಿದೆ." ಎಂದು ಜೆನೀಲಿಯಾ ತಿಳಿಸಿದ್ದಾರೆ.

    English summary
    What Rajamouli, Ravichandran, Genelia says about Kireeti Entry. Rajamouli and Ravichandra appreciated Janardhan Reddy, son Kireeti.
    Friday, March 4, 2022, 18:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X