»   » ಎರಡು ಅದ್ಭುತಗಳು ಒಟ್ಟಿಗೆ ಬಂದಿವೆ: ಬಾಹುಬಲಿ-2, ಒಪ್ಪೋ ಎಫ್3

ಎರಡು ಅದ್ಭುತಗಳು ಒಟ್ಟಿಗೆ ಬಂದಿವೆ: ಬಾಹುಬಲಿ-2, ಒಪ್ಪೋ ಎಫ್3

Posted By:
Subscribe to Filmibeat Kannada

2015ರ ಜುಲೈನಲ್ಲಿ ಬಾಹುಬಲಿ ಸಿನಿಮಾದ ಮೊದಲನೇ ಭಾಗ ಬಿಡುಗಡೆಯಾದ ತಕ್ಷಣವೇ ಅದು ದೊಡ್ಡ ಮಟ್ಟದ ಹಿಟ್ ಆಗುತ್ತದೆ ಎಂಬುದು ಖಾತ್ರಿಯಾಗಿತ್ತು. ಜಗತ್ತಿನಾದ್ಯಂತ ಸಿನಿಮಾ ಪ್ರೇಮಿಗಳಿಂದ ಹಾಗೂ ವಿಮರ್ಶಕರಿಂದ ಒಳ್ಳೆ ಪ್ರತಿಕ್ರಿಯೆ ಕೂಡ ಬಂದಿತ್ತು. ಅದರಲ್ಲೂ ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಯಾಕೆ ಎಂಬ ಕುತೂಹಲದಿಂದ 'ಬಾಹುಬಲಿ-2' ಸಿನಿಮಾಗಾಗಿ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿತು.

ಅಂತೂ ಬಾಹುಬಲಿಯ ಮುಂದುವರಿದ ಭಾಗ ಬಿಡುಗಡೆ ಅಗಿದೆ. ಬಿಡುಗಡೆಗೆ ಮುಂಚೆಯೇ ಎಲ್ಲರ ಗಮನ ಸೆಳೆದು, ಇದು ಉಳಿದ ಸಿನಿಮಾಗಳಂತಲ್ಲ ಎಂಬುದನ್ನೂ ಸಾಬೀತು ಮಾಡಿದೆ. ಅಂದಹಾಗೆ ಈ ಸಿನಿಮಾದ ವಿಶೇಷ ಏನು ಅಂತೀರಾ?

When Two Heroes Come Together – Baahubali 2 & OPPO F3

* 4K ಹೈ ಡೆಫಿನೇಶನ್ ಫಾರ್ಮಾಟ್ ನಲ್ಲಿ ಬಿಡುಗಡೆ ಆಗಿರುವ ಮೊದಲ ಭಾರತೀಯ ಸಿನಿಮಾ ಇದು. ಅದ್ಭುತವಾದ ಗ್ರಾಫಿಕ್ಸ್, ಎಂಎಂ ಕೀರವಾಣಿ ಸೊಗಸಾದ ಸಂಗೀತ ಎಲ್ಲೆಡೆಯಿಂದ ಮೆಚ್ಚುಗೆಗೆ ಪಾತ್ರವಾಗಿದೆ.

* ಭಾರೀ ವೆಚ್ಚದಲ್ಲಿ ತಯಾರಾಗಿರುವ ಚಿತ್ರ ಸರಣಿ ಇದು. ನೀವು ಈವರೆಗೆ ಭಾರತೀಯ ಚಿತ್ರಗಳಲ್ಲಿ ಕಂಡಿರದಂಥ ವಿಷಯಲ್ ಎಫೆಕ್ಟ್ ಈ ಸಿನಿಮಾದಲ್ಲಿದೆ.

* ಈ ಸಿನಿಮಾದಲ್ಲಿ ಬಳಸಿರುವ ಬಟ್ಟೆ-ಬರೆ ಬಗ್ಗೆಯೇ ಸಿನಿಮಾ ಟೀಸರ್ ಬಿಡುಗಡೆ ಆದಾಗಿನಿಂದ ಚರ್ಚೆ ಆಗುತ್ತಲೇ ಇದೆ. ಅನುಷ್ಕಾ ಹಾಗೂ ತಮನ್ನಾ ಧರಿಸಿರುವ ದಿರಿಸನ್ನು ನೋಡುವುದಕ್ಕೆ ಮಹಿಳೆಯರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ.

* ಬಾಹುಬಲಿ-2ರ ಬಗ್ಗೆ ಇದ್ದ ಅತಿ ಮುಖ್ಯ ಕುತೂಹಲ ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಏಕೆ ಎಂಬ ರಹಸ್ಯ ಬಯಲಾಗಿದೆ. ಮೈನವಿರೇಳಿಸುವ ಹೊಡೆದಾಟದ ದೃಶ್ಯಗಳು, ರೋಮಾಂಚಕ ದೃಶ್ಯಗಳು, ಪ್ರಾಚೀನ ಯುದ್ಧ ಕಲೆ ಮತ್ತು ಅಚ್ಚರಿ ಮೂಡಿಸುವ ಶಸ್ತ್ರಗಳನ್ನು ನೋಡಲು ಪ್ರೇಕ್ಷಕರು ನಿರೀಕ್ಷಿಸಿದ್ದರು.

ಬಾಹುಬಲಿಯನ್ನು ಹೇಗೆ ನಿರೀಕ್ಷೆ ಮಾಡುತ್ತಿದ್ದರೇ ಅದೇ ರೀತಿ ಜನರು 'ಒಪ್ಪೋ ಎಫ್ 3' ಮೊಬೈಲ್ ಫೋನ್ ಸಹ ನಿರೀಕ್ಷಿಸುತ್ತಿದ್ದರು. ನಿಮಗೆ ಗೊತ್ತಾ ಒಪ್ಪೋ ಎಫ್ 3 ಹಾಗೂ ಬಾಹುಬಲಿ -2 ಸಿನಿಮಾ ಮಧ್ಯ ಕೆಲವು ಸಾಮ್ಯತೆಗಳಿವೆ.

'ಒಪ್ಪೋ ಎಫ್ 3' ಹಾಗೂ 'ಬಾಹುಬಲಿ-2' ಎರಡೂ ಸಹ ಬಿಡುಗಡೆಗೆ ಮುನ್ನವೇ ಜನರ ಮಧ್ಯೆ ಮಾತಿಗೆ ಕಾರಣವಾಗಿದ್ದವು. 4K ಹೈ ಡೆಫಿನೇಶನ್ ಫಾರ್ಮಾಟ್ ನಲ್ಲಿ ಬಿಡುಗಡೆ ಆಗಿರುವ ಮೊದಲ ಭಾರತೀಯ ಸಿನಿಮಾ. ವಿಎಫ್ ಎಕ್ಸ್ ನ ಅದ್ಭುತ ತಂತ್ರಜ್ಞಾನ ಬಳಸಲಾಗಿದೆ. ಅದನ್ನು ವಿಡಿಯೋ ಗೇಮ್ ಆಗಿ ಮಾರ್ಪಾಟು ಮಾಡಲಾಗಿದೆ.

ಇನ್ನು 'ಒಪ್ಪೋ ಎಫ್ 3' ಮೊಬೈಲ್ ಫೋನ್ ನ ಡುಯಲ್-ಸೆಲ್ಫಿ ಕ್ಯಾಮೆರಾದ ಫೀಚರ್ ತುಂಬ ವಿಶೇಷವಾಗಿದೆ. ಒಂದು ಒಬ್ಬರೇ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಅಂತಿದ್ದರೆ, ಎರಡನೇದು ಗ್ರೂಪ್ ಸೆಲ್ಫಿಗೆ ಅಂತಿದೆ. ಪ್ರತಿ ಸಲವೂ ತುಂಬ ಸೊಗಸಾದ ಸೆಲ್ಫಿ ತೆಗೆದುಕೊಳ್ಳಬಹುದು. ಬಾಹುಬಲಿಯ ಮೇಕಿಂಗ್ ಸಿನಿಮಾದ ಮೇಲಿನ ಉತ್ಕಟ ಪ್ರೀತಿಯಿಂದ ಆಗಿದೆ. ಭರಪೂರ ಮನರಂಜನೆ ನೀಡುತ್ತಿದೆ.

ಇನ್ನು 'ಒಪ್ಪೋ ಎಫ್ 3'ಯ ಸೆಲ್ಫಿ ಅನುಭವವನ್ನು ಮತ್ತ್ಯಾವುದಕ್ಕೂ ಹೋಲಿಸುವುದಕ್ಕೆ ಸಾಧ್ಯವಿಲ್ಲ. ಅತ್ಯುತ್ತಮವಾದದ್ದನ್ನೇ ನೀಡಬೇಕು ಅನ್ನೋದು ಒಪ್ಪೋ ಕಂಪೆನಿಯ ಆದ್ಯತೆ. ಸೆಲ್ಫಿಯ ಟ್ರೆಂಡ್ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಕಂಪೆನಿ ಅದೇ ಉದ್ದೇಶದಿಮ್ದಲೇ ಕ್ಯಾಮೆರಾ ಫೋನ್ ತಯಾರಿಸಿದೆ.

'ಒಪ್ಪೋ ಎಫ್ 3'ಯ 2.0 ವರ್ಷನ್ ಮೇ 4ರಂದು ಬಿಡುಗಡೆ ಆಗುತ್ತಿದೆ. ಇದು ಒಪ್ಪೋ ಸೆಲ್ಫಿ ಎಕ್ಸ್ ಪರ್ಟ್ ಸಿರೀಸ್ ಗೆ ಹೊಸ ಸೇರ್ಪಡೆ. ಬಾಹುಬಲಿ-2 ಹಾಗೂ ಒಪ್ಪೋ ಎಫ್ 3 ಡ್ಯುಯಲ್ ಸೆಲ್ಫಿ ಕ್ಯಾಮೆರಾ ಎರಡರ ಬಗ್ಗೆಯೂ ವಿಪರೀತ ನಿರೀಕ್ಷೆಗಳಿವೆ. ಎರಡೂ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ.

English summary
Well, the expectation from Baahubali 2 and OPPO F3 Dual Selfie camera phone is high and we are sure neither of them is going to disappoint us.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada