For Quick Alerts
  ALLOW NOTIFICATIONS  
  For Daily Alerts

  ಕ್ರಶ್ ಯಾರು? ಗುಟ್ಟು ಬಿಟ್ಟುಕೊಟ್ಟ ಕ್ಯೂಟ್ ನಟಿ ಅದಿತಿ ಪ್ರಭುದೇವ

  |

  ನಟಿಯರು ತಮ್ಮ ಪ್ರೀತಿಯ ಬಗ್ಗೆ ಗುಟ್ಟು ಬಿಟ್ಟುಕೊಡುವುದು ಬಹು ಅಪರೂಪ, ಆದರೆ ಕ್ಯೂಟ್ ನಟಿ ಅದಿತಿ ಪ್ರಭುದೇವ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

  Old Monk Movie Muhurtham : ಓಲ್ಡ್ ಮಂಕ್ ಅನ್ನೋದು ನಾರದನ ಕಥೆ | Srini | Aditi Prabhudeva

  ತಮ್ಮ ಕ್ಯೂಟ್ ಲುಕ್, ಉತ್ತಮ ನಟನೆಯಿಂದ ಈಗಾಗಲೇ ಹುಡುಗರ ಹೃದಯ ದೋಚಿರುವ ನಟಿ ಅದಿತಿ ಪ್ರಭುದೇವ್, ತಮ್ಮ ಕ್ರಶ್ ಹೆಸರು ಹೇಳಿ ಹುಡುಗರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.

  ಹೌದು, ತಮ್ಮ ಕ್ರಶ್ ಯಾರು ಎಂಬುದನ್ನು ಅದಿತಿ ಪ್ರಭುದೇವ ಇನ್‌ಸ್ಟಾಗ್ರಾಂ ನಲ್ಲಿ ಚಿತ್ರ ಸಮೇತ ಪ್ರಕಟಿಸಿದ್ದಾರೆ. ಆದರೆ ಚಿತ್ರ ನೋಡಿ ಹುಡುಗರಿಗೆ ಅದಿತಿ ಮೇಲೆ ಇನ್ನಷ್ಟು ಲೌವ್ ಆಗುವಂತಿದೆ!

  ರಾಯಲ್ ಎನ್‌ಫೀಲ್ಡ್ ಸವಾರಿ ಮಾಡುತ್ತಿರುವ ಅದಿತಿ

  ರಾಯಲ್ ಎನ್‌ಫೀಲ್ಡ್ ಸವಾರಿ ಮಾಡುತ್ತಿರುವ ಅದಿತಿ

  ರಾಯಲ್ ಎನ್‌ಫೀಲ್ಡ್ ಏರಿ ಸವಾರಿ ಮಾಡುತ್ತಿರುವ ಚಿತ್ರ ಪ್ರಕಟಿಸಿರುವ ಅದಿತಿ ಪ್ರಭುದೇವ, ಹುಡುಗರಂತೆ ಬೈಕ್ ಅದರಲ್ಲಿಯೂ ರಾಯಲ್ ಎನ್‌ಫೀಲ್ಡ್ ಹಲವು ಹುಡುಗಿಯರ ಕ್ರಶ್ ಎಂದು ಅದಿತಿ ಪ್ರಭುದೇವ ಬರೆದುಕೊಂಡಿದ್ದಾರೆ.

  ಶ್ವಾನ ಪ್ರಿಯೆ ಅದಿತಿ ಪ್ರಭುದೇವ

  ಶ್ವಾನ ಪ್ರಿಯೆ ಅದಿತಿ ಪ್ರಭುದೇವ

  ಅದಿತಿ ಪ್ರಭುದೇವ್ ಪೋಸ್ಟ್‌ಗೆ ಹಲವರು ಲೈಕ್ ಮಾಡಿದ್ದಾರೆ. ಕಮೆಂಟ್ ಸಹ ಮಾಡಿದ್ದಾರೆ. ಅದಿತಿ ಪ್ರಭುದೇವ‌ ಶ್ವಾನ ಪ್ರಿಯೆ ಸಹ ಆಗಿದ್ದು, ತಮ್ಮ ನೆಚ್ಚಿನ ನಾಯಿಯ ಚಿತ್ರಗಳನ್ನು ಸಹ ಇನ್‌ಸ್ಟಾ ನಲ್ಲಿ ಹಂಚಿಕೊಂಡಿದ್ದಾರೆ.

  ಧಾರವಾಹಿಯಿಂದ ಸಿನಿಮಾಕ್ಕೆ ಬಂದ ಅದಿತಿ ಪ್ರಭುದೇವ

  ಧಾರವಾಹಿಯಿಂದ ಸಿನಿಮಾಕ್ಕೆ ಬಂದ ಅದಿತಿ ಪ್ರಭುದೇವ

  ನಟಿ ಅದಿತಿ ಪ್ರಭುದೇವ ಧಾರವಾಹಿಯಿಂದ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದವರು. 'ಗುಂಡ್ಯಾನ ಹೆಂಡ್ತಿ' ಧಾರವಾಹಿಯಲ್ಲಿ ಕಮಲಿಯಾಗಿ ನಟಿಸಿದ್ದ ಅವರು, ನಂತರ ನಾಗಕನ್ನಿಕೆ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅಲ್ಲಿಂದ ಅವರು ಬೆಳ್ಳಿ ತೆರೆಗೆ ಪ್ರವೇಶಿಸಿದರು.

  ಹಲವು ಸಿನಿಮಾಗಳು ಅದಿತಿ ಕೈಯಲ್ಲಿವೆ

  ಹಲವು ಸಿನಿಮಾಗಳು ಅದಿತಿ ಕೈಯಲ್ಲಿವೆ

  ಸಾಲು-ಸಾಲು ಚಿತ್ರಗಳು ಅದಿತಿ ಪ್ರಭುದೇವ ಅವರ ಕೈಯಲ್ಲಿ ಈಗಿವೆ. ತೋತಾಪುರಿ 1-2 ಬಿಡುಗಡೆಗೆ ತಯಾರಾಗಿದೆ. ದಿಲ್‌ಮಾರ್, ಒಂಬತ್ತನೇ ದಿಕ್ಕು, ಚಾಂಪಿಯನ್, ಓಲ್ಡ್‌ಮಾಂಕ್ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.

  English summary
  Sandalwood actress Aditi Prabhudeva reveled her crush's identity. She post photo of here crush in Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X