»   » ಡಬ್ಬಿಂಗ್ ವಿರುದ್ಧ ದನಿ ಎತ್ತಿದ ಪುನೀತ್: ಫೇಸ್ ಬುಕ್ ನಲ್ಲಿ ವಾದ, ವಿವಾದ, ವಾಕ್ಸಮರ

ಡಬ್ಬಿಂಗ್ ವಿರುದ್ಧ ದನಿ ಎತ್ತಿದ ಪುನೀತ್: ಫೇಸ್ ಬುಕ್ ನಲ್ಲಿ ವಾದ, ವಿವಾದ, ವಾಕ್ಸಮರ

Posted By: Naveen
Subscribe to Filmibeat Kannada

ನಟ ಪುನೀತ್ ರಾಜ್ ಕುಮಾರ್ ಇತ್ತೀಚೆಗಷ್ಟೆ ಮಂಡ್ಯದಲ್ಲಿ ಡಬ್ಬಿಂಗ್ ಬಗ್ಗೆ ಮಾತನಾಡಿದ್ದರು. 'ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಗಳು ಬೇಡ... ಇದು ಕನ್ನಡ ಚಿತ್ರರಂಗದ ಎಲ್ಲರ ಅಭಿಪ್ರಾಯ' ಎಂದು ಪುನೀತ್ ಹೇಳಿಕೆ ನೀಡಿದ್ದರು.

ಅಷ್ಟಕ್ಕೂ, ಎಸ್.ಎಸ್.ರಾಜಮೌಳಿ ಅವರ ಡಬ್ಬಿಂಗ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪುನೀತ್, ''ಡಬ್ಬಿಂಗ್ ಬೇಕು ಎನ್ನುವುದು ನಿರ್ದೇಶಕ ರಾಜಮೌಳಿ ಅವರ ವೈಯಕ್ತಿಕ ಅಭಿಪ್ರಾಯ'' ಎಂದು ಹೇಳಿದ್ದರು. ಜೊತೆ, ಡಬ್ಬಿಂಗ್ ಕುರಿತು ತಮ್ಮ ನಿಲುವನ್ನ ಸ್ಪಷ್ಟ ಪಡಿಸಿದ್ದರು.

ಈಗ ಪುನೀತ್ ಆಡಿರುವ ಮಾತುಗಳೇ ಸಾಮಾಜಿಕ ಜಾಲತಾಣಗಳಲ್ಲಿ ವಾದ, ವಿವಾದಕ್ಕೆ ಕಾರಣವಾಗಿದೆ. ಡಬ್ಬಿಂಗ್ ಬ್ಯಾಟ್ ಬೀಸುತ್ತಿರುವ ಕೆಲವರು 'ಪುನೀತ್ ಯಾರು?' ಎಂದು ಕೇಳುವ ಮೂಲಕ ವಾಕ್ಸಮರಕ್ಕೆ ನಾಂದಿ ಹಾಡಿದ್ದಾರೆ. ಮುಂದೆ ಓದಿರಿ....

ಪುನೀತ್ ಏನು ಹೇಳಿದ್ದರು?

ನಟ ಪುನೀತ್ ರಾಜ್ ಕುಮಾರ್ ಡಬ್ಬಿಂಗ್ ಬಗ್ಗೆ ಇತ್ತೀಚೆಗಷ್ಟೆ ಒಂದು ಹೇಳಿಕೆ ನೀಡಿದ್ದರು. 'ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಗಳು ಖಂಡಿತ ಬೇಡ... ಇದು ಇಡೀ ಕನ್ನಡ ಚಿತ್ರರಂಗದ ಅಭಿಪ್ರಾಯ' ಎಂಬುದು ಪುನೀತ್ ಮಾತಾಗಿತ್ತು.

ಪವರ್ ಸ್ಟಾರ್ ಗೆ ಟಾಂಗ್

ಪುನೀತ್ ಅವರ ಈ ಮಾತಿಗೆ ಡಬ್ಬಿಂಗ್ ಪರ ಇರುವವರು ಪ್ರತಿಕ್ರಿಯೆ ನೀಡಿದ್ದಾರೆ. ಡಬ್ಬಿಂಗ್ ಬೇಡ ಅಂತ ಹೇಳಿದ್ದ ಪುನೀತ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಯಾರು?

ಡಬ್ಬಿಂಗ್ ವಿಚಾರದಲ್ಲಿ ಆರು ಕೋಟಿ ಕನ್ನಡಿಗರ ನಿರ್ಧಾರವನ್ನ ತೆಗೆದುಕೊಳುವುದಕ್ಕೆ ಪುನೀತ್ ರಾಜ್ ಕುಮಾರ್ ಯಾರು? ಅಂತ ಡಬ್ಬಿಂಗ್ ಪರ ಹೋರಾಟಗಾರ ಗಣೇಶ್ ಚೇತನ್ ಎಂಬುವರು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದಿದ್ದಾರೆ.

ಸ್ಟಾರ್ ನಟರಿಗೆ ಪ್ರಶ್ನೆ

ಕನ್ನಡದ ನಟರಾದ ದರ್ಶನ್, ಜಗ್ಗೇಶ್ ಡಬ್ಬಿಂಗ್ ಚಿತ್ರಗಳನ್ನ ಬಲವಾಗಿ ವಿರೋಧಿಸುತ್ತಾರೆ. ಆದರೆ, ಯಾಕೆ ಅವರು ಕೋರ್ಟ್ ಗೆ ಹೋಗಿ ಕಾನೂನಾತ್ಮಕವಾಗಿ ಡಬ್ಬಿಂಗ್ ನಿಷೇಧ ಮಾಡುವುದಿಲ್ಲ ಎಂದು ಗಣೇಶ್ ಚೇತನ್ ಎಂಬುವರು ಪ್ರಶ್ನಿಸಿದ್ದಾರೆ.

ಯಾಕೆ ವಿರೋಧ ?

'ತಮಿಳು, ತೆಲುಗು, ಹಿಂದಿ ಸಿನಿಮಾಗಳು 300ಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದಾಗ ಯಾಕೆ ಮಾತನಾಡುವುದಿಲ್ಲ, ಆದ್ರೆ ಡಬ್ಬಿಂಗ್ ವಿಷಯದಲ್ಲಿ ಮಾತ್ರ ಯಾಕೆ ವಿರೋಧ' ಎನ್ನುವುದು ಗಣೇಶ್ ಚೇತನ್ ಅವರ ನೇರ ಪ್ರಶ್ನೆ.

ಪದೇ ಪದೇ ಡಬ್ಬಿಂಗ್ ಕೂಗು

ಸದ್ಯ ರಾಜಮೌಳಿ ಯವರ ಒಂದು ಹೇಳಿಕೆಯಿಂದ ಮತ್ತೆ ಡಬ್ಬಿಂಗ್ ಬಗ್ಗೆ ಪರ ವಿರೋಧದ ಕೂಗು ಜೋರಾಗಿದೆ. ಅದೇನೇ ಇದ್ದರೂ ಡಬ್ಬಿಂಗ್ ಗೆ ಮಾತ್ರ ಈಗಾಗಲೇ ಕಾನೂನಿನ ಸಮ್ಮತಿ ಸಿಕ್ಕಿದೆ.

English summary
Dubbing supporter Ganesh Chetan has taken his Facebook account to question Kannada Actor Puneeth Rajkumar about dubbing ban in Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada