For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್'ನಲ್ಲಿ ದರ್ಶನ್‌ಗೆ ಜೊತೆಯಾಗಿರುವ ಆ ಪುಟ್ಟ ಬಾಲಕ ಯಾರು?

  |

  ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಮಾರ್ಚ್ 11 ರಂದು ರಾಜ್ಯ ಸೇರಿ ನೆರೆ ರಾಜ್ಯಗಳಲ್ಲಿಯೂ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ಸಾಮಾಜಿಕ ಜಾಲತಾಣದ ತುಂಬೆಲ್ಲಾ 'ರಾಬರ್ಟ್' ಪೋಸ್ಟರ್‌ಗಳೇ ತುಂಬಿಕೊಂಡಿವೆ.

  ಅದರಲ್ಲಿಯೂ ದರ್ಶನ್, ಹನುಮ ವೇಷಧಾರಿಯಾಗಿ ಪುಟಾಣಿ ರಾಮನನ್ನು ಹೆಗಲ ಮೇಲೆ ಹೊತ್ತುಕೊಂಡಿರುವ ಪೋಸ್ಟರ್‌ಗಳು ಸಾಕಷ್ಟು ಹರಿದಾಡುತ್ತಿದೆ. ಸಿನಿಮಾ ಟ್ರೇಲರ್‌ನಲ್ಲೂ ಈ ಬಾಲಕನ ಪಾತ್ರ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಸಿನಿಮಾದಲ್ಲಿ ಬಾಲಕನದ್ದು ಬಹಳ ಪ್ರಮುಖ ಪಾತ್ರ ಎಂಬುದೇನೋ ಪೋಸ್ಟರ್‌ ಹಾಗೂ ಟ್ರೇಲರ್‌ಗಳಿಂದ ಗೊತ್ತಾಗುತ್ತಿದೆ. ಆದರೆ ಆ ಬಾಲಕ ಯಾರು?

  'ರಾಬರ್ಟ್' ಸಿನಿಮಾ ಚಿತ್ರೀಕರಣಕ್ಕೆ ಕಿಶನ್ ಮಾಡಿದ ಸಹಾಯವನ್ನು ಹೊಗಳಿದ ದರ್ಶನ್

  'ರಾಬರ್ಟ್‌' ಸಿನಿಮಾದಲ್ಲಿ ಆ ಬಾಲಕನ ಪಾತ್ರ ಅತ್ಯಂತ ಮಹತ್ವದ್ದು. ಕತೆಯು ಆ ಬಾಲಕನನ್ನು ಕೇಂದ್ರದಲ್ಲಿಟ್ಟುಕೊಂಡೆ ಸುತ್ತುಹೊಡೆಯುತ್ತದೆ. ಕತೆಯ ಕೇಂದ್ರವೇ ಆ ಬಾಲಕ ಹಾಗಾಗಿ ಒಳ್ಳೆಯ ನಟನೂ ಆಗಿರುವ, ಮುದ್ದಾಗಿಯೂ ಕಾಣುವ ಬಾಲಕನಿಗಾಗಿ ಚಿತ್ರತಂಡ ಹುಡುಕಿದಾಗ ಸಿಕ್ಕವನೇ ಈ ಪುಟ್ಟ ಚೋರ ಜೇಸನ್ ಡಿಸೋಜಾ.

   ಸಲ್ಮಾನ್, ಅಕ್ಷಯ್, ದೀಪಿಕಾ ಜೊತೆ ನಟನೆ

  ಸಲ್ಮಾನ್, ಅಕ್ಷಯ್, ದೀಪಿಕಾ ಜೊತೆ ನಟನೆ

  ಜೇಸನ್ ಡಿಸೋಜಾ ಗೆ ಅಭಿನಯ ಹೊಸದಲ್ಲ. ಈಗಾಗಲೇ ಬಾಲಿವುಡ್‌ನ ಕೆಲವಾರು ಸಿನಿಮಾಗಳಲ್ಲಿ ನಟಿಸಿದ್ದಾನೆ ಜೇಸನ್. ಸಲ್ಮಾನ್ ಖಾನ್, ರಣವೀರ್ ಸಿಂಗ್-ದೀಪಿಕಾ ಪಡುಕೋಣೆ. ಅಕ್ಷಯ್ ಕುಮಾರ್, ಸಿದ್ಧಾರ್ಥ್, ಅಜಯ್ ದೇವಗನ್ ಇನ್ನೂ ಹಲವಾರು ಬಾಲಿವುಡ್ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾನೆ ಜೇಸನ್.

  ಹೊಸ ನಿರ್ದೇಶಕರ ಕನಸು ಭಗ್ನಗೊಳಿಸಿದ ನಟ ದರ್ಶನ್ ನಿರ್ಧಾರ!

   100 ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟನೆ

  100 ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟನೆ

  9 ವರ್ಷ ವಯಸ್ಸಿನ ಈ ಪುಟ್ಟ ಬಾಲಕ ಈ ವರೆಗೆ ಸುಮಾರು 100 ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿದ್ದಾನೆ. ಬಾಲಿವುಡ್ ನಿರ್ದೇಶಕರಿಗೆ ಅಚ್ಚು-ಮೆಚ್ಚಿನ ಬಾಲ ನಟ ಜೇಸನ್ ಡಿಸೋಜಾ. ಬಾಲಿವುಡ್‌ನ ಪ್ರಸ್ತುತ ಅತ್ಯಂತ ಬ್ಯುಸಿ ಬಾಲನಟನೂ ಹೌದು.

   'ರಾಬರ್ಟ್' ಸಿನಿಮಾದಲ್ಲಿ ಬಾಲಕನ ಪಾತ್ರ ಮಹತ್ವದ್ದು

  'ರಾಬರ್ಟ್' ಸಿನಿಮಾದಲ್ಲಿ ಬಾಲಕನ ಪಾತ್ರ ಮಹತ್ವದ್ದು

  'ರಾಬರ್ಟ್' ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ಈ ಪುಟ್ಟ ಬಾಲಕ ನಟಿಸಿದ್ದಾನೆ. ಬಾಲಕನ ಪಾತ್ರ ಬಹಳ ಮಹತ್ವದ್ದು ಹಾಗೂ ಸಾಕಷ್ಟು ಭಾವನಾತ್ಮಕ ದೃಶ್ಯಗಳನ್ನು ಸಿನಿಮಾದಲ್ಲಿ ಒಳಗೊಂಡಿರುವ ಪಾತ್ರ, ಹಾಗಾಗಿ ಒಳ್ಳೆಯ ಪ್ರತಿಭಾವಂತ ನಟ ಹಾಗೂ ನೋಡಲೂ ಸಹ ಮುದ್ದಾಗಿರುವ ಬಾಲಕನಿಗಾಗಿ ನಿರ್ದೇಶಕ ತರುಣ್ ಸುಧೀರ್ ಹುಡುಕಾಡಿ ಕೊನೆಗೆ ಜೇಸನ್‌ಗೆ ಆ ಪಾತ್ರ ನೀಡಲಾಯಿತಂತೆ.

  ಸೆಂಟಿಮೆಂಟ್,ಫ್ರೆಂಡ್ ಶಿಪ್,ಫೈಟಿಂಗ್ ಎಲ್ಲವೂ ಸೂಪರ್ ಎಂದ ಪ್ರೇಕ್ಷಕ | Roberrt Public Opinion | Darshan |Tharun
   ಮಾರ್ಚ್ 11 ಕ್ಕೆ ಬಿಡುಗಡೆ

  ಮಾರ್ಚ್ 11 ಕ್ಕೆ ಬಿಡುಗಡೆ

  'ರಾಬರ್ಟ್' ಸಿನಿಮಾವು ಮಾರ್ಚ್ 11 ರಂದು ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ದರ್ಶನ್ ಜೊತೆಗೆ ಕನ್ನಡತಿ ಆಶಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಇದರ ಜೊತೆಗೆ ಜಗಪತಿ ಬಾಬು, ರವಿಶಂಕರ್, ನಟ ಚಿಕ್ಕಣ್ಣ, ಧರ್ಮಣ್ಣ ಅವರುಗಳು ಸಿನಿಮಾದಲ್ಲಿದ್ದಾರೆ. ತರುಣ್ ಸುಧೀರ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಉಮಾಪತಿ ಶ್ರೀನಿವಾಸ್ ನಿರ್ಮಿಸಿದ್ದಾರೆ.

  English summary
  Who is that little boy who acted along side with Darshan in movie roberrt. His name is Jason D'Souza.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X