Don't Miss!
- Sports
ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಈ ತಂಡವೇ ಗೆಲ್ಲಲಿದೆ ಎಂದ ಮೈಕಲ್ ವಾನ್
- News
Breaking; ಕೋಲಾರ ಕ್ಷೇತ್ರವೇ ಏಕೆ, ಸಿದ್ದರಾಮಯ್ಯ ಪ್ರತಿಕ್ರಿಯೆ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಜ್‌ಕುಮಾರ್ ಮೊದಲ ಸಿನಿಮಾ ಹಾಡು ಹಾಡುವಂತೆ ಮಾಡಿದ್ದು ಇವರೇ
ರಾಜ್‌ಕುಮಾರ್ ಶರೀರವಾಗಿದ್ದಾರೆ ಅವರ ಶಾರೀರವಾಗಿದ್ದಿದ್ದು ಪಿ.ಬಿ.ಶ್ರೀನಿವಾಸ್. ಎಷ್ಟೋ ವರ್ಷಗಳ ಕಾಲ ಇವರಿಬ್ಬರ ಜೋಡಿ ಕೊಟ್ಯಂತರ ಜನರ ಕಣ್ಣ್-ಕರ್ಣ ತಣಿಸಿತ್ತು.
Recommended Video
ಆದರೆ ಸಂಪತ್ತಿಗೆ ಸವಾಲ್ ಸಿನಿಮಾದಲ್ಲಿ ರಾಜ್‌ಕುಮಾರ್ ಅವರು ಮೊದಲ ಬಾರಿಗೆ ಹಾಡು ಹಾಡಿದರು. ಅಲ್ಲಿಂದ ನಂತರ ಹಲವು ಸಿನಿಮಾಗಳಲ್ಲಿ, ತಮ್ಮ ಹಾಡಿಗೆ ತಾವೇ ದನಿಯಾದರು. ಆ ಮೂಲಕ ಮುಂದುವರೆದು ಹಾಡಿಗಾಗಿಯೇ ರಾಷ್ಟ್ರಪ್ರಶಸ್ತಿ ರಾಜ್‌ಕುಮಾರ್ ಅವರಿಗೆ ದೊರಕುವಂತೆ ಆಗಿದ್ದು ಇತಿಹಾಸ.
ಆದರೆ ಸಿನಿಮಾ ರಂಗಕ್ಕೆ ಪ್ರವೇಶಿಸಿ 20 ವರ್ಷಗಳ ಸಿನಿಮಾಕ್ಕಾಗಿ ಹಾಡದೇ ಇದ್ದ ಅಣ್ಣಾವ್ರು ಮೊದಲ ಬಾರಿಗೆ ಸಿನಿಮಾ ಹಾಡು ಹಾಡುವಂತೆ ಮಾಡಿದ್ದು ಈಗ ದಂತಕತೆಯಾಗಿರುವ, ಆಗ ಸಾಮಾನ್ಯ ಅಸಿಸ್ಟೆಂಟ್ ಆಗಿದ್ದ ಒಬ್ಬ ಸಂಗೀತ ನಿರ್ದೇಶಕ.
ಆ ಸಂಗೀತ ನಿರ್ದೇಶಕ ಯಾರು? ರಾಜ್‌ಕುಮಾರ್ ಅವರು ಮೊದಲ ಹಾಡು ಹಾಡುವಂತೆ ಹೇಗೆ ಅವರು ಪ್ರೇರೇಪಿಸಿದರು? ತಿಳಿಯಲು ಮುಂದೆ ಓದಿ...

ಜಿ.ಕೆ.ವೆಂಕಟೇಶ್ ಬಳಿ ಅಸಿಸ್ಟೆಂಟ್ ಆಗಿದ್ದ ಇಳಯರಾಜ
ಸಂಪತ್ತಿಗೆ ಸವಾಲ್ ಸಿನಿಮಾಕ್ಕೆ ಜಿ.ಕೆ.ವೆಂಕಟೇಶ್ ಅವರು ಸಂಗೀತ ನಿರ್ದೇಶಕರಾಗಿದ್ದರು. ಅವರ ಬಳಿ ಅಸಿಸ್ಟೆಂಟ್ ಆಗಿದ್ದವರು, ಸಂಗೀತ ಮಾಂತ್ರಿಕ ಇಳಯರಾಜ. ಅವರೇ ರಾಜ್‌ಕುಮಾರ್ ಮೊದಲ ಸಿನಿಮಾ ಹಾಡು ಹಾಡಲು ಪ್ರೇರೇಪಿಸಿದ್ದಂತೆ. ಆ ಸಂದರ್ಭವನ್ನು ಅವರೇ ವಿವರಿಸಿದ್ದಾರೆ.

ಹೊಸ ಧ್ವನಿಯೇ ಬೇಕೆಂದಿದ್ದರಂತೆ ಇಳಯರಾಜ
ಕನ್ನಡ ಮಾಧ್ಯಮಕ್ಕೆ ಕನ್ನಡದಲ್ಲಿಯೇ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದ ಇಳೆಯರಾಜ, ಯಾರೇ ಕೂಗಾಡಲಿ ಹಾಡು ತುಂಬಾ ಗಟ್ಟಿಯಾಗಿದೆ, ಹೊಸತನ ಹಾಡಿನಲ್ಲಿದೆ, ಇದಕ್ಕೆ ಹೊಸ ಧ್ವನಿಯೇ ಬೇಕು, ಈಗಾಗಲೇ ಇರುವ ಹಾಡುಗಾರರು ಹಾಡುವುದು ಬೇಡ ಅಣ್ಣ, ಎಂದು ಜಿ.ಕೆ.ವೆಂಕಟೇಶ್ ಅವರ ಬಳಿ ಹೇಳಿದರಂತೆ ಇಳಯರಾಜ.

ರಾಜ್‌ಕುಮಾರ್ ಹಾಡಬಲ್ಲರು ಎಂದಿದ್ದರು ಜಿ.ಕೆ.ವೆಂಕಟೇಶ್
ಇದಕ್ಕೆ ಪ್ರತಿಕ್ರಿಯಿಸಿದ ವೆಂಕಟೇಶ್, ಮುತ್ತುರಾಜನೇ (ರಾಜ್‌ಕುಮಾರ್) ಹಾಡಲಿ ಎಂದರಂತೆ. ರಾಜ್‌ಕುಮಾರ್ ಹಾಡುತ್ತಾರೆ ಎಂಬುದು ಆಗ ಇಳೆಯರಾಜಾಗೆ ಸಹ ಗೊತ್ತಿರಲಿಲ್ಲವಂತೆ. ಆಕ ಜಿ.ಕೆ.ವೆಂಕಟೇಶ್ ಅವರೇ ಹೇಳಿದರಂತೆ, ರಾಜ್‌ಕುಮಾರ್ ನಾಟಕಗಳಿಂದ ಬಂದವರು, ಅವರದ್ದು ಅದ್ಭುತ ಶಾರೀರ, ಅವರು ಹಾಡಬಲ್ಲರು, ಅವರಿಗೆ ಹೋಗಿ ಹೇಳು ಎಂದರಂತೆ.

ರಾಜ್‌ಕುಮಾರ್ ಮೊದಲಿಗೆ ಒಪ್ಪಿರಲಿಲ್ಲ
ಅದರಂತೆ ರಾಜ್‌ಕುಮಾರ್ ಬಳಿ ತೆರಳಿದ ಇಳಯರಾಜ, 'ಯಾರೇ ಕೂಗಾಡಲಿ ಹಾಡನ್ನು ನೀವು ಹಾಡಬೇಕು' ಎಂದರಂತೆ. ಅದಕ್ಕೆ ಒಪ್ಪದ ರಾಜ್‌ಕುಮಾರ್, ನನ್ನ ಹಾಡುಗಳನ್ನು ಪಿ.ಬಿ.ಶ್ರೀನಿವಾಸ್ ಹಾಡುತ್ತಿದ್ದಾರೆ, ಈಗ ನಾನು ಹಾಡಿದರೆ ಅವರ ಕೆಲಸಕ್ಕೆ ನಾನು ಅಡ್ಡಗಾಲು ಹಾಕಿದ ಹಾಗೆ ಆಗುತ್ತದೆ, ನಾನು ಹಾಡುವುದು ಸರಿಯಲ್ಲ' ಎಂದರಂತೆ ರಾಜ್‌ಕುಮಾರ್.

ಪಟ್ಟು ಬಿಡದ ಇಳಯರಾಜ
ಆದರೆ ಪಟ್ಟು ಬಿಡದ ಇಳಯರಾಜ, 'ಇಲ್ಲ ಅಣ್ಣ, ಪಿ.ಬಿ.ಶ್ರೀನಿವಾಸ್ ಮೃದು ದ್ವನಿಯ ಗಾಯಕ, ಈ ಹಾಡು ಚೈತನ್ಯ ತುಂಬಿದ, ಗಟ್ಟಿ ಹಾಡು, ಇದಕ್ಕೆ ಹೊಸ ದನಿಯೇ ಬೇಕು, ನೀವೇ ಹಾಡಬೇಕು' ಎಂದು ಪೂರ್ತಿ ವಿವರಿಸಿದಾಗ ರಾಜ್‌ಕುಮಾರ್ ಅವರು ಒಲ್ಲದ ಮನಸ್ಸಿನಿಂದಲೇ ಹಾಡಲು ಒಪ್ಪಿಕೊಂಡರಂತೆ.

ರಾಜ್‌ಕುಮಾರ್ ಜೊತೆ ನೆನಪು ಮುಲುಕು
ಇಳೆಯರಾಜ ಅವರು ಕನ್ನಡದ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರಾಜ್‌ಕುಮಾರ್ ನೆನಪುಗಳನ್ನು ಮೇಲಿನಂತೆ ಮೆಲುಕು ಹಾಕಿದರು. ಅವರನ್ನು ತಾವು ಅಣ್ಣಾ ಎಂದೇ ಸಂಭೋಧಿಸುತ್ತಿದ್ದುದಾಗಿ ಹೇಳಿದ ಇಳೆಯರಾಜ. ಅವರು ಎಲ್ಲರಿಗೂ ಅಣ್ಣನಂತೆಯೇ ಇದ್ದರು ಎಂದರು.