»   » 'ಸುದೀಪ್ ಯಾರು.?' ಎಂದು ಕೇಳಿದ ಮಹಾನುಭಾವ 'ಕ್ರಿಕೆಟಿಗ' ಈತ.!

'ಸುದೀಪ್ ಯಾರು.?' ಎಂದು ಕೇಳಿದ ಮಹಾನುಭಾವ 'ಕ್ರಿಕೆಟಿಗ' ಈತ.!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ..? ಸ್ಯಾಂಡಲ್ ವುಡ್ ನಲ್ಲಿ ಅಭಿಮಾನಿಗಳಿಂದ 'ಕಿಚ್ಚ', 'ಅಭಿನಯ ಚಕ್ರವರ್ತಿ', 'ನಲ್ಲ' ಅಂತೆಲ್ಲಾ ಕರೆಯಿಸಿಕೊಳ್ಳುವ ಸುದೀಪ್ ಬರೀ ಕನ್ನಡ ಚಿತ್ರರಂಗದಲ್ಲಿ ಮಾತ್ರ ಅಲ್ಲ.. ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ನಲ್ಲೂ ಚಿರಪರಿಚಿತ.

ನಟನೆ ಜೊತೆಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲೂ ಬ್ಯಾಟ್ ಬೀಸಿರುವ ಕಿಚ್ಚ 'ಕ್ರಿಕೆಟ್ ಲೋಕ'ದಲ್ಲೂ ಜನಪ್ರಿಯ ವ್ಯಕ್ತಿ.[ಇಂಥ ಅಭಿಮಾನಿಗಳಿದ್ರೆ, ಕಿಚ್ಚನ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ.!]

ಇಂತಿಪ್ಪ ಸುದೀಪ್ ರವರನ್ನ 'ಯಾರು?' ಎಂದು ಓರ್ವ ಕ್ರಿಕೆಟಿಗ ಪ್ರಶ್ನಿಸಿದ್ದಾರೆ. ಸುದೀಪ್ ಬಗ್ಗೆ ಗೊತ್ತಿಲ್ಲದ 'ಆ' ಕ್ರಿಕೆಟಿಗ ಯಾರು ಎಂದು ತಿಳಿಯುವ ಕುತೂಹಲ ಇದ್ದರೆ, ಈ ವರದಿಯನ್ನ ಪೂರ್ತಿ ಓದಿರಿ....

ಲಂಡನ್ ನಲ್ಲಿ ಸುದೀಪ್

'ಕಾರ್ಪೊರೇಟ್ ಕ್ರಿಕೆಟ್ ಡೇ' ಪ್ರಯುಕ್ತ ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ಕಿಚ್ಚ ಸುದೀಪ್ ಕ್ರಿಕೆಟ್ ಆಡುತ್ತಿರುವ ಸಂಗತಿ ಕುರಿತು ನಾವೇ ನಿಮಗೆ ತಿಳಿಸಿದ್ವಿ. ಈ ಸರಣಿ ಆಟದ ಕುರಿತ ಎಲ್ಲ ಅಪ್ ಡೇಟ್ ಗಳನ್ನ ಸುದೀಪ್ ತಮ್ಮ ಟ್ವಿಟ್ಟರ್ ಖಾತೆ ಮೂಲಕ ನೀಡುತ್ತಿದ್ದರು. ಹೀಗಿರುವಾಗಲೇ, ಒಂದು ಫೋಟೋ ಸುದೀಪ್ ಟ್ವಿಟ್ಟರ್ ಅಕೌಂಟ್ ನಿಂದ ಟ್ವೀಟ್ ಆಯ್ತು...

ಸುದೀಪ್ ಅಪ್ ಲೋಡ್ ಮಾಡಿದ ಫೋಟೋ ಇದು..

'ಕಾರ್ಪೊರೇಟ್ ಕ್ರಿಕೆಟ್ ಡೇ' ಅಂಗವಾಗಿ ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಟೂರ್ನಮೆಂಟ್ ನಲ್ಲಿ Deloitte ತಂಡದ ಪರವಾಗಿ ಆಡಿದ ಕ್ರಿಕೆಟಿಗ Alex Tudor ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಸುದೀಪ್ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದರು.

ಅಲೆಕ್ಸ್ ಬಗ್ಗೆ ಸುದೀಪ್ ಒಳ್ಳೆಯ ಮಾತುಗಳನ್ನೇ ಆಡಿದ್ದರು.!

ಫೋಟೋ ಸಮೇತ ಮಾಡಿದ ಟ್ವೀಟ್ ನಲ್ಲಿ, ''Deloitte ತಂಡದ ಪರವಾಗಿ ಆಡಿದ Alex Tudor ಅತ್ಯುತ್ತಮ ಕ್ರಿಕೆಟಿಗ'' ಎಂದು ಸುದೀಪ್ ಹೇಳಿದ್ದರು.

ಅಲೆಕ್ಸ್ ಮಾಡಿದ ಟ್ವೀಟ್ ಏನು ಗೊತ್ತಾ.?

ಸುದೀಪ್ ಮಾಡುವ ಈ ಟ್ವೀಟ್ ಗೂ ಮುನ್ನವೇ ಅಲೆಕ್ಸ್ ಒಂದು ಟ್ವೀಟ್ ಮಾಡಿದ್ದರು. ಸುದೀಪ್ ಜೊತೆಗಿನ ಸೆಲ್ಫಿ ಸಮೇತ, ''ಈ ಬಾಲಿವುಡ್ ಸ್ಟಾರ್ ಯಾರು ಎಂದು ನನ್ನ ಭಾರತೀಯ ಅಭಿಮಾನಿಗಳಿಗೆ ಗೊತ್ತಾ.?'' ಎಂದು ಅಲೆಕ್ಸ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು.

ಸುದೀಪ್ ಯಾರು ಅನ್ನೋದೇ ಅವರಿಗೆ ಗೊತ್ತಿರಲಿಲ್ಲ.!

ಅಷ್ಟಕ್ಕೂ ಸುದೀಪ್ ಯಾರು ಎನ್ನುವುದೇ ಕ್ರಿಕೆಟಿಗ ಅಲೆಕ್ಸ್ ಗೆ ಗೊತ್ತಿರಲಿಲ್ಲ. ಟ್ವಿಟ್ಟರ್ ನಲ್ಲಿ ಸುದೀಪ್ ಕುರಿತು ಪ್ರಶ್ನೆ ಕೇಳುತ್ತಿದ್ದಂತೆಯೇ, ಸಿನಿಪ್ರಿಯರು ಸುದೀಪ್ ರವರನ್ನ ಬಣ್ಣಿಸಲು ಆರಂಭಿಸಿದರು.

ಜೆಂಟಲ್ ಮ್ಯಾನ್ ಸುದೀಪ್.!

''ಫೋಟೋ ತೆಗೆದುಕೊಂಡ ಬಳಿಕ ಅವರು ಯಾರು ಎಂದು ಯಾಕೆ ಕೇಳುತ್ತಿದ್ದೀರಾ.? ದಕ್ಷಿಣ ಭಾರತದಲ್ಲಿ ಸುದೀಪ್ ದೊಡ್ಡ ನಟ'' ಎಂದು ಅಭಿಮಾನಿಯೊಬ್ಬರು ಹೇಳಿದಾಗ, ''ನನಗೆ ಸುದೀಪ್ ಯಾರು ಎಂದು ಗೊತ್ತಿರಲಿಲ್ಲ. ಆದ್ರೆ, ಅವರು ಜೆಂಟಲ್ ಮ್ಯಾನ್'' ಎಂದು ಅಲೆಕ್ಸ್ ಪ್ರತಿಕ್ರಿಯೆ ನೀಡಿದ್ದಾರೆ.

ಸಂತಸ ವ್ಯಕ್ತಪಡಿಸಿದ ಅಲೆಕ್ಸ್

ಸುದೀಪ್ ರವರನ್ನ ಭೇಟಿ ಮಾಡಿದ್ದಕ್ಕೆ ಅಲೆಕ್ಸ್ ಸಂತಸ ವ್ಯಕ್ತಪಡಿಸಿರುವುದು ಹೀಗೆ...

ಟ್ರೆಂಡಿಂಗ್ ಆಗುತ್ತಿದ್ದಾರೆ ಅಲೆಕ್ಸ್

'ಸುದೀಪ್ ಯಾರು.?' ಎಂದು ಅಲೆಕ್ಸ್ ಪ್ರಶ್ನೆ ಕೇಳುತ್ತಿದ್ದಂತೆಯೇ 'ಅಲೆಕ್ಸ್' ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆದರು. ಅದಕ್ಕೆ ಸಾಕ್ಷಿ ಇಲ್ಲಿದೆ...

ಲಂಡನ್ ಗೆ ಬಂದಾಗ ತಿಳಿಸಿ....

ಲಂಡನ್ ನಲ್ಲಿ ಉತ್ತಮ ಆತಿಥ್ಯ ನೀಡಿದ ಅಲೆಕ್ಸ್ ಗೆ ಸುದೀಪ್ ಧನ್ಯವಾದ ಕೂಡ ತಿಳಿಸಿದ್ದಾರೆ. ಅದಕ್ಕೆ ''ಮುಂದಿನ ಬಾರಿ ಲಂಡನ್ ಗೆ ಬಂದಾಗ ತಿಳಿಸಿ'' ಎಂದು ಅಲೆಕ್ಸ್ ಪ್ರತಿಕ್ರಿಯೆ ನೀಡಿದ್ದಾರೆ.

English summary
'Who this Bollywood star is' asks Alex Tudor about Kiccha Sudeep.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X