For Quick Alerts
ALLOW NOTIFICATIONS
For Daily Alerts

ಅಂಬಿ ಅಣ್ಣನ ಮಗ ಮದನ್ ಹೇಳಿದ್ದರಲ್ಲಿ ಸತ್ಯವಿತ್ತಾ?

By ಜೀವನರಸಿಕ

Next »

« Previous

ಆಸ್ಪತ್ರೆಗೆ ದಾಖಲಾದ ಮಾರನೇಯ ದಿನ ಅಂಬಿಯನ್ನ ನೋಡೋಕೆ ಬಂದ ನಟ ನಟಿಯರು ರಾಜಕಾರಣಿಗಳು; ಅಂಬಿ ಆರೋಗ್ಯ ಸುಧಾರಿಸ್ತಿದೆ. ಆಸ್ಪತ್ರೆ ಬೇಡ ಮನೆಗೆ ಹೋಗೋಣ ಅಂತ ಅಂಬಿ ಹೇಳ್ತಿದ್ದಾರೆ ಅನ್ನೋ ಮಾತನ್ನ ಹೇಳಿದ್ರು.

ಆದರೆ ಅಂಬಿಗೆ ಅಷ್ಟೆಲ್ಲಾ ಮಾತನಾಡೋಕೆ ಸಾಧ್ಯ ಆಗ್ತಿತ್ತಾ? ಸಾಧ್ಯ ಆಗಿದ್ದಿದ್ದಿದ್ರೆ ಬರಬರುತ್ತಾ ಯಾಕೆ ಅಂಬಿ ಉಸಿರಾಟವನ್ನೇ ಮಾಡೋಕಾಗದ ಸ್ಥಿತಿ ತಲುಪಿದ್ರು. ಹಾಗಾದ್ರೆ ವಿಕ್ರಮ್ ಆಸ್ಪತ್ರೆ ವೈದ್ಯರ ಚಿಕಿತ್ಸೆ ನಿಜಕ್ಕೂ ಪರಿಣಾಮಕಾರಿಯಾಗಿತ್ತಾ? ಇಲ್ಲದಿದ್ರೆ ಅಂಬಿ ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕ ಪಡಬಾರದು ಅನ್ನೋ ಕಾರಣಕ್ಕೆ ಸುಮಲತಾ ಅವರೇ ಸುಳ್ಳು ಹೇಳಿದ್ರಾ?

ಭಾನುವಾರ (ಫೆ.23) ಅಂಬಿ ಆರೋಗ್ಯದ ಬಗ್ಗೆ ಸುಮಲತಾ ಮಾತ್ನಾಡ್ತಾರೆ ಅಂತ ಕಾದಿದ್ದ ಪತ್ರಕರ್ತರಿಗೆ ಮೊದಲು ಮಾತನಾಡಿದ್ದು ಅಂಬಿ ಅಣ್ಣನ ಮಗ ಮದನ್. ಮದನ್ ಮಾತಿನ ಪ್ರಕಾರ: ಅಂಬಿಯವ್ರನ್ನ ನೋಡಿಕೊಂಡು ಬಂದೆ. ಅವ್ರು ರೆಸ್ಪಾನ್ಸ್ ಮಾಡ್ತಿದ್ದಾರೆ. ಆದ್ರೆ ಮೂರನೇ ದಿನ ಕೃತಕ ಉಸಿರಾಟದಲ್ಲಿ ಐಸಿಯುನಲ್ಲಿದ್ದ ಅಂಬಿ ಮಾತನಾಡೋಕೆ ರೆಸ್ಪಾನ್ಸ್ ಮಾಡೋಕೆ ಸಾಧ್ಯಾನೆ ಇರಲಿಲ್ಲ.

ಅಂಬಿಯನ್ನ ಅರೆಪ್ರಜ್ಞಾವಸ್ಥೆಗೆ ತಂದು ಈ ಚಿಕಿತ್ಸೆ ನೀಡಲಾಗ್ತಿತ್ತು. ಇಲ್ಲಿ ಮದನ್ ಹೇಳಿದ್ದು ಕೂಡ ಸತ್ಯವಲ್ಲ. ಆ ನಂತರ ಮಧ್ಯಮದವ್ರ ಒತ್ತಾಯಕ್ಕೆ ಹೊರ ಬಂದ ಸುಮಲತಾ ನೋವಿನಿಂದ ದೇವರಲ್ಲಿ ಪ್ರಾರ್ಥಿಸಿದ್ದು ನೋಡಿದ್ರೆ ಅಂಬಿಯ ಒಳಗಿನ ಪರಿಸ್ಥಿತಿಯನ್ನ ಆಸ್ಪತ್ರೆಯವ್ರು ಮರೆಮಾಚ್ತಿದ್ದಾರೆ ಅನ್ನೋದು ಸ್ಪಷ್ಟವಾಗಿತ್ತು.

Next »

« Previous

English summary
What actually happened to Rebel Star Amabareesh when he undergoes treatment at Vikram hospital, Bangalore. Ever wonder what goes on behind closed doors at Vikram Hospital. Here is an inside story on Ambareesh healthc condition.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X